Leviticus 27 - WBT (Kannada)
1 And the LORD spoke to Moses, saying,ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ --
2 Speak to the children of Israel, and say to them, When a man shall make a singular vow, the persons shall be for the LORD, by thy estimation.ಇಸ್ರಾಯೇಲ್ ಮಕ್ಕಳ ಸಂಗಡ ನೀನು ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ--ಒಬ್ಬನು ಪ್ರತ್ಯೇಕವಾದ ಪ್ರಮಾ ಣವನ್ನು ಮಾಡಿಕೊಂಡರೆ ನೀನು ನೇಮಿಸಿದ ಕ್ರಯದ ಪ್ರಕಾರ ಜನರು ಕರ್ತನಿಗೆ ಮಾಡಬೇಕು.
3 And thy estimation shall be, of the male from twenty years old even to sixty years old, even thy estimation shall be fifty shekels of silver, after the shekel of the sanctuary.ನೀನು ನೇಮಿಸಬೇಕಾದ ಕ್ರಯವು ಯಾವದಂದರೆ--ಇಪ್ಪತ್ತು ವರುಷದವನು ಮೊದಲುಗೊಂಡು ಅರವತ್ತು ವರುಷ ದವನ ವರೆಗೆ ನೀನು ನೇಮಿಸುವ ಕ್ರಯವು ಪರಿಶುದ್ಧ ಶೇಕೆಲಿನ ಮೇರೆಗೆ ಐವತ್ತು ಬೆಳ್ಳಿಯ ಶೇಕೆಲುಗಳಾಗಿರ ಬೇಕು.
4 And if it shall be a female, then thy estimation shall be thirty shekels.ಹೆಣ್ಣಾಗಿದ್ದರೆ ನೀನು ನೇಮಿಸುವ ಕ್ರಯವು ಮೂವತ್ತು ಶೇಕೆಲುಗಳಾಗಿರಬೇಕು.
5 And if it shall be from five years old even to twenty years old, then thy estimation shall be of the male twenty shekels, and for the female ten shekels.ಐದು ವರುಷ ದವನು ಮೊದಲುಗೊಂಡು ಇಪ್ಪತ್ತು ವರುಷದವನ ವರೆಗೆ ಗಂಡಸಿನ ಕ್ರಯವು ಎಪ್ಪತ್ತು ಶೇಕೆಲುಗಳೂ ಹೆಂಗಸಿನ ಕ್ರಯವು ಹತ್ತು ಶೇಕೆಲುಗಳೂ ಆಗಿರಬೇಕು.
6 And if it shall be from a month old even to five years old, then thy estimation shall be of the male five shekels of silver, and for the female thy estimation shall be three shekels of silver.ಒಂದು ತಿಂಗಳಿನವನ ಮೊದಲುಗೊಂಡು ಐದು ವರುಷದವನ ವರೆಗೆ ಗಂಡಸಿನ ಕ್ರಯವು ಐದು ಬೆಳ್ಳಿಯ ಶೇಕೆಲುಗಳೂ ಹೆಣ್ಣಿನ ಕ್ರಯವು ಮೂರು ಬೆಳ್ಳಿಯ ಶೇಕೆಲುಗಳೂ ಆಗಿರಬೇಕು.
7 And if it shall be from sixty years old and above; if a male, then thy estimation shall be fifteen shekels, and for the female ten shekels.ಅರವತ್ತು ವರುಷವು ಅದಕ್ಕೆ ಹೆಚ್ಚಾದ ಪ್ರಾಯವುಳ್ಳ ಗಂಡಸಾಗಿದ್ದರೆ ನೀನು ನೇಮಿಸುವ ಕ್ರಯವು ಹದಿನೈದು ಶೇಕೆಲುಗಳೂ ಹೆಂಗಸಿಗೆ ಹತ್ತು ಶೇಕೆಲುಗಳೂ ಆಗಿರಬೇಕು.
8 But if he shall be poorer than thy estimation, then he shall present himself before the priest, and the priest shall value him: according to his ability that vowed shall the priest value him.ಆದರೆ ನೀನು ನೇಮಿಸಿದ ಕ್ರಯವನ್ನು ಕೂಡ ಕೊಡದಷ್ಟು ಅವನು ಬಡವನಾಗಿದ್ದರೆ ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿ ಸಬೇಕು. ಪ್ರಮಾಣಮಾಡಿದವನ ಸಂಪತ್ತಿಗೆ ಸರಿಯಾಗಿ ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು.
9 And if it shall be a beast of which men bring an offering to the LORD, all that any man giveth of such to the LORD shall be holy.ಮನುಷ್ಯನು ಕರ್ತನಿಗೆ ಅರ್ಪಣೆಗಾಗಿ ತರುವವುಗ ಳಲ್ಲಿ ಅದು ಪಶುವಾಗಿದ್ದರೆ ಅವನು ಕೊಡುವಂತವು ಗಳೆಲ್ಲಾ ಕರ್ತನಿಗೆ ಶುದ್ಧವಾಗಿರುವದು.
10 He shall not alter it, nor change it, a good for a bad, or a bad for a good: and if he shall at all change beast for beast, then it and the exchange of it shall be holy.ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು.
11 And if it shall be any unclean beast, of which they do not offer a sacrifice to the LORD, then he shall present the beast before the priest:ಅದು ಕರ್ತನಿಗೆ ಅರ್ಪಣೆಯಾಗಿ ತಾರದ ಯಾವದಾದರೂ ಅಶುದ್ಧ ಪಶುವಾಗಿದ್ದರೆ ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು.
12 And the priest shall value it, whether it be good or bad: as thou valuest it, who art the priest, so shall it be.ಆಗ ಯಾಜಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಅದಕ್ಕೆ ಕ್ರಯಕಟ್ಟಬೇಕು. ಯಾಜಕನಾದ ನೀನು ಮಾಡಿದ ಕ್ರಯವೇ ಕ್ರಯವಾ ಗಿರಬೇಕು.
13 But if he will at all redeem it, then he shall add a fifth part of it to thy estimation.ಅದನ್ನು ಹೇಗಾದರೂ ವಿಮೋಚಿಸ ಬೇಕೆಂದಿದ್ದರೆ ನೀನು ಮಾಡಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು.
14 And when a man shall sanctify his house to be holy to the LORD, then the priest shall estimate it, whether it is good or bad: as the priest shall estimate it, so shall it stand.ಒಬ್ಬನು ತನ್ನ ಮನೆಯನ್ನು ಕರ್ತನಿಗೆ ಪರಿಶುದ್ಧ ವಾಗಿರಲೆಂದು ಅದನ್ನು ಪರಿಶುದ್ಧ ಮಾಡಿದರೆ ಯಾಜ ಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಕ್ರಯವನ್ನು ಕಟ್ಟಬೇಕು; ಯಾಜಕನು ಕ್ರಯಕಟ್ಟುವ ಪ್ರಕಾರವೇ ಅದು ಸ್ಥಿರವಾಗಿರಬೇಕು.
15 And if he that sanctified it will redeem his house, then he shall add the fifth part of the money of thy estimation to it, and it shall be his.ಆದರೆ ಪರಿಶುದ್ಧ ಮಾಡಿ ದವನು ತನ್ನ ಮನೆಯನ್ನು ವಿಮೋಚಿಸಬೇಕೆಂದಿದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಪಾಲಿನ ಹಣವನ್ನು ಕೊಡಲಿ; ಆಗ ಅದು ಅವನದಾಗಿರುವದು.
16 And if a man shall sanctify to the LORD some part of a field of his possession, then thy estimation shall be according to the seed of it: a homer of barley seed shall be valued at fifty shekels of silver.ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಕರ್ತನಿಗೆ ಪರಿಶುದ್ಧ ಮಾಡಿದರೆ ನೀನು ಅದರ ಬೀಜದ ಪ್ರಕಾರ ಕ್ರಯಕಟ್ಟಬೇಕು; ಜವೆಗೋಧಿಯ ಒಂದು ಓಮೆರಷ್ಟು ಬೀಜಕ್ಕೆ ಐವತ್ತು ಬೆಳ್ಳಿ ಶೇಕೆಲುಗಳು.
17 If he shall sanctify his field from the year of jubilee, according to thy estimation it shall stand.ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು.
18 But if he shall sanctify his field after the jubilee, then the priest shall reckon to him the money according to the years that remain, even to the year of the jubilee, and it shall be abated from thy estimation.ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ಜೂಬಿಲಿ ಸಂವತ್ಸರದ ವರೆಗೆ ಮಿಕ್ಕ ವರುಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ಎಣಿಸಿ ನೀನು ಕಟ್ಟಿದ ಕ್ರಯದಿಂದ ಕಳೆಯ ಬೇಕು.
19 And if he that sanctified the field will in any wise redeem it, then he shall add the fifth part of the money of thy estimation to it, and it shall be assured to him.ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿ ದವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿ ದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅವನು ಕೊಡಬೇಕು; ಆಗ ಅವನಿಗೆ ಅದು ಸ್ಥಿರವಾಗಿರುವದು.
20 And if he will not redeem the field, or if he shall have sold the field to another man, it shall not be redeemed any more.ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ ಅದನ್ನು ಇನ್ನು ಮೇಲೆ ವಿಮೋಚಿಸಕೂಡದು.
21 But the field, when it goeth out in the jubilee, shall be holy to the LORD, as a field devoted: the possession of it shall be the priest's.ಆ ಹೊಲವು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವಾಗ ಪ್ರತ್ಯೇಕಿಸಲ್ಪಟ್ಟು ಒಪ್ಪಿಸಲ್ಪಟ್ಟ ಹೊಲದ ಹಾಗೆ ಕರ್ತನಿಗೆ ಅದು ಪರಿಶುದ್ಧವಾಗಿರಬೇಕು; ಅದರ ಸ್ವಾಸ್ತ್ಯವು ಯಾಜಕ ನಿಗೆ ಸಲ್ಲಬೇಕು.
22 And if a man shall sanctify to the LORD a field which he hath bought, which is not of the fields of his possession;ತನ್ನ ಸ್ವಾಸ್ತ್ಯದ ಹೊಲಗಳಲ್ಲಿ ಸೇರದಂಥ, ತಾನು ಕೊಂಡುಕೊಂಡ ಹೊಲವನ್ನು ಒಬ್ಬನು ಕರ್ತನಿಗೆ ಪರಿಶುದ್ಧ ಮಾಡಿದರೆ
23 Then the priest shall reckon to him the worth of thy estimation, even to the year of the jubilee, and he shall give thy estimation in that day, as a holy thing to the LORD.ಯಾಜಕನು ಅವನಿಗೆ ನೀನು ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದ ವರೆಗೂ ಎಣಿಸಬೇಕು; ಅವರು ಆ ದಿವಸದಲ್ಲಿ ನೀನು ಕಟ್ಟಿದ ಕ್ರಯವನ್ನು ಕರ್ತನಿಗೆ ಪರಿಶುದ್ಧವಾದದ್ದಾಗಿ ಅವನು ಕೊಡಬೇಕು.
24 In the year of the jubilee, the field shall return to him of whom it was bought, even to him to whom the possession of the land belonged.ಜೂಬಿಲಿ ಸಂವತ್ಸರದಲ್ಲಿ ಆ ಹೊಲದ ಭೂಮಿಯ ಸ್ವಾಸ್ತ್ಯವುಂಟಾದವನಿಗೆ ಅಂದರೆ ಇವನು ಯಾವನಿಂದ ಕೊಂಡುಕೊಂಡನೋ ಅವನಿಗೆ ತಿರುಗಿ ಹಿಂದಕ್ಕೆ ಕೊಡಬೇಕು.
25 And all thy estimations shall be according to the shekel of the sanctuary: twenty gerahs shall be the shekel.ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.
26 Only the firstling of the beasts, which should be the LORD'S firstling, no man shall sanctify it; whether ox, or sheep: it is the LORD'S.ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ.
27 And if it shall be of an unclean beast, then he shall redeem it, according to thy estimation, and shall add to it a fifth part of it: or if it shall be not redeemed, then it shall be sold according to thy estimation.ಆದರೆ ಅದು ಅಶುದ್ಧ ಪಶುವಾಗಿದ್ದರೆ ನೀನು ಕ್ರಯ ಕಟ್ಟಿದ ಪ್ರಕಾರ ಅದಕ್ಕೆ ಹೆಚ್ಚಾಗಿ ಐದನೇ ಪಾಲನ್ನು ಕೊಟ್ಟು ಅವನು ಅದನ್ನು ವಿಮೋಚಿಸಬೇಕು; ವಿಮೋಚಿಸದಿದ್ದರೆ ಅದನ್ನು ನೀನು ಕ್ರಯ ಕಟ್ಟಿದ ಪ್ರಕಾರ ಮಾರಬೇಕು.
28 Notwithstanding, no devoted thing that a man shall devote to the LORD of all that he hath, both of man and beast, and of the field of his possession, shall be sold or redeemed: every devoted thing is most holy to the LORD.ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ.
29 None devoted, which shall be devoted by men, shall be redeemed: but shall surely be put to death.ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.
30 And all the tithe of the land, whether of the seed of the land, or of the fruit of the tree, is the LORD'S: it is holy to the LORD.ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.
31 And if a man will at all redeem aught of his tithes, he shall add to it the fifth part of it.ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು.
32 And concerning the tithe of the herd, or of the flock, even of whatever passeth under the rod, the tenth shall be holy to the LORD.ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು.
33 He shall not search whether it is good or bad, neither shall he change it: and if he shall change it at all, then both it and the change of it shall be holy; it shall not be redeemed.ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.
34 These are the commandments which the LORD commanded Moses for the children of Israel in mount Sinai.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.
Kannada Bible