Bible

Leviticus 25 - DBY (Kannada)

1 And Jehovah spoke to Moses in mount Sinai, saying,ತರುವಾಯ ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇ ನಂದರೆ--

2 Speak unto the children of Israel and say unto them, When ye come into the land that I will give you, the land shall celebrate a sabbath to Jehovah.ಇಸ್ರಾಯೇಲ್‌ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.

3 Six years shalt thou sow thy field, and six years shalt thou prune thy vineyard, and gather in the produce thereof,ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.

4 but in the seventh year shall be a sabbath of rest for the land, a sabbath to Jehovah. Thy field shalt thou not sow, and thy vineyard shalt thou not prune.ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.

5 That which springeth up from the scattered seed of thy harvest thou shalt not reap, and the grapes of thine undressed vines thou shalt not gather: a year of rest shall it be for the land.ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು.

6 And the sabbath of the land shall be for food for you, for thee, and for thy bondman, and for thy handmaid, and for thy hired servant, and for him that dwelleth as a sojourner with thee, and for thy cattle,ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ

7 and for the beasts that are in thy land: all the produce thereof shall be for food.ನಿನ್ನ ದನಗಳಿಗೂ ದೇಶದಲ್ಲಿರುವ ಮೃಗಗಳಿಗೂ ಅದರ ಹುಟ್ಟುವಳಿಯೆಲ್ಲಾ ಆಹಾರಕ್ಕಾಗಿ ಇರಬೇಕು.

8 And thou shalt count seven sabbaths of years, seven times seven years; so that the days of the seven sabbaths of years be unto thee forty-nine years.ಹೀಗೆ ಏಳು ವರುಷಗಳನ್ನು ಏಳು ಸಾರಿ ಏಳು ಸಬ್ಬತ್ತಿನ ವರುಷಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು. ಏಳು ಸಬ್ಬತ್ತಿನ ವರುಷಗಳ ಕಾಲಾವಧಿಯು ನಿನಗೆ ನಾಲ್ವತ್ತೊಂಭತ್ತು ವರುಷಗಳಾಗಿರುವವು.

9 Then shalt thou cause the loud sound of the trumpet to go forth in the seventh month, on the tenth of the month; on the day of atonement shall ye cause the trumpet to go forth throughout your land.ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೇ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸ ಬೇಕು; ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.

10 And ye shall hallow the year of the fiftieth year, and proclaim liberty in the land unto all the inhabitants thereof; a [year of] jubilee shall it be unto you, and ye shall return every man unto his possession, and ye shall return every man unto his family;ಐವತ್ತ ನೆಯ ವರುಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೇ ವರುಷದ ವಾರ್ಷಿಕೋತ್ಸವವಾ ಗಿರಬೇಕು; ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಸ್ವಾಸ್ತ್ಯಕ್ಕೂ ಕುಟುಂಬಕ್ಕೂ ಹಿಂದಿರುಗಿ ಹೋಗಬೇಕು.

11 a year of jubilee shall that fiftieth year be unto you: ye shall not sow, neither reap its aftergrowth, nor gather [the fruit of] its undressed vines.ಐವತ್ತನೆಯ ಆ ವರುಷವು ನಿಮಗೆ ಸಂಭ್ರಮವಾಗಿ ರುವದು; ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷೇ ಬಳ್ಳಿಗಳಲ್ಲಿ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಲೂಬಾರದು.

12 For it is the jubilee; it shall be holy unto you; out of the field shall ye eat its produce.ಅದು ಸಂಭ್ರಮವೇ; ಅದು ನಿಮಗೆ ಪರಿಶುದ್ಧವಾಗಿರುವದು; ಹೊಲದೊಳಗಿಂದ ಅದರ ಹುಟ್ಟುವಳಿಯನ್ನು ನೀವು ತಿನ್ನಬೇಕು.

13 In this year of the jubilee ye shall return every man unto his possession.ಸಂಭ್ರಮದ ಈ ವರುಷದಲ್ಲಿ ಪ್ರತಿಯೊಬ್ಬನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.

14 And if ye sell ought unto your neighbour, or buy of your neighbour's hand, ye shall not overreach one another.ನೆರೆಯವನಿಗೆ ಏನಾದರೂ ಮಾರಾಟಮಾಡಿದ್ದರೆ ಇಲ್ಲವೆ ನೆರೆಯವ ನಿಂದ ಕೊಂಡು ಕೊಂಡಿದ್ದರೆ ಒಬ್ಬರಿಗೊಬ್ಬರು ಉಪದ್ರ ಪಡಿಸಿಕೊಳ್ಳಬಾರದು.

15 According to the number of years since the jubilee, thou shalt buy of thy neighbour; according to the number of years of the produce, he shall sell unto thee.ಸಂಭ್ರಮದ ತರುವಾಯ ವರುಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರುಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.

16 According to the greater number of the years, thou shalt increase the price thereof; and according to the fewness of years, thou shalt diminish the price of it; for it is the number of crops that he selleth unto thee.ವರುಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನು ಹೆಚ್ಚಿಸಬೇಕು; ವರುಷಗಳು ಕಡಿಮೆಯಿರುವಂತೆಯೇ ಫಲದ ಬೆಲೆ ಯನ್ನು ಕಡಿಮೆಮಾಡಬೇಕು. ಫಲದ ವರುಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟ ಮಾಡಬೇಕು.

17 And ye shall not oppress one another; but thou shalt fear thy God; for I am Jehovah your God.ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

18 And ye shall do my statutes, and observe mine ordinances and do them: thus shall ye dwell in your land securely.ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.

19 And the land shall yield its fruit, and ye shall eat and be satisfied, and dwell therein securely.ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.

20 And if ye say, What shall we eat in the seventh year? behold, we may not sow, nor gather in our produce;ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.

21 then I will command my blessing upon you in the sixth year, that it may bring forth produce for three years;ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.

22 and ye shall sow in the eighth year, and ye shall eat of the old fruit until the ninth year; until her produce come in, ye shall eat the old.ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.

23 And the land shall not be sold for ever; for the land is mine; for ye are strangers and sojourners with me.ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು, ಯಾಕಂದರೆ ಭೂಮಿಯು ನನ್ನದು; ನನ್ನೊಂದಿಗೆ ನೀವು ಪರಕೀಯರೂ ಪ್ರವಾಸಿಗಳೂ ಆಗಿದ್ದೀರಿ.

24 And in all the land of your possession ye shall grant a redemption for the land.ನಿಮ್ಮ ಸ್ವಾಧೀನದಲ್ಲಿರುವ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.

25 If thy brother grow poor, and sell of his possession, then shall his redeemer, his nearest relation, come and redeem that which his brother sold.ನಿನ್ನ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸ್ವಾಸ್ತ್ಯದಲ್ಲಿ ಸ್ವಲ್ಪವನ್ನು ಮಾರಿದ ಮೇಲೆ ಅವನ ಬಂಧುವಿನಲ್ಲಿ ಯಾರಾದರೂ ಅದನ್ನು ಬಿಡಿಸಿಕೊಳ್ಳು ವದಕ್ಕೆ ಬಂದರೆ ಅವನ ಸಹೋದರನು ಮಾರಿರುವದನ್ನು ಅವನಿಗೆ ಬಿಡುಗಡೆ ಮಾಡಬೇಕು.

26 And if the man have no one having right of redemption, and his hand have acquired and found what sufficeth for its redemption,ಅವನಿಗೆ ಅದನ್ನು ಬಿಡಿಸಿಕೊಳ್ಳುವದಕ್ಕೆ ಯಾರಾದರೂ ಇಲ್ಲದೆ ತಾನೇ ಅದನ್ನು ಬಿಡಿಸಿಕೊಳ್ಳುವ ಸ್ಥಿತಿ ಉಂಟಾದರೆ

27 then shall he reckon the years since the sale thereof, and restore the overplus unto the man to whom he sold it; and so return unto his possession.ಅವನು ಅದನ್ನು ಮಾರಿದ ವರುಷಗಳನ್ನು ಲೆಕ್ಕಿಸಿ ಅದನ್ನು ಮಾರಿದವನಿಗೆ ಮಿಗಿಲಾದದ್ದನ್ನು ಪೂರ್ತಿಮಾಡಿ ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬಹುದು.

28 And if his hand have not found what sufficeth for him to restore it to him, then that which is sold shall remain in the hand of the purchaser, until the year of jubilee; and in the jubilee it shall go out, and he shall return unto his possession.ತಿರಿಗಿ ಸಲ್ಲಿಸುವದಕ್ಕೆ ಅವನಿಗೆ ಆಗದಿದ್ದರೆ ಅವನು ಮಾರಿದ್ದು ಸಂಭ್ರಮದ ವರುಷದ ವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆ ಯಾಗಬೇಕು, ಅವನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.

29 And if any one sell a dwelling-house in a walled city, then he shall have the right of redemption up to the end of the year of the sale thereof; for a full year shall he have the right of redemption.ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದ ಲ್ಲಿರುವ ನಿವಾಸದ ಮನೆಯನ್ನು ಮಾರಿದರೆ ಅದನ್ನು ಮಾರಿದ ಒಂದು ಪೂರ್ಣ ವರುಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು; ಒಂದು ಪೂರ್ಣ ವರುಷ

30 But if it be not redeemed until a whole year is complete, then the house that is in the walled city shall be established for ever to him that bought it, throughout his generations: it shall not go out in the jubilee.ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.

31 But the houses in villages that have no wall round about them shall be reckoned as the fields of the country: they may be redeemed, and they shall go out in the jubilee.ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು. ಅವುಗಳಿಗೆ ಬಿಡುಗಡೆ ಇರಬೇಕು; ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು.

32 But as to the cities of the Levites, the houses in the cities of their possession, the Levites shall have a perpetual right of redemption.ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.

33 And if any one redeem from one of the Levites, then the house that was sold, in the city of his possession, shall go out in the jubilee; for the houses of the cities of the Levites are their possession among the children of Israel.ಲೇವಿಯರಿಂದ ಏನಾದರೂ ಕೊಂಡುಕೊಂಡರೆ ಕೊಂಡುಕೊಂಡ ಮನೆಯೂ ಅವನ ಸ್ವಾಸ್ತ್ಯದ ಪಟ್ಟಣವೂ ಸಂಭ್ರಮದ ವರುಷದಲ್ಲಿ ಬಿಡುಗಡೆಯಾಗ ಬೇಕು; ಲೇವಿಯರ ಪಟ್ಟಣಗಳ ಮನೆಗಳು ಇಸ್ರಾ ಯೇಲ್‌ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಾಗಿವೆ.

34 And the field of the suburbs of their cities shall not be sold; for it is their perpetual possession.ಆದರೆ ಅವರ ಪಟ್ಟಣಗಳಿಗೆ ಸೇರಿರುವ ಉಪ ನಗರಗಳ ಹೊಲವನ್ನು ಮಾರಬಾರದು. ಅದು ಅವರಿಗೆ ನಿತ್ಯವಾದ ಸ್ವಾಸ್ತ್ಯವೇ.

35 And if thy brother grow poor, and he be fallen into decay beside thee, then thou shalt relieve him, [be he] stranger or sojourner, that he may live beside thee.ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.

36 Thou shalt take no usury nor increase of him; and thou shalt fear thy God; that thy brother may live beside thee.ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು.

37 Thy money shalt thou not give him upon usury, nor lend him thy victuals for increase.ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.

38 I am Jehovah your God, who brought you forth out of the land of Egypt, to give you the land of Canaan, to be your God.ನಿನಗೆ ಕಾನಾನ್‌ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.

39 And if thy brother grow poor beside thee, and be sold unto thee, thou shalt not compel him to serve as a bondservant:ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.

40 as a hired servant, as a sojourner, shall he be with thee; until the year of jubilee shall he serve thee.ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.

41 Then shall he depart from thee, he and his children with him, and shall return unto his own family, and unto the possession of his fathers shall he return.ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.

42 For they are my bondmen, whom I brought forth out of the land of Egypt: they shall not be sold as [men] sell bondmen.ಐಗುಪ್ತದೇಶದೊಳಗಿಂದ ನಾನು ಹೊರಗೆ ಕರತಂದ ಅವರು ನನ್ನ ಸೇವಕರಾಗಿದ್ದಾರೆ; ಅವರು ದಾಸರಾಗಿ ಮಾರಲ್ಪಡಬಾರದು.

43 Thou shalt not rule over him with rigour; and thou shalt fear thy God.ನೀನು ಕಠಿಣವಾಗಿ ಅವನ ಮೇಲೆ ದೊರೆತನ ಮಾಡಬಾರದು; ಆದರೆ ನಿನ್ನ ದೇವರಿಗೆ ಭಯಪಡಬೇಕು.

44 And as for thy bondman and thy handmaid whom thou shalt have -- of the nations that are round about you, of them shall ye buy bondmen and handmaids.ನಿನ್ನ ಸುತ್ತಲೂ ಇರುವ ಅನ್ಯಜನರು ನಿನಗೆ ದಾಸದಾಸಿಯ ರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.

45 Moreover of the children of them that dwell as sojourners with you, of them may ye buy, and of their family that is with you, which they beget in your land, and they shall be your possession.ಇದಲ್ಲದೆ ನಿನ್ನ ಮಧ್ಯದೊಳ ಗಿರುವ ಪರಕೀಯ ಮತ್ತು ಪ್ರವಾಸಿಗಳ ಮಕ್ಕಳಿಂದ ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ನಿನ್ನ ದೇಶದೊಳಗೆ ಅವರು ಪಡೆದಿರುವವರಿಂದ ನೀನು ಕೊಂಡುಕೊಳ್ಳಬಹುದು; ಅವರು ನಿನ್ನ ಸ್ವಾಸ್ತ್ಯವಾಗಿ ರುವರು.

46 And ye shall leave them as an inheritance to your children after you, to inherit them as a possession: these may ye make your bondmen for ever; but as for your brethren, the children of Israel, ye shall not rule over one another with rigour.ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿರುವ ಬಾಧ್ಯತೆಯಾಗಿ ತೆಗೆದು ಕೊಳ್ಳಬೇಕು; ಅವರು ನಿರಂತರಕ್ಕೂ ನಿಮ್ಮ ದಾಸ ರಾಗಿರುವರು. ಆದರೆ ಇಸ್ರಾಯೇಲ್‌ ಮಕ್ಕಳಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದೊರೆತನವನ್ನು ಮಾಡಬೇಡಿರಿ.

47 And if a stranger or sojourner become wealthy beside thee, and thy brother beside him grow poor, and sell himself unto the stranger, who is settled by thee, or to a scion of the stranger's family,ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾ ಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯನಾಗಲಿ ಪ್ರವಾಸಿಯಾಗಲಿ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡರೆ

48 after that he is sold there shall be right of redemption for him; one of his brethren may redeem him.ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.

49 Either his uncle or his uncle's son may redeem him, or one of his next relations of his family may redeem him; or if his means be sufficient, he may redeem himself.ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.

50 And he shall reckon with him that bought him from the year that he was sold to him unto the year of jubilee; and the price of his sale shall be according to the number of the years, according to the days of a hired servant shall he be with him.ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.

51 If there are yet many years, according unto them shall he return his redemption [money] out of the money that he was bought for;ಇನ್ನು ಬಹಳ ವರುಷವಿದ್ದರೆ ಅವುಗಳ ಪ್ರಕಾರ ತನ್ನ ಕ್ರಯದ ಹಣದಲ್ಲಿ ವಿಮೋಚಿಸಲ್ಪಡಬೇಕು.

52 and if there remain but few years unto the year of jubilee, then he shall reckon with him; according unto his [remaining] years [of service] shall he give him back his redemption [money].ಜೂಬಿಲಿ ಸಂವತ್ಸರದ ವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರುಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನು ಅವನಿಗೆ ಸಲ್ಲಿಸಬೇಕು.

53 As a hired servant shall he be with him year by year; [his master] shall not rule with rigour over him before thine eyes.ವರುಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಮತ್ತೊಬ್ಬನು ನಿನ್ನ ದೃಷ್ಟಿಯಲ್ಲಿ ಅವನ ಮೇಲೆ ಕಠಿಣವಾದ ದೊರೆತನ ಮಾಡಬಾರದು.

54 And if he be not redeemed in this manner, then he shall go out in the year of jubilee, he and his children with him.ಈ ವರುಷಗಳಲ್ಲಿ ಅವನು ವಿಮೋಚಿಸಲ್ಪಡದಿದ್ದರೆ ಜೂಬಿಲಿ ಸಂವತ್ಸರದಲ್ಲಿ ಅವನೊಂದಿಗೆ ಅವನ ಮಕ್ಕಳು ಬಿಡುಗಡೆಯಾಗಬೇಕು.

55 For the children of Israel are servants unto me; they are my servants whom I brought forth out of the land of Egypt: I am Jehovah your God.ಯಾಕಂದರೆ ಇಸ್ರಾಯೇಲ್‌ ಮಕ್ಕಳು ನನ್ನ ದಾಸರು, ಐಗುಪ್ತದೇಶ ದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿಮ್ಮ ದೇವರಾದ ಕರ್ತನು ನಾನೇ.

Kannada Bible