Bible

Leviticus 11 - YLT (Kannada)

1 And Jehovah speaketh unto Moses and unto Aaron, saying unto them,1 ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಅವರಿಗೆ ಹೇಳಿದ್ದೇನಂದರೆ

2 `Speak unto the sons of Israel, saying, This `is' the beast which ye do eat out of all the beasts which `are' on the earth:ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ಭೂಮಿಯ ಮೇಲೆ ಇರುವ ಎಲ್ಲಾ ಪಶುಗಳಲ್ಲಿ ನೀವು ತಿನ್ನಬೇಕಾದವುಗಳು ಇವೇ:

3 any dividing a hoof, and cleaving the cleft of the hoofs, bringing up the cud, among the beasts, it ye do eat.ಪಶುಗಳಲ್ಲಿ ಕಾಲ್ಗೊರಸು ಸೀಳಿದ್ದಾಗಿದ್ದು ಮೇವನ್ನು ಮೆಲುಕಾಡಿಸುವದನ್ನು ನೀವು ತಿನ್ನಬೇಕು.

4 `Only, this ye do not eat -- of those bringing up the cud, and of those dividing the hoof -- the camel, though it is bringing up the cud, yet the hoof not dividing -- it `is' unclean to you;ಮೇವನ್ನು ಮೆಲುಕಾಡಿಸದ ಇಲ್ಲವೆ ಗೊರಸು ಸೀಳದಿರುವ ಯಾವದನ್ನೂ ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವದಾದರೂ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿದೆ.

5 and the rabbit, though it is bringing up the cud, yet the hoof it divideth not -- unclean it `is' to you;ಬೆಟ್ಟದ ಮೊಲವು ಮೇವನ್ನು ಮೆಲುಕು ಹಾಕುವದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧ ವಾಗಿರುವದು.

6 and the hare, though it is bringing up the cud, yet the hoof hath not divided -- unclean it `is' to you;ಮೊಲವು ಮೆಲುಕು ಹಾಕುವ ದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿರುವದು.

7 and the sow, though it is dividing the hoof, and cleaving the cleft of the hoof, yet the cud it bringeth not up -- unclean it `is' to you.ಹಂದಿಯ ಗೊರಸು ಸೀಳಲ್ಪಟ್ಟಿದ್ದರೂ ಅದು ಮೇವನ್ನು ಮೆಲುಕು ಹಾಕು ವದಿಲ್ಲ; ಅದು ನಿಮಗೆ ಅಶುದ್ಧವಾಗಿರುವದು.

8 `Of their flesh ye do not eat, and against their carcase ye do not come -- unclean they `are' to you.ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಶವಗಳನ್ನು ನೀವು ಮುಟ್ಟಬಾರದು; ಅವು ನಿಮಗೆ ಅಶುದ್ಧವಾಗಿವೆ.

9 `This ye do eat of all which `are' in the waters; any one that hath fins and scales in the waters, in the seas, and in the brooks, them ye do eat;ನೀರೊಳಗಿರುವ ಇವುಗಳನ್ನು ನೀವು ತಿನ್ನಬಹುದು: ಸಮುದ್ರದಲ್ಲಿಯೂ ನದಿಯಲ್ಲಿರುವ ನೀರಿನಲ್ಲಿಯೂ ಈಜು ರೆಕ್ಕೆಗಳ್ಳಿದ್ದು ಪೊರೆಯಿರುವವುಗಳನ್ನು ತಿನ್ನಬೇಕು.

10 and any one that hath not fins and scales in the seas, and in the brooks, of any teeming creature of the waters, and of any creature which liveth, which `is' in the waters -- an abomination they `are' to you;ಸಮುದ್ರಗಳಲ್ಲಿಯೂ ನದಿಗಳಲ್ಲಿಯೂ ನೀರೊಳಗೆ ಚಲಿಸುವವುಗಳಾಗಿದ್ದು ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜು ರೆಕ್ಕೆಯೂ ಪೊರೆಯಿಲ್ಲದವುಗಳೂ ನಿಮಗೆ ಅಶುದ್ಧವಾಗಿರುವವು.

11 yea, an abomination they are to you; of their flesh ye do not eat, and their carcase ye abominate.ಅವು ನಿಮಗೆ ಅಶುದ್ಧ ವಾಗಿಯೇ ಇರುವವು; ನೀವು ಅವುಗಳ ಮಾಂಸವನ್ನು ತಿನ್ನಬಾರದು, ಅವುಗಳ ಶವಗಳು ನಿಮಗೆ ಅಶುದ್ಧ ವಾಗಿರಬೇಕು.

12 `Any one that hath not fins and scales in the waters -- an abomination it `is' to you.ನೀರಲ್ಲಿ ಯಾವದಕ್ಕೆ ಈಜು ರೆಕ್ಕೆಯೂ ಪೊರೆಗಳೂ ಇಲ್ಲವೊ ಅವು ನಿಮಗೆ ಅಶುದ್ಧ ವಾಗಿರುವವು.

13 `And these ye do abominate of the fowl; they are not eaten, an abomination they `are': the eagle, and the ossifrage, and the ospray,ಪಕ್ಷಿಗಳೊಳಗೆ ನಿಮಗೆ ಅಶುದ್ಧವಾಗಿರುವವುಗಳು ಇವೇ; ಇವುಗಳನ್ನು ನೀವು ತಿನ್ನಬಾರದು, ಇವು ನಿಮಗೆ ಅಶುದ್ಧ: ಹದ್ದು, ಕಡಲ ಹದ್ದು, ವಿಾನು ತಿನ್ನುವ ದೊಡ್ಡ ಜಾತಿಯ ಪಕ್ಷಿ,

14 and the vulture, and the kite after its kind,ರಣಹದ್ದು, ಅದರ ಜಾತಿಯ ಹದ್ದು;

15 every raven after its kind,ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ,

16 and the owl, and the night-hawk, and the cuckoo, and the hawk after its kind,ಗೂಬೆ, ಗಿಡುಗ, ಕೋಗಿಲೆ, ಅದರ ಪ್ರತಿಯೊಂದು ಜಾತಿಯ ಗಿಡುಗ,

17 and the little owl, and the cormorant, and the great owl,ಸಣ್ಣ ಗೂಬೆ, ಹೊಟ್ಟೆ ಬಾಕ ಪಕ್ಷಿ ಮತ್ತು ಹೆಗ್ಗೂಬೆ;

18 and the swan, and the pelican, and the gier eagle,ಇದಲ್ಲದೆ ಹಂಸ, ನೀರು ಕೋಳಿ, ರಣಹದ್ದು,

19 and the stork, the heron after its kind, and the lapwing, and the bat.ಕೊಕ್ಕರೆ, ಬಕ, ಬಾವಲಿ, ಕಣ್ಣ ಕಪಡಿ.

20 `Every teeming creature which is flying, which is going on four -- an abomination it `is' to you.ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.

21 `Only -- this ye do eat of any teeming thing which is flying, which is going on four, which hath legs above its feet, to move with them on the earth;ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನ ಬಹುದು.

22 these of them ye do eat: the locust after its kind, and the bald locust after its kind, and the beetle after its kind, and the grasshopper after its kind;ಅವುಗಳ ಜಾತಿಗನುಸಾರವಾಗಿ ಮಿಡತೆಗಳನ್ನೂ ಬೋಳುಮಿಡತೆಗಳನ್ನೂ ಜಿಟ್ಟೆಮಿಡತೆಗಳನ್ನೂ ಸಣ್ಣ ಮಿಡಿತೆಗಳನ್ನೂ ತಿನ್ನಬಹುದು.

23 and every teeming thing which is flying, which hath four feet -- an abomination it `is' to you.ಆದರೆ ನಾಲ್ಕು ಪಾದಗಳುಳ್ಳ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳೆಲ್ಲಾ ನಿಮಗೆ ಅಶುದ್ಧವಾಗಿರುವವು.

24 `And by these ye are made unclean, any one who is coming against their carcase is unclean till the evening;ಇವುಗಳು ನಿಮಗೆ ಅಶುದ್ಧವಾಗಿರುವವು. ಅವುಗಳ ಶವಗಳನ್ನು ಮುಟ್ಟುವವನು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.

25 and anyone who is lifting up `aught' of their carcase doth wash his garments, and hath been unclean till the evening: --ಯಾವನಾದರೂ ಅವುಗಳ ಶವವನ್ನು ಹೊತ್ತರೆ ತನ್ನ ಬಟ್ಟೆಗಳನ್ನು ಒಗೆಸಿಕೊಂಡು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.

26 even every beast which is dividing the hoof, and is not cloven-footed, and the cud is not bringing up -- unclean they `are' to you; any one who is coming against them is unclean.ಗೊರಸು ಸೀಳದೆಯೂ ನಖವು ಇಗ್ಗೊರಸಾಗಿರ ದೆಯೂ ಮೆಲಕು ಹಾಕದೆಯೂ ಇರುವ ಪ್ರತಿಯೊಂದು ಮೃಗದ ಶವವು ನಿಮಗೆ ಅಶುದ್ಧವಾಗಿರುವದು. ಅದನ್ನು ಮುಟ್ಟಿದ ಪ್ರತಿಯೊಬ್ಬನೂ ಅಶುದ್ಧನಾಗಿರುವನು.

27 `And any one going on its paws, among all the beasts which are going on four -- unclean they `are' to you; any one who is coming against their carcase is unclean until the evening;ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವ ದೆಲ್ಲವೂ ನಿಮಗೆ ಅಶುದ್ಧವಾಗಿರುವವು, ಯಾವನಾ ದರೂ ಅವುಗಳ ಶವವನ್ನು ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು.

28 and he who is lifting up their carcase doth wash his garments, and hath been unclean until the evening -- unclean they `are' to you.ಅವುಗಳ ಶವವನ್ನು ಹೊರುವವನು ತನ್ನ ಬಟ್ಟೆಗಳನ್ನು ಒಗೆದು ಕೊಳ್ಳಬೇಕು. ಅವನು ಸಾಯಂಕಾಲದ ವರೆಗೂ ಅಶುದ್ಧ ನಾಗಿರುವನು; ಅವು ನಿಮಗೆ ಅಶುದ್ಧವಾದವುಗಳು.

29 `And this `is' to you the unclean among the teeming things which are teeming on the earth: the weasel, and the mouse, and the tortoise after its kind,ಭೂಮಿಯ ಮೇಲೆ ಹರಿದಾಡುವವುಗಳಲ್ಲಿ ಮುಂಗುಲಿ, ಇಲಿ, ಅದರ ಜಾತಿಗನುಸಾರವಾದ ಆಮೆ,

30 and the ferret, and the chameleon, and the lizard, and the snail, and the mole;ಅರೆ ಪಳಗಿಸಿದ ಪ್ರಾಣಿ, ಊಸುರುವಳ್ಳಿ, ಹಲ್ಲಿ, ಬಸವನಹುಳ ಮತ್ತು ಚಿಟ್ಟಿಲಿ ಇವು ಸಹ ನಿಮಗೆ ಅಶುದ್ಧವಾಗಿರುವವು.

31 these `are' the unclean to you among all which are teeming; any one who is coming against them in their death is unclean till the evening.ಹರಿದಾಡುವವುಗಳೆಲ್ಲವು ಗಳಲ್ಲಿ ಇವು ನಿಮಗೆ ಅಶುದ್ಧವಾಗಿರುವವು: ಅವು ಸತ್ತಿರುವಾಗ ಅವುಗಳನ್ನು ಯಾವನಾದರೂ ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು.

32 `And anything on which any one of them falleth, in their death, is unclean, of any vessel of wood or garment or skin or sack, any vessel in which work is done is brought into water, and hath been unclean till the evening, then it hath been clean;ಅವು ಸತ್ತುಹೋಗಿ ಯಾವದರ ಮೇಲೆ ಬೀಳುವವೊ ಅವೆಲ್ಲಾ ಅಶುದ್ಧವಾಗಿರುವವು; ಅದು ಮರದ ಪಾತ್ರೆ ಯಾಗಲಿ ಉಡುಪಾಗಲಿ ಚರ್ಮವಾಗಲಿ ಚೀಲ ವಾಗಲಿ ಕೆಲಸಮಾಡುವ ಯಾವ ಸಾಮಾನಾಗಲಿ ಅದು ಏನೇ ಆಗಿರಲಿ ಸಾಯಂಕಾಲದ ವರೆಗೆ ನೀರಲ್ಲಿ ಇಡಲ್ಪಟ್ಟು ಅಶುದ್ಧವಾಗಿರುವದು; ತರುವಾಯ ಅದು ಶುದ್ಧವಾಗುವದು.

33 and any earthen vessel, into the midst of which `any' one of them falleth, all that `is' in its midst is unclean, and it ye do break.ಪ್ರತಿಯೊಂದು ಮಣ್ಣಿನ ಪಾತ್ರೆ ಯೊಳಗೆ ಅವುಗಳಲ್ಲಿ ಯಾವದಾದರೂ ಬಿದ್ದರೆ, ಅದರಲ್ಲಿ ಏನಿದ್ದರೂ ಅಶುದ್ಧವಾಗುವದು ನೀವು ಅದನ್ನು ಒಡೆದುಹಾಕಬೇಕು.

34 `Of all the food which is eaten, that on which cometh `such' water, is unclean, and all drink which is drunk in any `such' vessel is unclean;ತಿನ್ನುವ ಆಹಾರದ ಮೇಲೆ ಅಂಥ ನೀರು ಬಿದ್ದಿದ್ದರೆ ಅದು ಅಶುದ್ಧವಾಗಿರುವದು; ಅಂಥ ಪ್ರತಿ ಪಾತ್ರೆಯಲ್ಲಿ ಕುಡಿಯುವ ಎಲ್ಲಾ ಪಾನವೂ ಅಶುದ್ಧವಾಗಿರುವದು.

35 and anything on which `any' of their carcase falleth is unclean (oven or double pots), it is broken down, unclean they `are', yea, unclean they are to you.ಅವುಗಳ ಹೆಣವು ಯಾವದರ ಮೇಲಾದರೂ ಬಿದ್ದರೆ ಅದು ಅಶುದ್ಧವಾಗಿರುವದು; ಅದು ಒಲೆಯಾಗಿರಲಿ, ಮಣ್ಣಿನ ಒಲೆಯಾಗಿರಲಿ ಒಡೆದು ಹಾಕಲ್ಪಡಬೇಕು, ಅವು ಅಶುದ್ಧವಾಗಿವೆ; ಅವು ನಿಮಗೆ ಅಶುದ್ಧವಾಗಿರುವವು.

36 `Only -- a fountain or pit, a collection of water, is clean, but that which is coming against their carcase is unclean;ಆದಾಗ್ಯೂ ನೀರು ಹೆಚ್ಚಾಗಿರುವ ಬುಗ್ಗೆಯಾಗಲಿ ಹಳ್ಳವಾಗಲಿ ಶುದ್ಧವಾಗಿರುವದು; ಆದರೆ ಅವುಗಳ ಶವಗಳನ್ನು ಮುಟ್ಟಿದ್ದು ಅಶುದ್ಧವಾಗಿರುವದು.

37 and when `any' of their carcase falleth on any sown seed which is sown -- it `is' clean;ಅವುಗಳ ಶವದಲ್ಲಿ ಯಾವ ಭಾಗವಾದರೂ ಬಿತ್ತುವ ಬೀಜದಲ್ಲಿ ಬಿದ್ದರೆ ಅದು ಶುದ್ಧವಾಗಿರುವದು.

38 and when water is put on the seed, and `any' of its carcase hath fallen on it -- unclean it `is' to you.ಮೂತ್ರಜನಕಾಂಗದ ಮೇಲೆ ಯಾವದಾದರೂ ನೀರು ಬಿದ್ದು ಅವುಗಳ ಶವದ ಯಾವ ಭಾಗವಾದರೂ ಅದರಲ್ಲಿ ಬಿದ್ದರೆ ಅದು ನಿಮಗೆ ಅಶುದ್ಧವಾಗಿರುವದು.

39 `And when any of the beasts which are to you for food dieth, he who is coming against its carcase is unclean till the evening;ನೀವು ತಿನ್ನುವ ಯಾವದಾದರೂ ಪಶುವು ಸತ್ತಿದ್ದರೆ ಅದರ ಶವವನ್ನು ಮುಟ್ಟಿದವನು ಸಂಜೆಯ ವರೆಗೆ ಅಶುದ್ಧನಾಗಿರುವನು.

40 and he who is eating of its carcase doth wash his garments, and hath been unclean till the evening; and he who is lifting up its carcase doth wash his garments, and hath been unclean till the evening.ಅದರ ಶವವನ್ನು ತಿನ್ನುವವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು: ಅದರ ಶವವನ್ನು ಹೊರುವವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು.

41 `And every teeming thing which is teeming on the earth is an abomination, it is not eaten;ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಅಶುದ್ಧವಾಗಿದೆ; ಅದನ್ನು ತಿನ್ನಬಾರದು.

42 any thing going on the belly, and any going on four, unto every multiplier of feet, to every teeming thing which is teeming on the earth -- ye do not eat them, for they `are' an abomination;ಹೊಟ್ಟೆಯಿಂದ ಹರಿದಾಡುವ ಯಾವದನ್ನೂ ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವದನ್ನೂ ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವದನ್ನಾದರೂ ನೀವು ತಿನ್ನ ಬಾರದು; ಅವು ಅಶುದ್ಧವಾಗಿವೆ.

43 ye do not make yourselves abominable with any teeming thing which is teeming, nor do ye make yourselves unclean with them, so that ye have been unclean thereby.ಯಾವದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು ಇಲ್ಲವೆ ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಮಲಿನರಾಗಬಾರದು.

44 `For I `am' Jehovah your God, and ye have sanctified yourselves, and ye have been holy, for I `am' holy; and ye do not defile your persons with any teeming thing which is creeping on the earth;ಯಾಕಂದರೆ ನಾನೇ ನಿಮ್ಮ ದೇವರಾದ ಕರ್ತನು. ಆದದರಿಂದ ನಿಮ್ಮನ್ನು ನೀವು ಶುದ್ಧೀಕರಿಸಿಕೊಂಡು ಪರಿಶುದ್ಧರಾಗಿರ್ರಿ; ನಾನು ಪರಿಶುದ್ಧನು. ಇದಲ್ಲದೆ ಭೂಮಿಯ ಮೇಲೆ ಹರಿದಾ ಡುವ ಯಾವ ಬಗೆಯ ಜಂತುಗಳಿಂದಲೂ ನಿಮ್ಮನ್ನು ಮಲಿನ ಮಾಡಿಕೊಳ್ಳಬಾರದು.

45 for I `am' Jehovah who am bringing you up out of the land of Egypt to become your God; and ye have been holy, for I `am' holy.ನಿಮ್ಮ ದೇವರಾಗಿ ರುವದಕ್ಕೆ ಐಗುಪ್ತದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಕರ್ತನು ನಾನೇ. ನಾನು ಪರಿಶುದ್ಧನಾಗಿ ರುವದರಿಂದ ನೀವೂ ಪರಿಶುದ್ಧರಾಗಿರಬೇಕು.

46 `This `is' a law of the beasts, and of the fowl, and of every living creature which is moving in the waters, and of every creature which is teeming on the earth,ಭೂಮೃಗಗಳ, ಪಕ್ಷಿಗಳ, ಪ್ರತಿಯೊಂದು ಜಲ ಜೀವಿ, ಭೂಮಿಯ ಮೇಲೆ ಹರಿದಾಡುವ ಪ್ರತಿ ಯೊಂದು ಕ್ರಿಮಿಯ ನಿಯಮವು ಇದೇ.

47 to make separation between the unclean and the pure, and between the beast that is eaten, and the beast that is not eaten.'ಅಶುದ್ಧ ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನುವಂತ ಪಶು ತಿನ್ನಬಾರದ ಪಶುಗಳ ವ್ಯತ್ಯಾಸವನ್ನೂ ಹೀಗೆ ನೀವು ಮಾಡುವಿರಿ.

Kannada Bible