Lamentations 4 - DBY (Kannada)
1 How is the gold become dim! the most pure gold changed! the stones of the sanctuary poured out at the top of all the streets!ಬಂಗಾರವು ಹೇಗೆ ಮುಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧ ಸ್ಥಳದ ಕಲ್ಲುಗಳು ಪ್ರತಿಯೊಂದು ಬೀದಿಯ ಬದಿಯಲ್ಲಿ ಸುರಿಯಲ್ಪಟ್ಟಿವೆ.
2 The sons of Zion, so precious, comparable to fine gold, how are they esteemed as earthen pitchers, the work of the hands of the potter!ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!
3 Even the jackals offer the breast, they give suck to their young; the daughter of my people is become cruel, like the ostriches in the wilderness.ಸಮುದ್ರದ ವಿಕಾರವಾದ ಪ್ರಾಣಿಗಳಾ ದರೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಮೊಲೆ ಕೊಡುತ್ತವೆ; ಆದರೆ ನನ್ನ ಜನರ ಮಗಳು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿ ದ್ದಾಳೆ.
4 The tongue of the sucking child cleaveth to the roof of his mouth for thirst; the young children ask bread, no man breaketh it unto them.ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.
5 They that fed delicately are desolate in the streets; they that were brought up in scarlet embrace dung-hills.ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
6 And the punishment of the iniquity of the daughter of my people is greater than the reward of the sin of Sodom, which was overthrown as in a moment, and no hands were violently laid upon her.ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ.
7 Her Nazarites were purer than snow, whiter than milk; they were more ruddy in body than rubies, their figure was as sapphire.ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು.
8 Their visage is darker than blackness, they are not known in the streets; their skin cleaveth to their bones, it is withered, it is become like a stick.ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
9 The slain with the sword are happier than the slain with hunger; for these pine away, stricken through for want of the fruits of the field.ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.
10 The hands of pitiful women have boiled their own children: they were their meat in the ruin of the daughter of my people.ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.
11 Jehovah hath accomplished his fury; he hath poured out his fierce anger, and hath kindled a fire in Zion, which hath consumed the foundations thereof.ಕರ್ತನು ತನ್ನ ರೋಷವನ್ನು ತೀರಿಸಿ ದ್ದಾನೆ; ಆತನು ತನ್ನ ಉಗ್ರವಾದ ಕೋಪವನ್ನು ಸುರಿದಿದ್ದಾನೆ; ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
12 The kings of the earth, and all the inhabitants of the world, would not have believed that the adversary and the enemy should enter into the gates of Jerusalem.ಭೂ ರಾಜರೂ ವಿರೋಧಿಯೂ ಶತ್ರುವೂ ಯೆರೂಸಲೇ ಮಿನಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.
13 [It is] for the sins of her prophets, [and] the iniquities of her priests, who have shed the blood of the righteous in the midst of her.ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ ಅವಳ ಯಾಜಕರ ಅಕ್ರಮಗಳಿ ಗೋಸ್ಕರವೂ ಹೀಗಾಯಿತು. ಯಾಕಂದರೆ ಇವರು ನೀತಿವಂತರ ರಕ್ತವನ್ನು ಅವಳ ಮಧ್ಯ ಚೆಲ್ಲಿದ್ದರು.
14 They wandered about blind in the streets; they were polluted with blood, so that men could not touch their garments.ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು, ಅವರು ರಕ್ತದಿಂದ ತಮ್ಮನ್ನು ತಾವೇ ಅಪವಿತ್ರಪಡಿಸಿ ಕೊಂಡರು; ಆದದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೆ ಹೋದರು.
15 They cried unto them, Depart! Unclean! Depart! depart, touch not! When they fled away, and wandered about, it was said among the nations, They shall no more sojourn [there].ಅವರು ಜನರಿಗೆ--ನೀವು ಸರಿಯಿರಿ ಇದು ಅಶುದ್ಧವಾಗಿದೆ; ಸರಿಯಿರಿ, ಸರಿಯಿರಿ; ಮುಟ್ಟಬೇಡಿರಿ ಎಂದು ಕೂಗಿ ಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರು ವಾಗ--ಅವರು ಇನ್ನು ಮೇಲೆ ಅಲ್ಲಿ ವಾಸಮಾಡು ವದಿಲ್ಲ ಎಂದು ಅನ್ಯ ಜನಾಂಗಗಳೊಳಗೆ ಹೇಳಿದರು.
16 The face of Jehovah hath divided them; he will no more regard them. They respected not the persons of the priests, they favoured not the aged.ಕರ್ತನ ಕೋಪವು ಅವರನ್ನು ವಿಭಾಗಿಸಿತು; ಆತನು ಇನ್ನು ಅವರನ್ನು ಲಕ್ಷಿಸುವದಿಲ್ಲ; ಅವರು ಯಾಜಕರನ್ನು ಗೌರವಿಸಲಿಲ್ಲ; ಅವರು ಹಿರಿಯರಿಗೆ ದಯೆತೋರಿ ಸಲಿಲ್ಲ.
17 Our eyes still failed for our vain help; in our watching, we have watched for a nation that did not save.ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು; ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.
18 They hunted our steps, that we could not go in our streets: our end is near, our days are fulfilled; for our end is come.ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಅವರು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ; ನಮ್ಮ ಅಂತ್ಯವು ಸವಿಾಪಿಸಿತು, ನಮ್ಮ ದಿನಗಳು ತುಂಬಿದವು; ನಮ್ಮ ಅಂತ್ಯವು ಬಂದಿತು.
19 Our pursuers were swifter than the eagles of the heavens; they chased us hotly upon the mountains, they laid wait for us in the wilderness.ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರ ವಾಗಿದ್ದಾರೆ; ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ ಅರಣ್ಯದಲ್ಲಿ ಹೊಂಚುಹಾಕಿದರು.
20 The breath of our nostrils, the anointed of Jehovah, was taken in their pits; of whom we said, Under his shadow we shall live among the nations.ಯಾರ ವಿಷಯವಾಗಿ ನಾವು--ಅವನ ನೆರಳಿನ ಕೆಳಗೆ ಅನ್ಯ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿ ಕೊಂಡೆವೋ ನಮ್ಮ ಮೂಗಿನ ಉಸಿರಾದ ಆ ಕರ್ತನ ಅಭಿಷಿಕ್ತನು ಅವರ ಕುಣಿಗಳಲ್ಲಿ ಸಿಕ್ಕಿಕೊಂಡನು.
21 Rejoice and be glad, daughter of Edom, that dwellest in the land of Uz: the cup shall pass also unto thee; thou shalt be drunken, and make thyself naked.ಎದೋಮಿನ ಮಗಳೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು, ಸಂತೋಷಪಡು; ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವದು, ನೀನು ಕುಡಿದು ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.
22 The punishment of thine iniquity is accomplished, O daughter of Zion; he will no more carry thee away into captivity. He will visit thine iniquity, O daughter of Edom; he will discover thy sins.ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು.
Kannada Bible