ಕೀರ್ತನೆಗಳು 68:3 in Kannada

ಕನ್ನಡ ಕನ್ನಡ ಬೈಬಲ್ ಕೀರ್ತನೆಗಳು ಕೀರ್ತನೆಗಳು 68 ಕೀರ್ತನೆಗಳು 68:3

Psalm 68:3
ಆದರೆ ನೀತಿವಂತರು ಸಂತೋಷಿಸಲಿ; ದೇವರ ಮುಂದೆ ಉತ್ಸಾಹಪಡಲಿ; ಹೌದು, ಅವರು ಅತಿಸಂತೋಷದಿಂದ ಹರ್ಷಿಸುವವರಾಗಲಿ.

Psalm 68:2Psalm 68Psalm 68:4

Psalm 68:3 in Other Translations

King James Version (KJV)
But let the righteous be glad; let them rejoice before God: yea, let them exceedingly rejoice.

American Standard Version (ASV)
But let the righteous be glad; let them exult before God: Yea, let them rejoice with gladness.

Bible in Basic English (BBE)
But let the upright be glad; let them have delight before God; let them be full of joy.

Darby English Bible (DBY)
But the righteous shall rejoice: they shall exult before God and be glad with joy.

Webster's Bible (WBT)
As smoke is driven away, so drive them away: as wax melteth before the fire, so let the wicked perish at the presence of God.

World English Bible (WEB)
But let the righteous be glad. Let them rejoice before God. Yes, let them rejoice with gladness.

Young's Literal Translation (YLT)
And the righteous rejoice, they exult before God, And they joy with gladness.

But
let
the
righteous
וְֽצַדִּיקִ֗יםwĕṣaddîqîmveh-tsa-dee-KEEM
be
glad;
יִשְׂמְח֣וּyiśmĕḥûyees-meh-HOO
rejoice
them
let
יַֽ֭עַלְצוּyaʿalṣûYA-al-tsoo
before
לִפְנֵ֥יlipnêleef-NAY
God:
אֱלֹהִ֗יםʾĕlōhîmay-loh-HEEM
yea,
let
them
exceedingly
וְיָשִׂ֥ישׂוּwĕyāśîśûveh-ya-SEE-soo
rejoice.
בְשִׂמְחָֽה׃bĕśimḥâveh-seem-HA

Cross Reference

ಕೀರ್ತನೆಗಳು 64:10
ನೀತಿವಂತನು ಕರ್ತನಲ್ಲಿ ಸಂತೋಷಪಟ್ಟು ಆತನಲ್ಲಿ ಭರವಸವಿ ಡುವನು. ಯಥಾರ್ಥ ಹೃದಯವುಳ್ಳವರೆಲ್ಲರು ಹೆಚ್ಚಳ ಪಡುವರು.

ಪ್ರಕಟನೆ 19:7
ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.

ಪ್ರಕಟನೆ 18:20
ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.

1 ಪೇತ್ರನು 1:8
ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.

1 ಥೆಸಲೊನೀಕದವರಿಗೆ 5:16
ಯಾವಾಗಲೂ ಸಂತೋಷಿಸಿರಿ;

ಕೀರ್ತನೆಗಳು 100:1
ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ,

ಕೀರ್ತನೆಗಳು 98:8
ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.

ಕೀರ್ತನೆಗಳು 97:12
ನೀತಿವಂತರೇ, ಕರ್ತನಲ್ಲಿ ಸಂತೋ ಷಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.

ಕೀರ್ತನೆಗಳು 95:1
ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ.

ಕೀರ್ತನೆಗಳು 58:10
ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.

ಕೀರ್ತನೆಗಳು 43:4
ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.

ಕೀರ್ತನೆಗಳು 32:11
ನೀತಿವಂತರೇ, ಕರ್ತನಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯಉಳ್ಳವರೇ, ಉತ್ಸಾಹ ಧ್ವನಿಮಾಡಿರಿ.

ಕೀರ್ತನೆಗಳು 21:1
ಓ ಕರ್ತನೇ, ನಿನ್ನ ಬಲದಲ್ಲಿ ಅರಸನು ಸಂತೋಷಪಡುವನು; ನಿನ್ನ ರಕ್ಷಣೆಯಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುವನು.

ಧರ್ಮೋಪದೇಶಕಾಂಡ 12:12
ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ಸಂತೋಷವಾಗಿರಬೇಕು; ನೀವೂ ನಿಮ್ಮ ಕುಮಾರ ಕುಮಾರ್ತೆಯರೂ ನಿಮ್ಮ ದಾಸದಾಸಿಯರೂ; ನಿಮ್ಮ ಬಾಗಲುಗಳಲ್ಲಿರುವ ಲೇವಿಯನು ಸಹ. ಅವನಿಗೆ ನಿಮ್ಮ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.