Psalm 68:1
ದೇವರು ಎದ್ದೇಳುವಾಗ, ಆತನನ್ನು ಹಗೆ ಮಾಡುವವರು ಚದುರಿಸಲ್ಪಡಲಿ; ಆತ ನನ್ನು ವಿರೋಧಿಸುವವರು ಆತನ ಸಮ್ಮುಖದಿಂದ ಓಡಿ ಹೋಗುತ್ತಾರೆ.
Psalm 68:1 in Other Translations
King James Version (KJV)
Let God arise, let his enemies be scattered: let them also that hate him flee before him.
American Standard Version (ASV)
Let God arise, let his enemies be scattered; Let them also that hate him flee before him.
Bible in Basic English (BBE)
<To the chief music-maker. Of David. A Psalm. A Song.> Let God be seen, and let his haters be put to flight; let those who are against him be turned back before him.
Darby English Bible (DBY)
{To the chief Musician. Of David. A Psalm: a Song.} Let God arise, let his enemies be scattered, and let them that hate him flee before him.
World English Bible (WEB)
> Let God arise! Let his enemies be scattered! Let them who hate him also flee before him.
Young's Literal Translation (YLT)
To the Overseer. -- A Psalm, a song of David. Rise doth God -- scattered are His enemies! And those hating Him flee from His face.
| Let God | יָק֣וּם | yāqûm | ya-KOOM |
| arise, | אֱ֭לֹהִים | ʾĕlōhîm | A-loh-heem |
| enemies his let | יָפ֣וּצוּ | yāpûṣû | ya-FOO-tsoo |
| be scattered: | אוֹיְבָ֑יו | ʾôybāyw | oy-VAV |
| hate that also them let | וְיָנ֥וּסוּ | wĕyānûsû | veh-ya-NOO-soo |
| him flee | מְ֝שַׂנְאָ֗יו | mĕśanʾāyw | MEH-sahn-AV |
| before | מִפָּנָֽיו׃ | mippānāyw | mee-pa-NAIV |
Cross Reference
ಯೆಶಾಯ 33:3
ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.
ಅರಣ್ಯಕಾಂಡ 10:35
ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು.
ಕೀರ್ತನೆಗಳು 89:10
ಕೊಲ್ಲ ಲ್ಪಟ್ಟ ಒಬ್ಬನಂತೆ ನೀನು ರಾಹಬನ್ನು ತುಂಡಾಗುವಂತೆ ಒಡೆದಿದ್ದೀ. ನಿನ್ನ ಬಲದ ತೋಳಿನಿಂದ ನಿನ್ನ ಶತ್ರು ಗಳನ್ನು ಚದರಿಸಿ ಬಿಟ್ಟಿದ್ದೀ.
ವಿಮೋಚನಕಾಂಡ 20:5
ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
ಯೆಶಾಯ 51:9
ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
ಯೆಹೆಜ್ಕೇಲನು 5:2
ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು
ಯೆಹೆಜ್ಕೇಲನು 12:14
ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
ದಾನಿಯೇಲನು 2:35
ಆಮೇಲೆ ಕಬ್ಬಿಣವೂ ಮಣ್ಣೂ ಹಿತ್ತಾಳೆಯೂ ಬೆಳ್ಳಿಯೂ ಮತ್ತು ಬಂಗಾರವೂ ಕೂಡ ಒಡೆದು ಚೂರು ಚೂರಾಗಿ ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾ ದವು; ಅವುಗಳಿಗೆ ಎಡೆ ಸಿಗದ ಹಾಗೆ ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು; ಪ್ರತಿಮೆಯನ್ನು ಬಡಿದ ಕಲ್ಲು ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
ಯೋಹಾನನು 14:23
ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯಾವನಾ ದರೂ ನನ್ನನ್ನು ಪ್ರೀತಿಸುವದಾದರೆ ಅವನು ನನ್ನ ಮಾತುಗಳನ್ನು ಕೈಕೊಳ್ಳುವನು; ನನ್ನ ತಂದೆಯು ಅವ ನನ್ನು ಪ್ರೀತಿಸುವನು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಮ್ಮ ನಿವಾಸವನ್ನು ಮಾಡಿ ಕೊಳ್ಳುವೆವು.
ಯೆಶಾಯ 42:13
ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
ಯೆಶಾಯ 41:15
ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ.
ಕೀರ್ತನೆಗಳು 132:8
ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.
2 ಪೂರ್ವಕಾಲವೃತ್ತಾ 6:41
ಈಗ ಓ ದೇವರಾದ ಕರ್ತನೇ, ನೀನು ನಿನ್ನ ಬಲದ ಮಂಜೂಷದ ಸಂಗಡ ನಿನ್ನ ವಿಶ್ರಾಂತಿಗೆ ಏರು; ಓ ದೇವರಾದ ಕರ್ತನೇ, ನಿನ್ನ ಯಾಜಕರು ರಕ್ಷಣೆಯನ್ನು ಧರಿಸಿಕೊಳ್ಳಲಿ; ನಿನ್ನ ಪರಿ ಶುದ್ಧರು ಒಳ್ಳೇದರಲ್ಲಿ ಸಂತೋಷಪಡಲಿ.
ಕೀರ್ತನೆಗಳು 7:6
ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ.
ಕೀರ್ತನೆಗಳು 21:8
ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.
ಕೀರ್ತನೆಗಳು 44:26
ನಮಗೆ ಸಹಾಯವಾಗಿ ಏಳು; ನಿನ್ನ ಕೃಪೆಯ ನಿಮಿತ್ತ ನಮ್ಮನ್ನು ವಿಮೋಚಿಸು.
ಕೀರ್ತನೆಗಳು 59:11
ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.
ಕೀರ್ತನೆಗಳು 68:14
ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
ಕೀರ್ತನೆಗಳು 68:30
ಪ್ರತಿಯೊಬ್ಬನು ಬೆಳ್ಳಿಯ ತುಂಡುಗಳನ್ನು ಸಮರ್ಪಿಸುವ ವರೆಗೆ ಜನರ ಕರುಗಳ ಸಂಗಡ ಹೋರಿ ಗಳ ಗುಂಪನ್ನು ಭಲ್ಲೆಗಾರರ ಗುಂಪುನ್ನು ಗದರಿಸು. ಕಾಳಗದಲ್ಲಿ ಸಂತೋಷ ಪಡುವ ಜನರನ್ನು ನೀನು ಚದರಿಸು.
ಕೀರ್ತನೆಗಳು 78:65
ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,
ಧರ್ಮೋಪದೇಶಕಾಂಡ 7:10
ತನ್ನನ್ನು ಹಗೆ ಮಾಡುವವರಿಗೆ ಮುಖಾಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸಿ ಅವರನ್ನು ನಾಶಮಾಡುತ್ತಾನೆ; ಆತನು ತನ್ನನ್ನು ಹಗೆಮಾಡುವವರಿಗೆ ತಡಮಾಡದೆ ಮುಖಾ ಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ ಎಂದು ತಿಳಿದುಕೋ.