Psalm 36 - WEB (Kannada)
1 > An oracle is within my heart about the disobedience of the wicked: "There is no fear of God before his eyes."1 ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವದರಿಂದ ಅವನ ಕಣ್ಣೆದು ರಿಗೆ ದೇವರ ಭಯವೇ ಇಲ್ಲ.
2 For he flatters himself in his own eyes, Too much to detect and hate his sin.ಹಗೆಗೆ ತಕ್ಕ ತನ್ನ ಅಕ್ರಮವನ್ನು ಕಂಡುಕೊಳ್ಳುವವರೆಗೆ ಅವನು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ.
3 The words of his mouth are iniquity and deceit. He has ceased to be wise and to do good.ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.
4 He plots iniquity on his bed. He sets himself in a way that is not good; He doesn't abhor evil.ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
5 Your loving kindness, Yahweh, is in the heavens. Your faithfulness reaches to the skies.ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.
6 Your righteousness is like the mountains of God. Your judgments are like a great deep. Yahweh, you preserve man and animal.ನಿನ್ನ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿನ್ನ ನ್ಯಾಯತೀರ್ಪುಗಳು ಮಹಾ ಅಗಾಧವೇ. ಓ ಕರ್ತನೇ, ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
7 How precious is your loving kindness, God! The children of men take refuge under the shadow of your wings.ಓ ದೇವರೇ, ನಿನ್ನ ಪ್ರೀತಿ ಕರುಣೆಯು ಎಷ್ಟೋ ಶ್ರೇಷ್ಠ ವಾದದ್ದು! ಮನುಷ್ಯನ ಮಕ್ಕಳು ನಿನ್ನ ರೆಕ್ಕೆಗಳ ನೆರಳಿನಲ್ಲಿ ಭರವಸೆ ಇಡುತ್ತಾರೆ.
8 They shall be abundantly satisfied with the abundance of your house. You will make them drink of the river of your pleasures.ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
9 For with you is the spring of life. In your light shall we see light.ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟು. ನಿನ್ನ ತೇಜಸ್ಸಿನ ಬೆಳಕನ್ನು ನೋಡುವೆವು.
10 Oh continue your loving kindness to those who know you, Your righteousness to the upright in heart.ನಿನ್ನನ್ನು ತಿಳಿದವರಿಗೆ ನಿನ್ನ ಕೃಪೆಯನ್ನೂ ಯಥಾರ್ಥ ಹೃದಯದವರಿಗೆ ನಿನ್ನ ನೀತಿಯನ್ನೂ ನೆಲೆಯಾಗಿರಿಸು.
11 Don't let the foot of pride come against me. Don't let the hand of the wicked drive me away.ಗರ್ವದ ಪಾದ ನನಗೆ ವಿರೋಧ ವಾಗಿ ಬಾರದೆ ಇರಲಿ; ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.
12 There the workers of iniquity are fallen. They are thrust down, and shall not be able to rise.ಅಲ್ಲಿ ಅಕ್ರಮ ಮಾಡುವವರು ಬಿದ್ದಿದ್ದಾರೆ; ಅವರು ಕೆಳಗೆ ಹಾಕಲ್ಪಟ್ಟು ಏಳಲಾರದೆ ಇದ್ದಾರೆ.
Kannada Bible