Kannada Bible
Proverbs 1:20-32 in Kannada
Proverbs 1:20
ಹೊರಗೆ ಜ್ಞಾನವೆಂಬಾಕೆಯು ಕೂಗುತ್ತಾಳೆ. ಬೀದಿಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
Proverbs 1:21
ಸಮೂಹದ ಮುಖ್ಯ ಸ್ಥಳದಲ್ಲಿಯೂ ದ್ವಾರಗಳ ಬಳಿಯಲ್ಲಿಯೂ ಅವಳು ಕೂಗುತ್ತಾಳೆ, ಪಟ್ಟಣದಲ್ಲಿ ಅವಳು ತನ್ನ ಮಾತುಗಳನ್ನು ಉಚ್ಚರಿಸುತ್ತಾ--
Proverbs 1:22
ಜ್ಞಾನ ಹೀನರೇ, ನೀವು ಎಷ್ಟು ಕಾಲ ಅಜ್ಞಾನವನ್ನು ಪ್ರೀತಿಸುವಿರಿ? ತಿರಸ್ಕರಿಸುವವರು ತಮ್ಮ ತಿರಸ್ಕರಿಸು ವಿಕೆಯಲ್ಲಿ ಎಷ್ಟುಕಾಲ ಆನಂದಿಸುವರು? ಜ್ಞಾನ ಹೀನರು ಎಷ್ಟು ಕಾಲ ತಿಳುವಳಿಕೆಯನ್ನು ಹಗೆ ಮಾಡುವರು?
Proverbs 1:23
ನನ್ನ ಗದರಿಕೆಗೆ ನೀವು ತಿರುಗಿ ಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನಿಮಗೆ ನನ್ನ ಮಾತುಗಳು ತಿಳಿಯುವಂತೆ ಮಾಡುವೆನು.
Proverbs 1:24
ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ
Proverbs 1:25
ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ ನನ್ನ ಗದರಿಕೆ ಯನ್ನು ನೀವು ಬೇಡವೆಂದು ತಳ್ಳಿಬಿಟ್ಟದ್ದರಿಂದಲೂ
Proverbs 1:26
ನಿಮ್ಮ ಆಪತ್ತಿನಲ್ಲಿ ನಿಮಗೆ ಹೆದರಿಕೆ ಬರುವಾಗ
Proverbs 1:27
ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು.
Proverbs 1:28
ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ.
Proverbs 1:29
ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ
Proverbs 1:30
ನನ್ನ ಆಲೋಚನೆಯನ್ನು ಗಮನಿಸದೆ ಇದ್ದದಕ್ಕಾಗಿಯೂ ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದ್ದಕ್ಕಾಗಿಯೂ
Proverbs 1:31
ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು.
Proverbs 1:32
ಅಜ್ಞಾನಿ ಗಳ ವಿಮುಖವು ಅವರನ್ನು ಕೊಲ್ಲುವದು, ಜ್ಞಾನ ಹೀನರ ಏಳಿಗೆ ಅವರನ್ನು ನಾಶಪಡಿಸುವದು.