ಅರಣ್ಯಕಾಂಡ 9:16
ಈ ಪ್ರಕಾರ ಯಾವಾಗಲೂ ಅದು ಇತ್ತು; ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು.
So | כֵּ֚ן | kēn | kane |
it was | יִֽהְיֶ֣ה | yihĕye | yee-heh-YEH |
alway: | תָמִ֔יד | tāmîd | ta-MEED |
cloud the | הֶֽעָנָ֖ן | heʿānān | heh-ah-NAHN |
covered | יְכַסֶּ֑נּוּ | yĕkassennû | yeh-ha-SEH-noo |
appearance the and day, by it | וּמַרְאֵה | ûmarʾē | oo-mahr-A |
of fire | אֵ֖שׁ | ʾēš | aysh |
by night. | לָֽיְלָה׃ | lāyĕlâ | LA-yeh-la |
Cross Reference
ನೆಹೆಮಿಯ 9:12
ಇದಲ್ಲದೆ ಹಗಲಿನಲ್ಲಿ ಮೇಘ ಸ್ತಂಭ ದಿಂದಲೂ ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭ ದಿಂದಲೂ ಅವರನ್ನು ನಡಿಸಿದಿ.
ಪ್ರಕಟನೆ 21:3
ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
2 ಕೊರಿಂಥದವರಿಗೆ 5:19
ಅದೇನಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನಪಡಿಸಿ ಕೊಳ್ಳುತ್ತಿದ್ದನೆಂಬದೇ; ಆ ಸಮಾಧಾನದ ವಾಕ್ಯವನ್ನು ನಮ್ಮ ವಶಕ್ಕೆ ಕೊಟ್ಟಿದ್ದಾನೆ.
1 ಕೊರಿಂಥದವರಿಗೆ 10:1
ಇದಲ್ಲದೆ ಸಹೋದರರೇ, ನೀವು ಈ ವಿಷಯಗಳನ್ನು ಅರಿಯದವರಾಗಿರ ಬಾರದೆಂದು ನನ್ನ ಅಪೇಕ್ಷೆಯಲ್ಲ; ಅದೇನಂದರೆ--ನಮ್ಮ ಪಿತೃಗಳೆಲ್ಲರೂ ಮೇಘದ ಕೆಳಗೆ ಇದ್ದು ಸಮುದ್ರವನ್ನು ದಾಟಿದರು;
ಯೆಶಾಯ 4:5
ಕರ್ತನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.
ಕೀರ್ತನೆಗಳು 105:39
ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು.
ಕೀರ್ತನೆಗಳು 78:14
ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು.
ನೆಹೆಮಿಯ 9:19
ನೀನು ನಿನ್ನ ಹೇರಳವಾದ ಕರುಣೆಯಿಂದ ಅರಣ್ಯದಲ್ಲಿ ಅವರನ್ನು ಕೈಬಿಡದೆ ಇದ್ದಿ. ಹಗಲಿನಲ್ಲಿ ಅವರಿಗೆ ದಾರಿ ತೋರಿಸತಕ್ಕ ಮೇಘಸ್ತಂಭವಾದರೂ ರಾತ್ರಿಯಲ್ಲಿ ಅವರಿಗೆ ಬೆಳಕನ್ನು, ಅವರು ನಡೆಯತಕ್ಕ ಮಾರ್ಗವನ್ನು ತೋರಿಸುವ ಅಗ್ನಿಸ್ತಂಭವಾದರೂ ಅವರನ್ನು ಬಿಟ್ಟು ಹೋಗಲಿಲ್ಲ.
ಧರ್ಮೋಪದೇಶಕಾಂಡ 1:33
ಇಳುಕೊಳ್ಳುವದಕ್ಕೆ ನಿಮಗೆ ಸ್ಥಳವನ್ನು ವಿಚಾರಿಸಲೂ ನೀವು ಹೋಗತಕ್ಕ ಮಾರ್ಗ ವನ್ನು ನಿಮಗೆ ತೋರಿಸಲೂ ರಾತ್ರಿಹೊತ್ತು ಬೆಂಕಿ ಯಲ್ಲಿಯೂ ಹಗಲುಹೊತ್ತು ಮೇಘದಲ್ಲಿಯೂ ಮಾರ್ಗದಲ್ಲಿ ಆತನೇ ನಿಮ್ಮ ಮುಂದೆ ಹೋದನು.
ಅರಣ್ಯಕಾಂಡ 9:18
ಕರ್ತನ ಆಜ್ಞೆಯ ಪ್ರಕಾರ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡಿ ದರು. ಕರ್ತನ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲೆಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು.
ವಿಮೋಚನಕಾಂಡ 40:38
ಇಸ್ರಾಯೇಲ್ಯರ ಮನೆಯವರೆಲ್ಲರ ಕಣ್ಣುಗಳ ಮುಂದೆ ಅವರ ಎಲ್ಲಾ ಪ್ರಯಾಣಗಳಲ್ಲಿ ಹಗಲಿನಲ್ಲಿ ಕರ್ತನ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಅಗ್ನಿಯು ಅದರ ಮೇಲೆ ಇತ್ತು.
ವಿಮೋಚನಕಾಂಡ 13:21
ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.