Matthew 12 - BBE (Kannada)
1 At that time Jesus went through the fields on the Sabbath day; and his disciples, being in need of food, were taking the heads of grain.ಆ ಸಮಯದಲ್ಲಿ ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲವನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಹಸಿದಿ ದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
2 But the Pharisees, when they saw it, said to him, See, your disciples do that which it is not right to do on the Sabbath.ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು.
3 But he said to them, Have you no knowledge of what David did when he had need of food, and those who were with him?ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ?
4 How he went into the house of God and took for food the holy bread which it was not right for him or for those who were with him to take, but only for the priests?ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?
5 Or is it not said in the law, how the Sabbath is broken by the priests in the Temple and they do no wrong?ಇದಲ್ಲದೆ ಸಬ್ಬತ್ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?
6 But I say to you that a greater thing than the Temple is here.ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.
7 But if these words had been in your minds, My desire is for mercy and not for offerings, you would not have been judging those who have done no wrong.ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
8 For the Son of man is lord of the Sabbath.ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
9 And he went from there into their Synagogue:ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು.
10 And there was a man with a dead hand. And they put a question to him, saying, Is it right to make a man well on the Sabbath day? so that they might have something against him.ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.
11 And he said to them, Which of you, having a sheep, if it gets into a hole on the Sabbath day, will not put out a helping hand and get it back?ಅದಕ್ಕಾತನು ಅವರಿಗೆ-- ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೆ ಇರುವನೇ?
12 Of how much more value is a man than a sheep! For this reason it is right to do good on the Sabbath day.ಹಾಗಾದರೆ ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಶ್ರೇಷ್ಠನಾಗಿದ್ದಾನಲ್ಲವೇ? ಆದದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವದು ನ್ಯಾಯವಾಗಿದೆ ಎಂದು ಹೇಳಿದನು.
13 Then said he to the man, Put out your hand. And he put it out, and it was made as well as the other.ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು.
14 But the Pharisees went out and made designs against him, how they might put him to death.ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.
15 And Jesus, having knowledge of this, went away from there, and a great number went after him; and he made them all well,ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು; ಮತ್ತು ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿಸಿದರು. ಆಗ ಆತನು ಅವರೆಲ್ಲರನ್ನು ವಾಸಿ ಮಾಡಿದನು.
16 Ordering them not to give people word of him:ಯೇಸು ತನ್ನನ್ನು ಯಾರಿಗೂ ಪ್ರಕಟಿಸ ಬಾರದೆಂದು ಅವರಿಗೆ ಆಜ್ಞಾಪಿಸಿದನು;
17 So that what was said by Isaiah the prophet might come true,ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟಿದ್ದು ನೆರವೇರಿತು; ಅದೇನಂದರೆ--
18 See my servant, the man of my selection, my loved one in whom my soul is well pleased: I will put my Spirit on him, and he will make my decision clear to the Gentiles.ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು; ನನ್ನ ಪ್ರಾಣವು ಬಹಳವಾಗಿ ಮೆಚ್ಚಿಕೊಂಡಿರುವ ನನ್ನ ಪ್ರಿಯನು; ನಾನು ಆತನ ಮೇಲೆ ನನ್ನ ಆತ್ಮನನ್ನು ಇರಿಸುವೆನು ಮತ್ತು ಆತನು ಅನ್ಯಜನಗಳಿಗೆ ನ್ಯಾಯವನ್ನು ತೋರಿ ಸುವನು.
19 His coming will not be with fighting or loud cries; and his voice will not be lifted up in the streets.ಆತನು ಜಗಳವಾಡುವದಿಲ್ಲ, ಕೂಗಾಡು ವದೂ ಇಲ್ಲ; ಇಲ್ಲವೆ ಯಾವ ಮನುಷ್ಯನು ಬೀದಿಗಳಲ್ಲಿ ಆತನ ಸ್ವರವನ್ನು ಕೇಳಿಸಿಕೊಳ್ಳುವದೂ ಇಲ್ಲ.
20 The crushed stem will not be broken by him; and the feebly burning light will he not put out, till he has made righteousness overcome all.ಆತನು ನ್ಯಾಯವನ್ನು ವಿಜಯಕ್ಕಾಗಿ ಕಳುಹಿಸುವವರೆಗೆ ಜಜ್ಜಿದ ದಂಟನ್ನು ಮುರಿಯುವದಿಲ್ಲ ಮತ್ತು ಹೊಗೆಯಾಡುವ ಬತ್ತಿಯನ್ನು ನಂದಿಸುವದಿಲ್ಲ.
21 And in his name will the Gentiles put their hope.ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.
22 Then they took to him one with an evil spirit, who was blind and had no power of talking: and he made him well so that he had the power of talking and seeing.ಆಗ ಜನರು ದೆವ್ವ ಹಿಡಿದಿದ್ದವನೂ ಕುರುಡನೂ ಮೂಕನೂ ಆಗಿದ್ದವನನ್ನು ಆತನ ಬಳಿಗೆ ತಂದರು; ಮತ್ತು ಆತನು ಅವನನ್ನು ಸ್ವಸ್ಥಮಾಡಿದ್ದರಿಂದ ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ನೋಡಿದನು.
23 And all the people were surprised and said, Is not this the Son of David?ಆಗ ಜನರೆಲ್ಲರು ವಿಸ್ಮಯ ಗೊಂಡವರಾಗಿ--ಈತನು ದಾವೀದನ ಕುಮಾರ ನಲ್ಲವೇ ಅಂದರು.
24 But the Pharisees, hearing of it, said, This man only sends evil spirits out of men by Beelzebub, the ruler of evil spirits.ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು.
25 And having knowledge of their thoughts he said to them, Every kingdom having division in itself is made waste, and every town or house having division in itself will come to destruction.ಆಗ ಯೇಸು ಅವರ ಆಲೋಚನೆ ಗಳನ್ನು ತಿಳಿದು ಅವರಿಗೆ--ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುತ್ತದೆ; ಮತ್ತು ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ಪಟ್ಟಣವಾಗಲೀ ಮನೆಯಾಗಲೀ ನಿಲ್ಲುವದಿಲ್ಲ.
26 And if Satan sends out Satan, he makes war against himself; how then will he keep his kingdom?ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ತಾನೇ ವಿಭಾಗಿಸಲ್ಪಟ್ಟಿದ್ದಾನೆ; ಹಾಗಾದರೆ ಅವನ ರಾಜ್ಯವು ಹೇಗೆ ನಿಂತೀತು?
27 And if I by Beelzebub send evil spirits out of men, by whom do your sons send them out? So let them be your judges.ಮತ್ತು ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವರು.
28 But if I by the Spirit of God send out evil spirits, then is the kingdom of God come on you.ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ.
29 Or how may one go into a strong man's house and take his goods, if he does not first put cords round the strong man? and then he may take his goods.ಇಲ್ಲವೆ ಯಾವನಾದರೂ ಮೊದಲು ಬಲವುಳ್ಳ ಮನುಷ್ಯನನ್ನು ಕಟ್ಟಿಹಾಕದ ಹೊರತು ಅವನ ಮನೆ ಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳು ವದಕ್ಕಾದೀತೇ? ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವದಕ್ಕಾಗುವದು.
30 Whoever is not with me is against me; and he who does not take part with me in getting people together, is driving them away.ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು.
31 So I say to you, Every sin and every evil word against God will have forgiveness; but for evil words against the Spirit there will be no forgiveness.ಆದಕಾರಣ ನಾನು ನಿಮಗೆ ಹೇಳುವದೇ ನಂದರೆ-- ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು; ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ.
32 And whoever says a word against the Son of man, will have forgiveness; but whoever says a word against the Holy Spirit, will not have forgiveness in this life or in that which is to come.ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ.
33 Make the tree good, and its fruit good; or make the tree bad, and its fruit bad; for by its fruit you will get knowledge of the tree.ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು.
34 You offspring of snakes, how are you, being evil, able to say good things? because out of the heart's store come the words of the mouth.ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ.
35 The good man out of his good store gives good things; and the evil man out of his evil store gives evil things.ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.
36 And I say to you that in the day when they are judged, men will have to give an account of every foolish word they have said.ಆದರೆ ನಾನು ನಿಮಗೆ ಹೇಳುವದೇನಂದರೆ-- ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
37 For by your words will your righteousness be seen, and by your words you will be judged.ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯಾಗುವಿ ಎಂದು ಹೇಳಿದನು.
38 Then some of the scribes and Pharisees, hearing this, said to him, Master, we are looking for a sign from you.ಆಗ ಶಾಸ್ತ್ರಿಗಳಲ್ಲಿ ಮತ್ತು ಫರಿಸಾಯರಲ್ಲಿ ಕೆಲ ವರು--ಗುರುವೇ, ನಿನ್ನಿಂದ ಒಂದು ಸೂಚಕಕಾರ್ಯ ವನ್ನು ನೋಡಬೇಕೆಂದಿದ್ದೇವೆ ಎಂದು ಕೇಳಿದ್ದಕ್ಕೆ
39 But he, answering, said to them, An evil and false generation is looking for a sign; and no sign will be given to it but the sign of the prophet Jonah:ಆತನು ಪ್ರತ್ಯುತ್ತರವಾಗಿ ಅವರಿಗೆ--ವ್ಯಭಿಚಾರಿಣಿ ಯಾದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡು ಕುತ್ತದೆ; ಪ್ರವಾದಿಯಾದ ಯೋನನಲ್ಲಿ ಆದ ಸೂಚಕ ಕಾರ್ಯವೇ ಹೊರತು ಅದಕ್ಕೆ ಇನ್ಯಾವ ಸೂಚಕಕಾರ್ಯ ವೂ ಕೊಡಲ್ಪಡುವದಿಲ್ಲ.
40 For as Jonah was three days and three nights in the stomach of the great fish, so will the Son of man be three days and three nights in the heart of the earth.ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
41 The men of Nineveh will come up in the day of judging and give their decision against this generation: because they were turned from their sins at the preaching of Jonah; and now a greater than Jonah is here.ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.
42 The queen of the South will come up in the day of judging and give her decision against this generation: for she came from the ends of the earth to give ear to the wisdom of Solomon; and now a greater than Solomon is here.ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
43 But the unclean spirit, when he is gone out of a man, goes through dry places looking for rest, and getting it not.ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
44 Then he says, I will go back into my house from which I came out; and when he comes, he sees that there is no one in it, but that it has been made fair and clean.ಆಗ ಅದು--ನಾನು ಹೊರಟುಬಂದ ನನ್ನ ಮನೆಗೆ ಹಿಂತಿರುಗುವೆನು ಎಂದು ಅಂದುಕೊಂಡು ಬಂದು ಅದು ಬರಿದಾಗಿಯೂ ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವದನ್ನು ಕಂಡಿತು.
45 Then he goes and takes with him seven other spirits worse than himself, and they go in and make it their living-place: and the last condition of that man is worse than the first. Even so will it be with this evil generation.ತರುವಾಯ ಅದು ಹೋಗಿ ತನಗಿಂತ ಕೆಟ್ಟವುಗಳಾಗಿರುವ ಬೇರೆ ಏಳು ಆತ್ಮಗಳನ್ನು ಕರಕೊಂಡು ಅವು ಅದರೊಳಗೆ ಪ್ರವೇಶಿಸಿ ವಾಸಮಾಡುತ್ತವೆ; ಹೀಗೆ ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಗಿರುವದು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವದು ಎಂದು ಹೇಳಿದನು.
46 While he was still talking to the people, his mother and his brothers came, desiring to have talk with him.ಆತನು ಇನ್ನೂ ಜನರ ಸಂಗಡ ಮಾತನಾಡು ತ್ತಿದ್ದಾಗ ಇಗೋ, ಆತನ ತಾಯಿಯೂ ಆತನ ಸಹೋದರರೂ ಆತನೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
47 And one said to him, See, your mother and your brothers are outside, desiring to have talk with you.ಆಗ ಒಬ್ಬನು ಆತನಿಗೆ--ಇಗೋ, ನಿನ್ನ ತಾಯಿಯೂ ನಿನ್ನ ಸಹೋ ದರರೂ ನಿನ್ನೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ ಅಂದನು.
48 But he in answer said to him who gave the news, Who is my mother and who are my brothers?ಅದಕ್ಕೆ ಆತನು ತನಗೆ ಹೇಳಿದವನಿಗೆ ಪ್ರತ್ಯುತ್ತರವಾಗಿ--ನನ್ನ ತಾಯಿ ಯಾರು? ಮತ್ತು ನನ್ನ ಸಹೋದರರು ಯಾರು? ಎಂದು ಹೇಳಿ ಶಿಷ್ಯರ ಕಡೆಗೆ ತನ್ನ ಕೈಚಾಚಿ--
49 And he put out his hand to his disciples and said, See, my mother and my brothers!ಇಗೋ, ನನ್ನ ತಾಯಿಯು ಮತ್ತು ನನ್ನ ಸಹೋದರರು!
50 For whoever does the pleasure of my Father in heaven, he is my brother, and sister, and mother.ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ನನ್ನ ಸಹೋದರನೂ ಸಹೋದರಿ ಯೂ ತಾಯಿಯೂ ಆಗಿದ್ದಾರೆ ಅಂದನು.
Kannada Bible