Mark 7:7
ಮನುಷ್ಯರ ಕಟ್ಟಳೆಗಳನ್ನು ಬೋಧನೆ ಗಳನ್ನಾಗಿ ಮಾಡಿ ಕಲಿಸುವದರಿಂದ ಅವರು ನನ್ನನ್ನು ಆರಾಧಿಸುವದು ವ್ಯರ್ಥವಾಗಿದೆ ಎಂದು ಬರೆಯಲ್ಪಟ್ಟ ಪ್ರಕಾರ ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ.
Mark 7:7 in Other Translations
King James Version (KJV)
Howbeit in vain do they worship me, teaching for doctrines the commandments of men.
American Standard Version (ASV)
But in vain do they worship me, Teaching `as their' doctrines the precepts of men.
Bible in Basic English (BBE)
But their worship is to no purpose, while they give as their teaching the rules of men.
Darby English Bible (DBY)
But in vain do they worship me, teaching [as their] teachings commandments of men.
World English Bible (WEB)
But in vain do they worship me, Teaching as doctrines the commandments of men.'
Young's Literal Translation (YLT)
and in vain do they worship Me, teaching teachings, commands of men;
| Howbeit | μάτην | matēn | MA-tane |
| in vain | δὲ | de | thay |
| do they worship | σέβονταί | sebontai | SAY-vone-TAY |
| me, | με | me | may |
| teaching | διδάσκοντες | didaskontes | thee-THA-skone-tase |
| for doctrines | διδασκαλίας | didaskalias | thee-tha-ska-LEE-as |
| the commandments | ἐντάλματα | entalmata | ane-TAHL-ma-ta |
| of men. | ἀνθρώπων | anthrōpōn | an-THROH-pone |
Cross Reference
ಕೊಲೊಸ್ಸೆಯವರಿಗೆ 2:22
(ಆ ಪದಾರ್ಥಗಳೆಲ್ಲವೂ ಬಳಸುವ ದರಲ್ಲಿ ನಾಶವಾಗುತ್ತವೆ);
ಮತ್ತಾಯನು 6:7
ಆದರೆ ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ ಯಾಕಂದರೆ ತಾವು ಬಹಳವಾಗಿ ಮಾತನಾಡು ವದರಿಂದ ತಮ್ಮ ಪ್ರಾರ್ಥನೆಯು ಕೇಳಲ್ಪಡುವದೆಂದು ಅವರು ಯೋಚಿಸುತ್ತಾರೆ.
ಮತ್ತಾಯನು 15:9
ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.
ಪ್ರಕಟನೆ 22:18
ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂ ದರೆ--ಯಾವನಾದರೂ ಇವುಗಳಿಗೆ ಕೂಡಿಸಿದರೆ ದೇವರು ಅವನಿಗೆ ಈ ಪುಸ್ತಕದಲ್ಲಿ ಬರೆದಿರುವ ಉಪ ದ್ರವಗಳನ್ನು ಕೂಡಿಸುವನು.
ಪ್ರಕಟನೆ 14:11
ಅವರ ಯಾತನೆಯ ಹೊಗೆಯು ಯುಗ ಯುಗಾಂತರಗಳಲ್ಲಿ ಏರುತ್ತಿರುವದು. ಆ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡುವವರೂ ಅದರ ಹೆಸರಿನ ಗುರುತನ್ನು ಹಾಕಿಸಿಕೊಂಡಿರುವವರೂ ಹಗಲಿ ರುಳು ವಿಶ್ರಾಂತಿಯಿಲ್ಲದೆ ಇರುವರು ಎಂದು ಮಹಾ ಶಬ್ದದಿಂದ ಹೇಳಿದನು.
ಯಾಕೋಬನು 2:20
ಆದರೆ ಓ ವ್ಯರ್ಥವಾದವನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಇಷ್ಟವಿದೆಯೋ?
ಯಾಕೋಬನು 1:26
ನಿಮ್ಮಲ್ಲಿ ಭಕ್ತನೆಂದೆ ಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನ ವಾಗಿದೆ.
ತೀತನಿಗೆ 3:9
ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನ್ಯಾಯಪ್ರಮಾಣದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಯಾಕಂದರೆ ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.
1 ತಿಮೊಥೆಯನಿಗೆ 4:1
ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ.
1 ಕೊರಿಂಥದವರಿಗೆ 15:58
ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
1 ಕೊರಿಂಥದವರಿಗೆ 15:14
ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವೂ ವ್ಯರ್ಥವಾದದ್ದು, ನಿಮ್ಮ ನಂಬಿಕೆಯೂ ವ್ಯರ್ಥವಾದದ್ದು.
ಮಲಾಕಿಯ 3:14
ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
ಯೆಶಾಯ 29:13
ಹೀಗಿರುವದರಿಂದ ಕರ್ತನು ಹೇಳುವದೇನಂದರೆ --ಈ ಜನರು ಬಾಯಿಂದ ನನ್ನನ್ನು ಸವಿಾಪಿಸಿ; ಅವರ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ತಮ್ಮ ಹೃದಯವನ್ನು ನನಗೆ ದೂರ ಮಾಡಿಕೊಂಡು ಬಾಯಿ ಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.
1 ಸಮುವೇಲನು 12:21
ಅವು ವ್ಯರ್ಥ ವಾದವುಗಳೇ ಸರಿ. ಯಾಕಂದರೆ ಕರ್ತನು ತನ್ನ ಮಹತ್ತಾದ ಹೆಸರಿಗೋಸ್ಕರ ತನ್ನ ಜನರನ್ನು ಕೈಬಿಡು ವದಿಲ್ಲ.
ಧರ್ಮೋಪದೇಶಕಾಂಡ 12:32
ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.