Mark 11:32
ಆದರೆ ನಾವು--ಮನುಷ್ಯರಿಂದ ಎಂದು ಹೇಳುವದಾದರೆ ನಮಗೆ ಜನರ ಭಯವಿದೆ; ಯಾಕಂದರೆ ಯೋಹಾನನು ನಿಜವಾಗಿಯೂ ಪ್ರವಾದಿಯೆಂದು ಎಲ್ಲರೂ ಎಣಿಸಿಕೊಂಡಿರುವರು ಎಂದು ಅವರು ತಮ್ಮಲ್ಲಿ ತರ್ಕಿಸಿಕೊಂಡರು.
Mark 11:32 in Other Translations
King James Version (KJV)
But if we shall say, Of men; they feared the people: for all men counted John, that he was a prophet indeed.
American Standard Version (ASV)
But should we say, From men--they feared the people: for all verily held John to be a prophet.
Bible in Basic English (BBE)
But if we say, From men--they were in fear of the people, because all took John to be truly a prophet.
Darby English Bible (DBY)
but should we say, Of men -- they feared the people; for all held of John that he was truly a prophet.
World English Bible (WEB)
If we should say, 'From men'"--they feared the people, for all held John to really be a prophet.
Young's Literal Translation (YLT)
But if we may say, From men,' -- they were fearing the people, for all were holding John that he was indeed a prophet;
| But | ἀλλ' | all | al |
| if | ἐὰν | ean | ay-AN |
| we shall say, | εἴπωμεν | eipōmen | EE-poh-mane |
| Of | Ἐξ | ex | ayks |
| men; | ἀνθρώπων | anthrōpōn | an-THROH-pone |
| they feared | ἐφοβοῦντο | ephobounto | ay-foh-VOON-toh |
| the | τὸν | ton | tone |
| people: | λαόν | laon | la-ONE |
| for | ἅπαντες | hapantes | A-pahn-tase |
| all | γὰρ | gar | gahr |
| men counted | εἶχον | eichon | EE-hone |
| τὸν | ton | tone | |
| John, | Ἰωάννην | iōannēn | ee-oh-AN-nane |
| that | ὅτι | hoti | OH-tee |
| he was | ὄντως | ontōs | ONE-tose |
| a prophet | προφήτης | prophētēs | proh-FAY-tase |
| indeed. | ἦν | ēn | ane |
Cross Reference
ಮತ್ತಾಯನು 21:46
ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು.
ಮತ್ತಾಯನು 14:5
ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.
ಅಪೊಸ್ತಲರ ಕೃತ್ಯಗ 5:26
ಆಗ ಅಧಿಪತಿಯು ಅಧಿಕಾರಿಗಳೊಂದಿಗೆ ಹೋಗಿ ಬಲಾತ್ಕಾರವೇನೂ ಮಾಡದೆ ಅವರನ್ನು ಕರತಂದನು; ಯಾಕಂದರೆ ಜನರು ತಮಗೆ ಕಲ್ಲೆಸೆದಾರು ಎಂದು ಅವರು ಭಯಪಟ್ಟಿದ್ದರು.
ಯೋಹಾನನು 10:41
ಆಗ ಅನೇಕರು ಆತನ ಬಳಿಗೆ ಬಂದು--ಯೋಹಾನನು ಅದ್ಭುತಕಾರ್ಯಗಳನ್ನು ಮಾಡಲಿಲ್ಲ; ಆದರೆ ಈ ಮನುಷ್ಯನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ನಿಜವಾಗಿದೆ ಅಂದರು.
ಲೂಕನು 22:2
ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಆತನನ್ನು ಹೇಗೆ ಕೊಲ್ಲ ಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು.
ಲೂಕನು 20:19
ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.
ಲೂಕನು 20:6
ಆದರೆ--ಮನುಷ್ಯ ರಿಂದ ಎಂದು ನಾವು ಹೇಳಿದರೆ ಎಲ್ಲಾ ಜನರು ನಮಗೆ ಕಲ್ಲೆಸೆಯುವರು. ಯಾಕಂದರೆ ಯೋಹಾನನು ಪ್ರವಾದಿಯೆಂದು ಅವರು ಒಪ್ಪಿದ್ದಾರೆ ಎಂದು ಅಂದುಕೊಂಡು
ಲೂಕನು 7:26
ಆದರೆ ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ಎಂದು ನಾನು ನಿಮಗೆ ಹೇಳುತ್ತೇನೆ.
ಮಾರ್ಕನು 12:12
ಆಗ ಆತನು ತಮಗೆ ವಿರೋಧವಾಗಿ ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದು ಆತನನ್ನು ಹಿಡಿಯುವದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿದರು. ಅವರು ಆತನನ್ನು ಬಿಟ್ಟು ಹೊರಟು ಹೋದರು.
ಮಾರ್ಕನು 6:20
ಯಾಕಂದರೆ ಯೋಹಾನನು ನೀತಿವಂತನೂ ಪರಿಶುದ್ಧನೂ ಆದ ಮನುಷ್ಯನೆಂದು ಹೆರೋದನು ತಿಳಿದವನಾಗಿ ಅವನಿಗೆ ಭಯಪಟ್ಟು ಅವನನ್ನು ಕಾಪಾಡುತ್ತಿದ್ದನು; ಮತ್ತು ಅವನು ಹೇಳಿದ್ದನ್ನು ಕೇಳಿ ಆನೇಕ ಕಾರ್ಯಗಳನ್ನು ಮಾಡಿದ್ದಲ್ಲದೆ ಅವನು ಹೇಳುವದನ್ನು ಸಂತೋಷದಿಂದ ಕೇಳಿದನು.
ಮತ್ತಾಯನು 21:31
ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ಮಾಡಿದನು ಎಂದು ಕೇಳಲು ಅವರು ಆತನಿಗೆ--ಮೊದಲನೆಯವನು ಅಂದರು. ಆಗ ಯೇಸು ಅವರಿಗೆ --ಸುಂಕದವರೂ ಸೂಳೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
ಮತ್ತಾಯನು 11:9
ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
ಮತ್ತಾಯನು 3:5
ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು.