Index
Full Screen ?
 

ಮಾರ್ಕನು 1:22

மாற்கு 1:22 ಕನ್ನಡ ಬೈಬಲ್ ಮಾರ್ಕನು ಮಾರ್ಕನು 1

ಮಾರ್ಕನು 1:22
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.

And
καὶkaikay
they
were
astonished
ἐξεπλήσσοντοexeplēssontoayks-ay-PLASE-sone-toh
at
ἐπὶepiay-PEE
his
τῇtay
doctrine:
διδαχῇdidachēthee-tha-HAY
for
αὐτοῦ·autouaf-TOO
he
ἦνēnane
taught
γὰρgargahr
them
διδάσκωνdidaskōnthee-THA-skone
as
αὐτοὺςautousaf-TOOS
one
that
had
ὡςhōsose
authority,
ἐξουσίανexousianayks-oo-SEE-an
and
ἔχωνechōnA-hone
not
καὶkaikay
as
οὐχouchook
the
ὡςhōsose
scribes.
οἱhoioo
γραμματεῖςgrammateisgrahm-ma-TEES

Cross Reference

ಮತ್ತಾಯನು 7:28
ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.

ಯೆರೆಮಿಯ 23:29
ನನ್ನ ವಾಕ್ಯವು ಬೆಂಕಿಯ ಹಾಗಲ್ಲವೋ ಎಂದು ಕರ್ತನು ಅನ್ನುತ್ತಾನೆ. ಅದು ಬಂಡೆಯನ್ನು ತುಂಡು ಮಾಡುವ ಸುತ್ತಿಗೆಯ ಹಾಗಲ್ಲವೋ?

ಇಬ್ರಿಯರಿಗೆ 4:12
ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.

2 ಕೊರಿಂಥದವರಿಗೆ 4:2
ಆದರೆ ನಾಚಿಕೆಗೆ ಕಾರಣ ವಾಗುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯವನ್ನು ಕೆಡಿಸದೆಯೂ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಯೋಗ್ಯರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನ

ಅಪೊಸ್ತಲರ ಕೃತ್ಯಗ 9:21
ಆದರೆ ಕೇಳಿದವರೆಲ್ಲರೂ ಬೆರಗಾಗಿ--ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳು ಮಾಡಿದವನು ಇವನೇ ಅಲ್ಲವೇ, ಅಂಥವರನ್ನು ಬಂಧಿಸಿ ಪ್ರಧಾನಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದನಲ್ಲವೇ ಎಂದು ಮಾತನಾಡಿಕೊಂಡರು.

ಅಪೊಸ್ತಲರ ಕೃತ್ಯಗ 6:10
ಆದರೆ ಅವನು ಜ್ಞಾನದಿಂದಲೂ ಆತ್ಮನಿಂದಲೂ ಮಾತನಾಡಿದ್ದನ್ನು ಅವರು ಎದುರಿಸ ಲಾರದೆ ಹೋದರು.

ಯೋಹಾನನು 7:46
ಅದಕ್ಕೆ ಅಧಿಕಾರಿಗಳು ಪ್ರತ್ಯುತ್ತರವಾಗಿ--ಈ ಮನುಷ್ಯನಂತೆ ಯಾವನೂ ಎಂದೂ ಮಾತನಾಡಲಿಲ್ಲ ಅಂದರು.

ಲೂಕನು 21:15
ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.

ಲೂಕನು 4:32
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.

ಮಾರ್ಕನು 7:3
ಯಾಕಂದರೆ ಫರಿಸಾಯರು ಮತ್ತು ಯೆಹೂದ್ಯರೆಲ್ಲರು ಹಿರಿಯರ ಸಂಪ್ರದಾಯವನ್ನು ಅನುಸರಿಸುವವರಾಗಿ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳದ ಹೊರತು ಊಟಮಾಡುವದಿಲ್ಲ.

ಮತ್ತಾಯನು 23:16
ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ.

ಮತ್ತಾಯನು 13:54
ಆತನು ತನ್ನ ಸ್ವಂತ ದೇಶಕ್ಕೆ ಬಂದು ಅವರ ಸಭಾಮಂದಿರ ದಲ್ಲಿ ಅವರಿಗೆ ಬೋಧಿಸಿದ್ದರಿಂದ ಅವರು ವಿಸ್ಮಯ ಗೊಂಡು--ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದಿದ್ದಾವು?

Chords Index for Keyboard Guitar