Luke 11 - WEB (Kannada)
1 It happened, that when he finished praying in a certain place, one of his disciples said to him, "Lord, teach us to pray, just as John also taught his disciples."ಇದಾದ ಮೇಲೆ ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಮುಗಿಸಿದ ಮೇಲೆ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ--ಕರ್ತನೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆ ಮಾಡುವದಕ್ಕೆ ಕಲಿಸು ಎಂದು ಕೇಳಲು
2 He said to them, "When you pray, say, 'Our Father in heaven, May your name be kept holy. May your Kingdom come. May your will be done on Earth, as it is in heaven.ಆತನು ಅವರಿಗೆ--ನೀವು ಪ್ರಾರ್ಥನೆ ಮಾಡುವಾಗ--ಪರಲೋಕದಲ್ಲಿರುವ ನಮ್ಮ ತಂದೆ ಯೇ, ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯಲ್ಲಿಯೂ ನೆರವೇರಲಿ.
3 Give us day by day our daily bread.ನಮ್ಮ ರೊಟ್ಟಿಯನ್ನು ಪ್ರತಿದಿನವೂ ನಮಗೆ ಕೊಡು.
4 Forgive us our sins, For we ourselves also forgive everyone who is indebted to us. Bring us not into temptation, But deliver us from the evil one.'"ನಮಗೆ ಸಾಲಗಾರ ರಾಗಿರುವ ಪ್ರತಿಯೊಬ್ಬನನ್ನು ಕ್ಷಮಿಸುವಂತೆಯೇ ನಮ್ಮ ಪಾಪಗಳನ್ನು ನಮಗೆ ಕ್ಷಮಿಸು; ನಮ್ಮನ್ನು ಶೋಧನೆ ಯೊಳಗೆ ಸೇರಿಸಬೇಡ; ಆದರೆ ಕೇಡಿನಿಂದ ನಮ್ಮನ್ನು ತಪ್ಪಿಸು ಎಂದು ಹೇಳಿರಿ ಅಂದನು.
5 He said to them, "Which of you, if you go to a friend at midnight, and tell him, 'Friend, lend me three loaves of bread,ಆತನು ಅವರಿಗೆ--ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ--ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಕಡವಾಗಿ ಕೊಡು;
6 for a friend of mine has come to me from a journey, and I have nothing to set before him,'ನನ್ನ ಸ್ನೇಹಿ ತನು ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಬಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಅನ್ನಲು
7 and he from within will answer and say, 'Don't bother me. The door is now shut, and my children are with me in bed. I can't get up and give it to you'?ಅವನು ಒಳಗಿನಿಂದಲೇ ಅವನಿಗೆ ಉತ್ತರವಾಗಿ--ನನ್ನನ್ನು ತೊಂದರೆಪಡಿಸಬೇಡ; ಬಾಗಲು ಈಗ ಮುಚ್ಚಿ ಯದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆಯಲ್ಲಿ ದ್ದಾರೆ; ನಾನೆದ್ದು ಕೊಡಲಾರೆನು ಎಂದು ಹೇಳುವನು.
8 I tell you, although he will not rise and give it to him because he is his friend, yet because of his persistence, he will get up and give him as many as he needs.ಆದರೆ ನಾನು ನಿಮಗೆ ಹೇಳುವದೇನಂದರೆ--ಅವನು ತನ್ನ ಸ್ನೇಹಿತನಾಗಿರುವದರಿಂದ ಎದ್ದು ಅವನಿಗೆ ಕೊಡದೆ ಹೋದರೂ ಅವನು ಮೇಲಿಂದ ಮೇಲೆ ಪೀಡಿಸಿ ಬೇಡುವದರಿಂದ ಎದ್ದು ಅವನಿಗೆ ಬೇಕಾದಷ್ಟು ಕೊಡುವನು.
9 "I tell you, keep asking, and it will be given you. Keep seeking, and you will find. Keep knocking, and it will be opened to you.ನಾನು ನಿಮಗೆ ಹೇಳುವದೇನಂ ದರೆ--ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು.
10 For everyone who asks receives. He who seeks finds. To him who knocks it will be opened.ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು.
11 "Which of you fathers, if your son asks for bread, will give him a stone? Or if he asks for a fish, he won't give him a snake instead of a fish, will he?ನಿಮ್ಮಲ್ಲಿ ತಂದೆ ಯಾಗಿರುವ ಯಾವನಾದರೂ ತನ್ನ ಮಗನು ರೊಟ್ಟಿ ಕೇಳಿದರೆ ಅವನಿಗೆ ಕಲ್ಲನ್ನು ಕೊಡುವನೇ? ಇಲ್ಲವೆ ವಿಾನನ್ನು ಕೇಳಿದರೆ ವಿಾನಿಗೆ ಬದಲಾಗಿ ಅವನಿಗೆ ಹಾವನ್ನು ಕೊಡುವನೇ?
12 Or if he asks for an egg, he won't give him a scorpion, will he?ಇಲ್ಲವೆ ಅವನು ಮೊಟ್ಟೆ ಯನ್ನು ಕೇಳಿದರೆ ಅವನಿಗೆ ಚೇಳನ್ನು ಕೊಡುವನೇ?
13 If you then, being evil, know how to give good gifts to your children, how much more will your heavenly Father give the Holy Spirit to those who ask him?"ಹಾಗಾದರೆ ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೇದಾನಗಳನ್ನು ಕೊಡುವದು ಹೇಗೆಂಬದನ್ನು ತಿಳಿ ದವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತನ್ನನ್ನು ಬೇಡಿಕೊಳ್ಳುವವರಿಗೆ ಪವಿ ತ್ರಾತ್ಮನನ್ನು ದಯಪಾಲಿಸುವನಲ್ಲವೇ?
14 He was casting out a demon, and it was mute. It happened, when the demon had gone out, the mute man spoke; and the multitudes marveled.ತರುವಾಯ ಆತನು ಒಂದು ಮೂಕದೆವ್ವವನ್ನು ಹೊರಡಿಸುತ್ತಿರುವಾಗ ಆದದ್ದೇನಂದರೆ, ಆ ದೆವ್ವವು ಹೊರಟು ಹೋದ ಮೇಲೆ ಆ ಮೂಕನು ಮಾತನಾಡಿ ದನು; ಅದಕ್ಕೆ ಜನರು ಆಶ್ಚರ್ಯಪಟ್ಟರು.
15 But some of them said, "He casts out demons by Beelzebul, the prince of the demons."ಆದರೆ ಅವರಲ್ಲಿ ಕೆಲವರು--ದೆವ್ವಗಳ ಅಧಿಪತಿಯಾದ ಬೆಲ್ಜೆ ಬೂಲನಿಂದ ಅವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
16 Others, testing him, sought from him a sign from heaven.ಬೇರೆಯವರು ಆತನನ್ನು ಶೋಧಿಸುವವ ರಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸುವಂತೆ ಆತನನ್ನು ಕೇಳಿದರು.
17 But he, knowing their thoughts, said to them, "Every kingdom divided against itself is brought to desolation. A house divided against itself falls.ಆದರೆ ಆತನು ಅವರ ಅಲೋಚನೆಗಳನ್ನು ತಿಳಿದವನಾಗಿ ಅವರಿಗೆ--ತನ್ನಲ್ಲಿ ವಿರೋಧವಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುವದು; ಒಂದು ಮನೆಯು ತನಗೆ ವಿರೋಧವಾಗಿ ವಿಭಾಗಿಸಲ್ಪಟ್ಟರೆ ಅದು ಬಿದ್ದು ಹೋಗುವದು.
18 If Satan also is divided against himself, how will his kingdom stand? For you say that I cast out demons by Beelzebul.ಸೈತಾನನು ಸಹ ತನಗೆ ವಿರೋಧವಾಗಿ ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನ ರಾಜ್ಯವು ನಿಲ್ಲುವದು ಹೇಗೆ? ಯಾಕಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಹೊರಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.
19 But if I cast out demons by Beelzebul, by whom do your children cast them out? Therefore will they be your judges.ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯ ತೀರಿಸುವವರಾಗಿರುವರು.
20 But if I by the finger of God cast out demons, then the Kingdom of God has come to you.ಆದರೆ ನಾನು ದೇವರ ಹಸ್ತದಿಂದಲೇ ದೆವ್ವಗಳನ್ನು ಹೊರಡಿಸುವದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
21 "When the strong man, fully armed, guards his own dwelling, his goods are safe.ಆಯುಧ ಗಳನ್ನು ಧರಿಸಿಕೊಂಡು ಬಲಿಷ್ಠನಾದವನೊಬ್ಬನು ತನ್ನ ಅರಮನೆಯನ್ನು ಕಾಯುವದಾದರೆ ಅವನ ಸೊತ್ತು ಸುರಕ್ಷಿತವಾಗಿರುವದು.
22 But when someone stronger attacks him and overcomes him, he takes from him his whole armor in which he trusted, and divides his spoils.ಆದರೆ ಅವನಿಗಿಂತ ಬಲಿ ಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ ಅವನು ನಂಬಿಕೊಂಡಿದ್ದ ಆಯುಧಗಳನ್ನು ಅವನಿಂದ ತಕ್ಕೊಂಡು ತನ್ನ ಸುಲಿಗೆಗಳನ್ನು ಹಂಚುವನು.
23 "He that is not with me is against me. He who doesn't gather with me scatters.ನನ್ನ ಜೊತೆಯಲ್ಲಿ ಇಲ್ಲದಿರುವವನು ನನಗೆ ವಿರೋಧವಾಗಿ ದ್ದಾನೆ; ನನ್ನೊಂದಿಗೆ ಕೂಡಿಸದೆ ಇರುವವನು ಚದರಿ ಸುತ್ತಾನೆ.
24 The unclean spirit, when he has gone out of the man, passes through dry places, seeking rest, and finding none, he says, 'I will turn back to my house from which I came out.'ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದಮೇಲೆ ನೀರಿಲ್ಲದ ಸ್ಥಳಗಳಲ್ಲಿ ತಿರು ಗುತ್ತಾ ವಿಶ್ರಾಂತಿಯನ್ನು ಹುಡುಕಿ ಏನೂ ಕಾಣದೆ ಅದು--ನಾನು ಹೊರಟು ಬಂದ ನನ್ನ ಮನೆಗೆ ಹಿಂದಿ ರುಗುವೆನು ಎಂದು ಅಂದುಕೊಳ್ಳುತ್ತದೆ.
25 When he returns, he finds it swept and put in order.ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿದ್ದನ್ನು ಕಂಡಿತು.
26 Then he goes, and takes seven other spirits more evil than himself, and they enter in and dwell there. The last state of that man becomes worse than the first."ಆಗ ಅದು ಹೋಗಿ ತನಗಿಂತಲೂ ಕೆಟ್ಟವು ಗಳಾದ ಬೇರೆ ಏಳು ದುರಾತ್ಮಗಳನ್ನು ತನ್ನೊಂದಿಗೆ ಕರಕೊಂಡು ಒಳಗೆ ಸೇರಿ ಅಲ್ಲಿ ವಾಸಮಾಡುವವು; ಮತ್ತು ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವದು ಅಂದನು.
27 It came to pass, as he said these things, a certain woman out of the multitude lifted up her voice, and said to him, "Blessed is the womb that bore you, and the breasts which nursed you!"ಇದಾದ ಮೇಲೆ ಆತನು ಇವುಗಳನ್ನು ಹೇಳು ತ್ತಿದ್ದಾಗ ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನು ಎತ್ತಿ ಆತನಿಗೆ--ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು ಎಂದು ಹೇಳಿದಳು.
28 But he said, "On the contrary, blessed are those who hear the word of God, and keep it."ಆದರೆ ಆತನು--ಹೌದು, ಇದಕ್ಕಿಂ ತಲೂ ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯು ವವರೇ ಧನ್ಯರು ಎಂದು ಹೇಳಿದನು.
29 When the multitudes were gathering together to him, he began to say, "This is an evil generation. It seeks after a sign. No sign will be given to it but the sign of Jonah, the prophet.ಜನರು ಗುಂಪುಗುಂಪಾಗಿ ಕೂಡಿ ಬಂದಿದ್ದಾಗ ಆತನು--ಇದು ದುಷ್ಟಸಂತತಿಯು; ಇದು ಸೂಚಕ ಕಾರ್ಯವನ್ನು ಹುಡುಕುತ್ತದೆ. ಪ್ರವಾದಿಯಾದ ಯೋನ ನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡ ಲಾರದು.
30 For even as Jonah became a sign to the Ninevites, so will also the Son of Man be to this generation.ಯೋನನು ನಿನೆವೆಯವರಿಗೆ ಸೂಚನೆ ಯಾಗಿದ್ದಂತೆಯೇ ಮನುಷ್ಯಕುಮಾರನು ಸಹ ಈ ಸಂತತಿಗೆ ಸೂಚನೆಯಾಗಿರುವನು.
31 The Queen of the South will rise up in the judgment with the men of this generation, and will condemn them: for she came from the ends of the earth to hear the wisdom of Solomon; and behold, one greater than Solomon is here.ನ್ಯಾಯ ತೀರ್ಪಿ ನಲ್ಲಿ ದಕ್ಷಿಣದ ರಾಣಿಯು ಈ ಸಂತತಿ ಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕೆ ಭೂಮಿಯ ಕಟ್ಟಕಡೆಯ ಭಾಗಗಳಿಂದ ಬಂದಳು; ಮತ್ತು ಇಗೋ, ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.
32 The men of Nineveh will stand up in the judgment with this generation, and will condemn it: for they repented at the preaching of Jonah, and behold, one greater than Jonah is here.ನಿನೆವೆಯವರು ನ್ಯಾಯತೀರ್ಪಿನಲ್ಲಿ ಈ ಸಂತತಿಯವ ರೊಂದಿಗೆ ಎದ್ದು ಇದನ್ನು ಖಂಡಿಸುವರು. ಯಾಕಂದರೆ ಯೋನನು ಸಾರಿದ್ದನ್ನು ಕೇಳಿ ಅವರು ಮಾನಸಾಂತರ ಪಟ್ಟರು; ಮತ್ತು ಇಗೋ, ಯೋನನಿಗಿಂತಲೂ ಹೆಚ್ಚಿನ ವನು ಇಲ್ಲಿದ್ದಾನೆ.
33 "No man, when he has lit a lamp, puts it in a cellar, nor under a basket, but on a stand, that those who enter in may see the light.ಯಾರೂ ದೀಪವನ್ನು ಹಚ್ಚಿ ಗುಪ್ತ ಸ್ಥಳದಲ್ಲಾಗಲಿ ಇಲ್ಲವೆ ಕೊಳಗದೊಳಗಾಗಲಿ ಇಡುವದಿಲ್ಲ; ಆದರೆ ಒಳಗೆ ಬರುವವರು ಬೆಳಕನ್ನು ನೋಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡು ತ್ತಾರಷ್ಟೆ.
34 The lamp of the body is the eye. Therefore when your eye is good, your whole body is also full of light; but when it is evil, your body also is full of darkness.ಕಣ್ಣು ಶರೀರದ ಬೆಳಕಾಗಿದೆ; ಆದದರಿಂದ ನಿನ್ನ ಕಣ್ಣು ಶುದ್ಧವಾಗಿದ್ದರೆ ನಿನ್ನ ಶರೀರವೆಲ್ಲವು ತುಂಬಾ ಬೆಳಕಾಗಿರುತ್ತದೆ; ಅದು ಕೆಟ್ಟದ್ದಾಗಿದ್ದರೆ ನಿನ್ನ ಶರೀರವು ಸಹ ಕತ್ತಲೆಯಿಂದ ತುಂಬಿರುವದು.
35 Therefore see whether the light that is in you isn't darkness.ಆದದರಿಂದ ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ;
36 If therefore your whole body is full of light, having no part dark, it will be wholly full of light, as when the lamp with its bright shining gives you light."ಆದಕಾರಣ ಯಾವ ಭಾಗದಲ್ಲಿಯೂ ಕತ್ತಲೆಯಾಗಿ ರದೆ ನಿನ್ನ ಶರೀರವೆಲ್ಲವೂ ಪೂರ್ಣವಾಗಿ ಬೆಳಕಾಗಿರುವ ದಾದರೆ ಪ್ರಕಾಶಮಾನವಾದ ದೀಪವು ನಿನಗೆ ಬೆಳಕು ಕೊಡುವ ಪ್ರಕಾರ ಸಮಸ್ತವೂ ಬೆಳಕಾಗಿರುವದು ಎಂದು ಹೇಳಿದನು.
37 Now as he spoke, a certain Pharisee asked him to dine with him. He went in, and sat at the table.ಆತನು ಮಾತನಾಡುತ್ತಿದ್ದಾಗ ಒಬ್ಬಾನೊಬ್ಬ ಫರಿಸಾಯನು ತನ್ನೊಂದಿಗೆ ಊಟಮಾಡಬೇಕೆಂದು ಆತನನ್ನು ಬೇಡಿಕೊಂಡನು. ಆಗ ಆತನು ಒಳಗೆ ಹೋಗಿ ಊಟಕ್ಕೆ ಕೂತುಕೊಂಡನು.
38 When the Pharisee saw it, he marveled that he had not first washed himself before dinner.ಆದರೆ ಊಟಕ್ಕೆ ಮೊದಲು ಆತನು ಕೈತೊಳಕೊಳ್ಳದೆ ಇರುವದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು.
39 The Lord said to him, "Now you Pharisees cleanse the outside of the cup and of the platter, but your inward part is full of extortion and wickedness.ಆಗ ಕರ್ತನು ಅವನಿಗೆ-- ಫರಿಸಾಯರಾದ ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನ ದಿಂದಲೂ ತುಂಬಿರುತ್ತದೆ
40 You foolish ones, didn't he who made the outside make the inside also?ಮೂರ್ಖರೇ, ಹೊರ ಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ?
41 But give for gifts to the needy those things which are within, and behold, all things will be clean to you.ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.
42 But woe to you Pharisees! For you tithe mint and rue and every herb, but you bypass justice and the love of God. You ought to have done these, and not to have left the other undone.ಆದರೆ ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಮರುಗಪತ್ರೆ ಸದಾಪು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು ನ್ಯಾಯತೀರ್ಪನ್ನೂ ದೇವರಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಇವುಗಳನ್ನು ತಪ್ಪದೆ ಮಾಡಿ ಬೇರೆಯವು ಗಳನ್ನು ಬಿಡದೆ ಮಾಡಬೇಕಾಗಿತ್ತು.
43 Woe to you Pharisees! For you love the best seats in the synagogues, and the greetings in the marketplaces.ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸಭಾಮಂದಿರ ಗಳಲ್ಲಿ ಅತ್ಯುನ್ನತ ಸ್ಥಾನಗಳನ್ನೂ ಸಂತೆಗಳಲ್ಲಿ ವಂದನೆಗಳನ್ನೂ ಪ್ರೀತಿಸುತ್ತೀರಿ.
44 Woe to you, scribes and Pharisees, hypocrites! For you are like hidden graves, and the men who walk over them don't know it."ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೊ! ಯಾಕಂದರೆ ನೀವು ಕಾಣಿಸದ ಸಮಾಧಿಗಳಂತೆ ಇದ್ದೀರಿ; ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು ಎಂದು ಹೇಳಿದನು.
45 One of the lawyers answered him, "Teacher, in saying this you insult us also."ಆಗ ನ್ಯಾಯಶಾಸ್ತ್ರಿಗಳಲ್ಲಿ ಒಬ್ಬನು ಆತನಿಗೆ-- ಬೋಧಕನೇ, ನೀನು ಇವುಗಳನ್ನು ಹೇಳುವದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀ ಅಂದನು.
46 He said, "Woe to you lawyers also! For you load men with burdens that are difficult to carry, and you yourselves won't even lift one finger to help carry those burdens.ಅದಕ್ಕೆ ಆತನು--ನ್ಯಾಯಶಾಸ್ತ್ರಿಗಳಾದ ನಿಮಗೂ ಅಯ್ಯೋ! ಯಾಕಂದರೆ ಹೊರಲು ಕಠಿಣವಾದ ಹೊರೆ ಗಳನ್ನು ಮನುಷ್ಯರ ಮೇಲೆ ಹೊರಿಸಿ ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ನೀವು ಆ ಹೊರೆಗಳನ್ನು ಮುಟ್ಟು ವದಿಲ್ಲ.
47 Woe to you! For you build the tombs of the prophets, and your fathers killed them.ನಿಮಗೆ ಅಯ್ಯೋ! ಯಾಕಂದರೆ ನಿಮ್ಮ ತಂದೆಗಳು ಪ್ರವಾದಿಗಳನ್ನು ಕೊಂದರು. ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.
48 So you testify and consent to the works of your fathers. For they killed them, and you build their tombs.ಇದರಿಂದ ನಿಜವಾ ಗಿಯೂ ನಿಮ್ಮ ತಂದೆಗಳ ಕೃತ್ಯಗಳನ್ನು ನೀವು ಒಪ್ಪಿ ಕೊಳ್ಳುವಂತೆ ಸಾಕ್ಷೀಕರಿಸುತ್ತೀರಿ; ಯಾಕಂದರೆ ಅವರು ನಿಜವಾಗಿಯೂ ಅವರನ್ನು ಕೊಂದರು; ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.
49 Therefore also the wisdom of God said, 'I will send to them prophets and apostles; and some of them they will kill and persecute,ಆದದರಿಂದ ದೇವರ ಜ್ಞಾನವು ಸಹ ಹೇಳಿದ್ದೇನಂದರೆ -- ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸು ವೆನು; ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸಿಸುವರು.
50 that the blood of all the prophets, which was shed from the foundation of the world, may be required of this generation;ಹೀಗೆ ಜಗತ್ತಿನ ಅಸ್ತಿವಾರ ಮೊದಲುಗೊಂಡು ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಉತ್ತರ ಕೊಡಬೇಕಾಗಿರುವದು.
51 from the blood of Abel to the blood of Zachariah, who perished between the altar and the sanctuary.' Yes, I tell you, it will be required of this generation.ಹೇಬೆಲನ ರಕ್ತ ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
52 Woe to you lawyers! For you took away the key of knowledge. You didn't enter in yourselves, and those who were entering in, you hindered."ನ್ಯಾಯ ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಯಾಕಂದರೆ ನೀವು ಜ್ಞಾನದ ಬೀಗದ ಕೈಯನ್ನು ತಕ್ಕೊಂಡಿದ್ದೀರಿ, ನೀವಂತೂ ಒಳಗೆ ಪ್ರವೇಶಿಸಲಿಲ್ಲ. ಒಳಗೆ ಪ್ರವೇಶಿಸುತ್ತಿರುವವ ರಿಗೂ ನೀವು ತಡೆದಿರಿ ಎಂದು ಹೇಳಿದನು.
53 As he said these things to them, the scribes and the Pharisees began to be terribly angry, and to draw many things out of him;ಆತನು ಅವರಿಗೆ ಈ ವಿಷಯಗಳನ್ನು ಹೇಳು ತ್ತಿದ್ದಾಗ ಶಾಸ್ತ್ರಿಗಳು ಮತ್ತು ಫರಿಸಾಯರು ಕೋಪಾವೇಶ ವುಳ್ಳವರಾಗಿ ಆತನು ಇನ್ನೂ ಅನೇಕವಾದವುಗಳ ವಿಷಯವಾಗಿ ಮಾತನಾಡುವಂತೆ ಆತನನ್ನು ಉದ್ರೇಕ ಗೊಳಿಸಲಾರಂಭಿಸಿದರು.
54 lying in wait for him, and seeking to catch him in something he might say, that they might accuse him.ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು.
Kannada Bible