Bible

John 10 - WEB (Kannada)

1 "Most assuredly, I tell you, one who doesn't enter by the door into the sheep fold, but climbs up some other way, the same is a thief and a robber.ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಬಾಗಲಿನಿಂದ ಕುರೀಹಟ್ಟಿಯೊಳಗೆ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನೇ ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ.

2 But one who enters in by the door is the shepherd of the sheep.ಆದರೆ ಬಾಗಲಿ ನಿಂದ ಒಳಗೆ ಬರುವವನು ಆ ಕುರಿಗಳ ಕುರುಬನಾಗಿ ದ್ದಾನೆ.

3 The gatekeeper opens the gate for him, and the sheep listen to his voice. He calls his own sheep by name, and leads them out.ಬಾಗಲು ಕಾಯುವವನು ಅವನಿಗೆ ತೆರೆಯು ತ್ತಾನೆ; ಕುರಿಗಳು ಅವನ ಸ್ವರವನ್ನು ಕೇಳುತ್ತವೆ, ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವು ಗಳನ್ನು ಹೊರಗೆ ನಡಿಸುತ್ತಾನೆ.

4 Whenever he brings out his own sheep, he goes before them, and the sheep follow him, for they know his voice.ಅವನು ತನ್ನ ಕುರಿ ಗಳನ್ನು ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳು ಕೊಳ್ಳುವದರಿಂದ ಅವನನ್ನು ಹಿಂಬಾಲಿಸುತ್ತವೆ;

5 They will by no means follow a stranger, but will flee from him; for they don't know the voice of strangers."ಅವು ಅನ್ಯನನ್ನು ಹಿಂಬಾಲಿಸದೆ ಅವನ ಬಳಿಯಿಂದ ಓಡಿ ಹೋಗುವವು; ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ.

6 Jesus spoke this parable to them, but they didn't understand what he was telling them.ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದನು; ಆದರೆ ಆತನು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಅವರು ಗ್ರಹಿಸಲಿಲ್ಲ.

7 Jesus therefore said to them again, "Most assuredly, I tell you, I am the sheep's door.ಯೇಸು ತಿರಿಗಿ ಅವರಿಗೆ--ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗ ಲಾಗಿದ್ದೇನೆ.

8 All who came before me are thieves and robbers, but the sheep didn't listen to them.ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

9 I am the door. If anyone enters in by me, he will be saved, and will go in and go out, and will find pasture.ನಾನೇ ಆಬಾಗಲು; ನನ್ನ ಮೂಲಕವಾಗಿ ಯಾವನಾದರೂ ಪ್ರವೇಶಿಸಿದರೆ ಅವನು ರಕ್ಷಣೆ ಹೊಂದುವನು; ಇದ ಲ್ಲದೆ ಅವನು ಒಳಗೆ ಹೋಗುತ್ತಾನೆ, ಹೊರಗೆ ಬರು ತ್ತಾನೆ ಮತ್ತು ಮೇವನ್ನು ಕಂಡುಕೊಳ್ಳುತ್ತಾನೆ.

10 The thief only comes to steal, kill, and destroy. I came that they may have life, and may have it abundantly.ಕಳ್ಳನು ಕದ್ದುಕೊಳ್ಳುವದಕ್ಕೂ ಕೊಲ್ಲುವದಕ್ಕೂ ಹಾಳುಮಾಡು ವದಕ್ಕೂ ಮಾತ್ರ ಬರುತ್ತಾನೇ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಸಮೃದ್ಧಿಯು ಇರಬೇಕೆಂತಲೂ ಬಂದೆನು.

11 I am the good shepherd. The good shepherd lays down his life for the sheep.ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

12 He who is a hired hand, and not a shepherd, who doesn't own the sheep, sees the wolf coming, leaves the sheep, and flees. The wolf snatches the sheep, and scatters them.ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ.

13 The hired hand flees because he is a hired hand, and doesn't care for the sheep.ಕೂಲಿಯವನು ಕೂಲಿಯವನೇ ಆಗಿರುವದರಿಂದ ಕುರಿಗಳಿಗೋಸ್ಕರ ಚಿಂತಿಸದೆ ಓಡಿ ಹೋಗುತ್ತಾನೆ.

14 I am the good shepherd. I know my own, and I'm known by my own;ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ.

15 even as the Father knows me, and I know the Father. I lay down my life for the sheep.ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.

16 I have other sheep, which are not of this fold. I must bring them also, and they will hear my voice. They will become one flock with one shepherd.ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.

17 Therefore the Father loves me, because I lay down my life, that I may take it again.ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.

18 No one takes it away from me, but I lay it down by myself. I have power to lay it down, and I have power to take it again. I received this commandment from my Father."ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.

19 Therefore a division arose again among the Jews because of these words.ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ತಿರಿಗಿ ಭೇದಉಂಟಾಯಿತು.

20 Many of them said, "He has a demon, and is insane! Why do you listen to him?"ಅವರಲ್ಲಿ ಅನೇಕರು--ಅವನಿಗೆ ದೆವ್ವ ಹಿಡಿದದೆ ಮತ್ತು ಹುಚ್ಚನಾಗಿ ದ್ದಾನೆ; ನೀವು ಯಾಕೆ ಅವನ ಮಾತನ್ನು ಕೇಳುತ್ತೀರಿ ಅಂದರು.

21 Others said, "These are not the sayings of one possessed by a demon. It isn't possible for a demon to open the eyes of the blind, is it?"ಬೇರೆಯವರು--ಇವು ದೆವ್ವ ಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆ ಯುವದಕ್ಕಾದೀತೇ ಅಂದರು.

22 It was the Feast of the Dedication{The "Feast of the Dedication" is the Greek name for "Chanukkah," a celebration of the rededication of the Temple.} at Jerusalem.ಯೆರೂಸಲೇಮಿನಲ್ಲಿ (ದೇವಾಲಯದ) ಪ್ರತಿ ಷ್ಠೆಯ ಹಬ್ಬವಿತ್ತು; ಆಗ ಚಳಿಗಾಲವಾಗಿತ್ತು.

23 It was winter, and Jesus was walking in the temple, in Solomon's porch.ಯೇಸು ದೇವಾಲಯದಲ್ಲಿ ಸೊಲೊಮೋನನ ದ್ವಾರಾಂಗಳ ದೊಳಗೆ ತಿರುಗಾಡುತ್ತಿದ್ದನು;

24 The Jews therefore came around him and said to him, "How long will you hold us in suspense? If you are the Christ, tell us plainly."ಆಗ ಯೆಹೂದ್ಯರು ಆತನ ಸುತ್ತಲು ಬಂದು ಆತನಿಗೆ--ಇನ್ನು ಎಷ್ಟರ ವರೆಗೆ ನಮ್ಮನ್ನು ಸಂದೇಹಪಡಿಸುತ್ತೀ? ನೀನು ಕ್ರಿಸ್ತ ನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು ಅಂದರು.

25 Jesus answered them, "I told you, and you don't believe. The works that I do in my Father's name, these testify about me.ಯೇಸು ಅವರಿಗೆ--ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬಲಿಲ್ಲ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತವೆ.

26 But you don't believe, because you are not of my sheep, as I told you.ಆದರೆ ನಾನು ನಿಮಗೆ ಹೇಳಿದಂತೆ ನೀವು ನನ್ನ ಕುರಿಗಳಲ್ಲವಾದದರಿಂದ ನಂಬದೆ ಇದ್ದೀರಿ.

27 My sheep hear my voice, and I know them, and they follow me.ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ, ನಾನು ಅವುಗಳನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.

28 I give eternal life to them. They will never perish, and no one will snatch them out of my hand.ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದಿಲ್ಲ; ಇಲ್ಲವೆ ಅವು ಗಳನ್ನು ಯಾವನೂ ನನ್ನ ಕೈಯೊಳಗಿಂದ ಕಸಕೊಳ್ಳ ಲಾರನು.

29 My Father, who has given them to me, is greater than all. No one is able to snatch them out of my Father's hand.ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು.

30 I and the Father are one."ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.

31 Therefore Jews took up stones again to stone him.ಆಗ ಯೆಹೂದ್ಯರು ತಿರಿಗಿ ಆತನನ್ನು ಕೊಲ್ಲುವ ದಕ್ಕಾಗಿ ಕಲ್ಲುಗಳನ್ನು ತಕ್ಕೊಂಡರು.

32 Jesus answered them, "I have shown you many good works from my Father. For which of those works do you stone me?"ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.

33 The Jews answered him, "We don't stone you for a good work, but for blasphemy: because you, being a man, make yourself God."ಅದಕ್ಕೆ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ಒಳ್ಳೇ ಕಾರ್ಯಗಳಿಗೋಸ್ಕರವಲ್ಲ, ದೇವದೂಷಣೆಗೋಸ್ಕ ರವೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರಾಗಿ ಮಾಡಿಕೊಳ್ಳುವದಕ್ಕೊಸ್ಕರವೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.

34 Jesus answered them, "Isn't it written in your law, 'I said, you are gods?'ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ದೇವರುಗಳಾ ಗಿದ್ದೀರಿ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ನ್ಯಾಯಪ್ರಮಾಣದಲ್ಲಿ ಬರೆದಿರುವದಿಲ್ಲವೋ?

35 If he called them gods, to whom the word of God came (and the Scripture can't be broken),ಹಾಗಾದರೆ ದೇವರವಾಕ್ಯವನ್ನು ಹೊಂದಿದವರು ದೇವರುಗಳೆಂದು ಆತನು ಕರೆದಿರುವಲ್ಲಿ ಬರಹವು ವ್ಯರ್ಥವಾಗಲಾರದಷ್ಟೆ.

36 Do you say of him whom the Father sanctified and sent into the world, 'You blaspheme,' because I said, 'I am the Son of God?'ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ--ನೀನು ದೇವ ದೂಷಣೆ ಮಾಡುತ್ತೀ ಎಂದು ನೀವು ಅನ್ನುತ್ತೀರೋ?

37 If I don't do the works of my Father, don't believe me.ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದೆ ಹೋದರೆ ನನ್ನನ್ನು ನಂಬಬೇಡಿರಿ.

38 But if I do them, though you don't believe me, believe the works; that you may know and believe that the Father is in me, and I in the Father."ನಾನು ಮಾಡಿ ದರೂ ನೀವು ನನ್ನನ್ನು ನಂಬದಿದ್ದರೆ ತಂದೆಯು ನನ್ನ ಲ್ಲಿಯೂ ನಾನು ಆತನಲ್ಲಿಯೂ ಇರುವದನ್ನು ನೀವು ತಿಳಿದುಕೊಂಡು ನಂಬುವಂತೆ ಈ ಕಾರ್ಯಗಳನ್ನಾ ದರೂ ನಂಬಿರಿ ಅಂದನು.

39 They sought again to seize him, and he went out of their hand.ಆದದರಿಂದ ತಿರಿಗಿ ಅವರು ಆತನನ್ನು ಹಿಡಿಯುವದಕ್ಕೆ ಹುಡುಕಿದರು; ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು

40 He went away again beyond the Jordan into the place where John was baptizing at first, and there he stayed.ಯೋಹಾನನು ಮೊದಲು ಬಾಪ್ತಿಸ್ಮ ಮಾಡಿಸುತ್ತಿದ್ದ ಸ್ಥಳವಾದ ಯೊರ್ದನಿನ ಆಚೆಗೆ ತಿರಿಗಿಹೋಗಿ ಅಲ್ಲಿ ವಾಸಿಸಿದನು.

41 Many came to him. They said, "John indeed did no sign, but everything that John said about this man is true."ಆಗ ಅನೇಕರು ಆತನ ಬಳಿಗೆ ಬಂದು--ಯೋಹಾನನು ಅದ್ಭುತಕಾರ್ಯಗಳನ್ನು ಮಾಡಲಿಲ್ಲ; ಆದರೆ ಈ ಮನುಷ್ಯನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ನಿಜವಾಗಿದೆ ಅಂದರು.

42 Many believed in him there.ಅಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು.

Kannada Bible