Bible

Job 39 - WEB (Kannada)

1 "Do you know the time when the mountain goats give birth? Do you watch when the doe bears fawns?ಬಂಡೆಗಳ ಕಾಡು ಮೇಕೆಗಳು ಈಯುವ ಕಾಲವನ್ನು ನೀನು ತಿಳಿಯುತ್ತೀಯೋ? ದುಪ್ಪಿಗಳಿಗೆ ವೇದನೆ ಬರುವದನ್ನು ಪರಾಮರಿಸು ತ್ತೀಯೋ?

2 Can you number the months that they fulfill? Or do you know the time when they give birth?ಅವುಗಳ ಗರ್ಭ ತುಂಬುವ ತಿಂಗಳು ಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ತಿಳಿಯುತ್ತೀಯೋ?

3 They bow themselves, they bring forth their young, They end their labor pains.ಅವು ಬೊಗ್ಗಿಕೊಂಡು ಮರಿಗಳನ್ನು ಹಾಕುತ್ತವೆ. ವೇದನೆಗಳನ್ನು ಪರಿಹರಿಸಿಕೊಳ್ಳುತ್ತವೆ.

4 Their young ones become strong. They grow up in the open field. They go forth, and don't return again.ಅವುಗಳ ಮರಿಗಳು ಚಂದವಾಗಿದ್ದು ಪೈರಿನಲ್ಲಿ ಬೆಳೆಯುತ್ತವೆ; ಅವು ಹೊರಟು ಹೋಗಿ ಅವುಗಳ ಬಳಿಗೆ ತಿರುಗಿ ಬರುವದಿಲ್ಲ.

5 "Who has set the wild donkey free? Or who has loosened the bonds of the swift donkey,ಕಾಡುಕತ್ತೆಯನ್ನು ಬಿಡುಗಡೆ ಮಾಡಿ ಕಳುಹಿಸಿದ ವನಾರು? ಕಾಡುಕತ್ತೆಯ ಸಂಕೋಲೆಗಳನ್ನು ಬಿಡಿಸಿದ ವನಾರು?

6 Whose home I have made the wilderness, And the salt land his dwelling-place?ಅರಣ್ಯವನ್ನು ಅದರ ಮನೆಯಾಗಿಯೂ ಉಪ್ಪಿನ ಬೈಲನ್ನು ಅದರ ವಾಸಸ್ಥಳವಾಗಿಯೂ ನೇಮಿಸಿ ದ್ದೇನಲ್ಲಾ.

7 He scorns the tumult of the city, Neither hears he the shouting of the driver.ಪಟ್ಟಣದ ಸಮೂಹಕ್ಕೆ ಗೇಲಿ ಮಾಡುತ್ತದೆ. ಓಡಿಸುವವನ ಕೂಗನ್ನು ಲಕ್ಷಿಸುವದಿಲ್ಲ.

8 The range of the mountains is his pasture, He searches after every green thing.ಪರ್ವತ ಗಳಲ್ಲಿ ಕಂಡದ್ದೆಲ್ಲಾ ಅದರ ಮೇವು; ಹಸುರಾದದ್ದನ್ನೆಲ್ಲಾ ಹುಡುಕುತ್ತದೆ.

9 "Will the wild ox be content to serve you? Or will he stay by your feeding trough?ಕಾಡು ಕೋಣವು ನಿನ್ನನ್ನು ಸೇವಿಸಲು ಮನಸ್ಸಾಗಿ ರುವದೋ? ಇಲ್ಲವೆ ನಿನ್ನ ಗೋದಲಿಯ ಬಳಿಯಲ್ಲಿ ಉಳುಕೊಳ್ಳುವದೋ?

10 Can you hold the wild ox in the furrow with his harness? Or will he till the valleys after you?ಕಾಡು ಕೋಣವನ್ನು ಹುರಿ ಯಿಂದ ಸಾಲಾಗಿ ಕಟ್ಟುವಿಯೋ? ಇಲ್ಲವೆ ಅದು ನಿನ್ನ ಹಿಂದೆ ಕಣಿವೆಗಳಿಗೆ ಹಲಿಗೆ ಹೊಡೆಯುವದೋ?

11 Will you trust him, because his strength is great? Or will you leave to him your labor?ಅದರ ಶಕ್ತಿ ಬಹಳವಾಗಿರುವದರಿಂದ ಅದರಲ್ಲಿ ಭರವಸ ಇಡುವಿಯೋ? ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸುವಿಯೋ?

12 Will you confide in him, that he will bring home your seed, And gather the grain of your threshing floor?ಅದು ನಿನ್ನ ಬೀಜವನ್ನು ಮನೆಗೆ ತರುವದೆಂದೂ ನಿನ್ನ ಕಣದಲ್ಲಿ ಕೂಡಿಸುವದೆಂದೂ ಅದನ್ನು ನಂಬುವಿಯೋ?

13 "The wings of the ostrich wave proudly; But are they the feathers and plumage of love?ನೀನು ನವಿಲುಗಳಿಗೆ ಅಂದವಾದ ರೆಕ್ಕೆಗಳನ್ನು ಉಷ್ಟ್ರಪಕ್ಷಿಗೆ ಗರಿಗಳನ್ನೂ ರೆಕ್ಕೆಗಳನ್ನೂ ಕೊಟ್ಟಿರು ತ್ತೀಯೋ?

14 For she leaves her eggs on the earth, Warms them in the dust,ಅದು ತನ್ನ ಮೊಟ್ಟೆಗಳನ್ನು ಭೂಮಿ ಯಲ್ಲಿ ಬಿಟ್ಟು ದೂಳಿನಲ್ಲಿ ಅವುಗಳನ್ನು ಬಿಸಿಮಾಡು ತ್ತದೆ.

15 And forgets that the foot may crush them, Or that the wild animal may trample them.ಕಾಲು ಅದನ್ನು ತುಳಿದೀತು, ಇಲ್ಲವೆ ಅಡವಿಯ ಮೃಗ ಅದನ್ನು ಜಜ್ಜೀತು ಎಂದು ಮರೆತು ಬಿಡುತ್ತದೆ.

16 She deals harshly with her young ones, as if they were not hers. Though her labor is in vain, she is without fear,ತನ್ನ ಮರಿಗಳನ್ನು ತನ್ನವುಗಳಲ್ಲವೆಂದು ಕಠಿಣವಾಗಿ ನಡಿಸುತ್ತದೆ. ತನ್ನ ಕಷ್ಟವು ವ್ಯರ್ಥವೆಂಬ ಹೆದರಿಕೆಯೂ ಇಲ್ಲ.

17 Because God has deprived her of wisdom, Neither has he imparted to her understanding.ದೇವರು ಅದಕ್ಕೆ ಜ್ಞಾನ ತಪ್ಪಿಸಿದ್ದಾನೆ. ಗ್ರಹಿಕೆಯನ್ನು ಅದಕ್ಕೆ ಕೊಡಲಿಲ್ಲ.

18 When she lifts up herself on high, She scorns the horse and his rider.ಉನ್ನತಕ್ಕೆ ಓಡುವ ಸಮಯದಲ್ಲಿ ಕುದುರೆಯನ್ನೂ ರಾಹುತನನ್ನೂ ನೋಡಿ ನಗುತ್ತದೆ.

19 "Have you given the horse might? Have you clothed his neck with a quivering mane?ನೀನು ಕುದುರೆಗೆ ತ್ರಾಣವನ್ನು ಕೊಟ್ಟಿದ್ದೀಯೋ? ಅದರ ಕುತ್ತಿಗೆಗೆ ಗುಡುಗನ್ನು ಹೊದ್ದಿಸಿದಿಯೋ?

20 Have you made him to leap as a locust? The glory of his snorting is awesome.ಮಿಡಿತೆಯ ಹಾಗೆ ಅದನ್ನು ಭಯಪಡಿಸುತ್ತೀಯೋ? ಪ್ರತಾಪವು, ಅದರ ಮೂಗಿನ ಸೊರಳೆಯು ಭಯಂ ಕರವಾಗಿದೆ.

21 He paws in the valley, and rejoices in his strength: He goes out to meet the armed men.ಅದು ತಗ್ಗಿನಲ್ಲಿ ಕೆರೆಯುತ್ತದೆ; ತನ್ನ ಶಕ್ತಿಯಲ್ಲಿ ಸಂತೋಷಿಸುತ್ತದೆ; ಯುದ್ಧಸನ್ನದ್ಧರ ಎದು ರಾಗಿ ಹೊರಡುತ್ತದೆ.

22 He mocks at fear, and is not dismayed; Neither does he turn back from the sword.ಭಯಕ್ಕೆ ಹಾಸ್ಯ ಮಾಡು ತ್ತದೆ, ಹೆದರುವದಿಲ್ಲ. ಇಲ್ಲವೆ ಕತ್ತಿಯಿಂದ ತಿರುಗು ವದಿಲ್ಲ.

23 The quiver rattles against him, The flashing spear and the javelin.ಅದರ ಮೇಲೆ ಬತ್ತಳಿಕೆಯೂ ಪ್ರಜ್ವಲಿ ಸುವ ಭಲ್ಲೆಯೂ ಭರ್ಜಿಯೂ ಥಳಥಳಿಸುತ್ತವೆ.

24 He eats up the ground with fierceness and rage, Neither does he stand still at the sound of the trumpet.ಅದು ಕೋಪದಿಂದಲೂ ಉಗ್ರತೆಯಿಂದಲೂ ನೆಲ ನುಂಗುತ್ತದೆ; ಇಲ್ಲವೆ ಅದು ತುತೂರಿಯ ಶಬ್ದಕ್ಕೆ --ಹಾ, ಹಾ, ಅನ್ನುತ್ತದೆ; ಅದು ನಂಬುವದಿಲ್ಲ.

25 As often as the trumpet sounds he snorts, 'Aha!' He smells the battle afar off, The thunder of the captains, and the shouting.ತುತೂರಿಗಳ ಮಧ್ಯದಲ್ಲಿ ದೂರದಿಂದ ಕಾಳಗವನ್ನೂ ಅಧಿಪತಿಗಳ ಅಬ್ಬರವನ್ನೂ ಯುದ್ಧದ ಧ್ವನಿಯನ್ನೂ ಮೂಸಿ ನೋಡುತ್ತದೆ.

26 "Is it by your wisdom that the hawk soars, And stretches her wings toward the south?ಹದ್ದು ನಿನ್ನ ಜ್ಞಾನದಿಂದ ಹಾರುತ್ತದೋ? ತನ್ನ ರೆಕ್ಕೆಗಳನ್ನು ದಕ್ಷಿಣ ಕಡೆಗೆ ಚಾಚುತ್ತದೋ?

27 Is it at your command that the eagle mounts up, And makes his nest on high?ರಣ ಹದ್ದು ಎತ್ತರಕ್ಕೆ ಹೋಗುವದೂ ತನ್ನ ಗೂಡನ್ನು ಎತ್ತುವದೂ ನಿನ್ನ ಅಪ್ಪಣೆಯ ಪ್ರಕಾರವೋ?

28 On the cliff he dwells, and makes his home, On the point of the cliff, and the stronghold.ಅದು ಬಂಡೆಯಲ್ಲಿ ವಾಸಿಸುತ್ತದೆ; ಬಂಡೆಯ ಸಂದುಗಳ ಲ್ಲಿಯೂ ದುರ್ಗಗಳಲ್ಲಿಯೂ ಅದು ಉಳುಕೊಳ್ಳುತ್ತದೆ.

29 From there he spies out the prey. His eyes see it afar off.ಅಲ್ಲಿಂದ ಆಹಾರವನ್ನು ಹುಡುಕುತ್ತದೆ. ಅದರ ಕಣ್ಣುಗಳು ದೂರಕ್ಕೆ ನೋಡುತ್ತವೆ.

30 His young ones also suck up blood. Where the slain are, there he is."ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು.

Kannada Bible