ಯೋಬನು 35:5
ಆಕಾಶಗಳನ್ನು ದೃಷ್ಟಿಸಿ ನೋಡು, ಮೇಘಗಳನ್ನು ದೃಷ್ಟಿಸು; ಅವು ನಿನಗಿಂತ ಎತ್ತರವಾಗಿವೆ.
Look | הַבֵּ֣ט | habbēṭ | ha-BATE |
unto the heavens, | שָׁמַ֣יִם | šāmayim | sha-MA-yeem |
and see; | וּרְאֵ֑ה | ûrĕʾē | oo-reh-A |
behold and | וְשׁ֥וּר | wĕšûr | veh-SHOOR |
the clouds | שְׁ֝חָקִ֗ים | šĕḥāqîm | SHEH-ha-KEEM |
which are higher | גָּבְה֥וּ | gobhû | ɡove-HOO |
than | מִמֶּֽךָּ׃ | mimmekkā | mee-MEH-ka |
Cross Reference
ಯೋಬನು 22:12
ದೇವರು ಆಕಾಶದ ಎತ್ತರದಲ್ಲಿದ್ದಾನಲ್ಲವೋ? ನಕ್ಷತ್ರಗಳ ಎತ್ತರ ನೋಡು, ಅವು ಎಷ್ಟು ಉನ್ನತ!
ನಹೂಮ 1:3
ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
ಯೆಶಾಯ 55:9
ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
ಯೆಶಾಯ 40:22
ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
ಕೀರ್ತನೆಗಳು 8:3
ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
ಯೋಬನು 37:22
ಉತ್ತರದಿಂದ ಉತ್ತಮ ಹವಾಮಾನ ಬರುತ್ತದೆ; ದೇವರ ಬಳಿಯಲ್ಲಿ ಭಯಂಕರವಾದ ಘನ ಉಂಟು.
ಯೋಬನು 37:16
ಮೋಡಗಳ ತೂಗಾಟವನ್ನೂ ತಿಳುವಳಿಕೆಯಲ್ಲಿ ಸಂಪೂರ್ಣನ ಅದ್ಭುತಗಳನ್ನೂ ತಿಳು ಕೊಳ್ಳುತ್ತೀಯೋ?
ಯೋಬನು 36:26
ಇಗೋ, ದೇವರು ದೊಡ್ಡವನಾಗಿದ್ದಾನೆ. ನಾವು ಆತನನ್ನು ಅರಿಯದವರಾಗಿದ್ದೇವೆ. ಆತನ ವರುಷಗಳ ಲೆಕ್ಕಕ್ಕೆ ಶೋಧನೆ ಇಲ್ಲ.
ಯೋಬನು 25:5
ಇಗೋ, ಚಂದ್ರನಾದರೂ ಹೊಳೆಯು ವದಿಲ್ಲ. ನಕ್ಷತ್ರಗಳಾದರೂ ಆತನ ದೃಷ್ಟಿಗೆ ನಿರ್ಮಲವಾ ಗಿರುವದಿಲ್ಲ.
1 ಅರಸುಗಳು 8:27
ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?
ಆದಿಕಾಂಡ 15:5
ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು.