Jeremiah 4:27
ಕರ್ತನು ಹೀಗೆ ಹೇಳಿದ್ದಾನೆ--ದೇಶವೆಲ್ಲಾ ಹಾಳಾಗುವದು; ಆದಾಗ್ಯೂ ನಾನು ಅದನ್ನು ಪೂರ್ಣ ಮಾಡಿಲ್ಲ.
Jeremiah 4:27 in Other Translations
King James Version (KJV)
For thus hath the LORD said, The whole land shall be desolate; yet will I not make a full end.
American Standard Version (ASV)
For thus saith Jehovah, The whole land shall be a desolation; yet will I not make a full end.
Bible in Basic English (BBE)
For this is what the Lord has said: All the land will become a waste; I will make destruction complete.
Darby English Bible (DBY)
For thus saith Jehovah: The whole land shall be a desolation; but I will not make a full end.
World English Bible (WEB)
For thus says Yahweh, The whole land shall be a desolation; yet will I not make a full end.
Young's Literal Translation (YLT)
For thus said Jehovah: All the land is a desolation, but a completion I make not.
| For | כִּי | kî | kee |
| thus | כֹה֙ | kōh | hoh |
| hath the Lord | אָמַ֣ר | ʾāmar | ah-MAHR |
| said, | יְהוָ֔ה | yĕhwâ | yeh-VA |
| The whole | שְׁמָמָ֥ה | šĕmāmâ | sheh-ma-MA |
| land | תִהְיֶ֖ה | tihye | tee-YEH |
| be shall | כָּל | kāl | kahl |
| desolate; | הָאָ֑רֶץ | hāʾāreṣ | ha-AH-rets |
| not I will yet | וְכָלָ֖ה | wĕkālâ | veh-ha-LA |
| make | לֹ֥א | lōʾ | loh |
| a full end. | אֶעֱשֶֽׂה׃ | ʾeʿĕśe | eh-ay-SEH |
Cross Reference
ಯೆರೆಮಿಯ 46:28
ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
ಯೆರೆಮಿಯ 30:11
ನಿನ್ನನ್ನು ರಕ್ಷಿಸುವದಕ್ಕೆ ನಾನು ನಿನ್ನ ಸಂಗಡ ಇದ್ದೇನೆಂದು ಕರ್ತನು ಅನ್ನುತ್ತಾನೆ; ನಿನ್ನನ್ನು ಎಲ್ಲಿ ಚದುರಿಸಿದೆನೋ ಆ ಎಲ್ಲಾ ಜನಾಂಗ ಗಳನ್ನು ನಾನು ನಿರ್ಮೂಲ ಮಾಡಿದಾಗ್ಯೂ ನಿನ್ನನ್ನು ನಿರ್ಮೂಲ ಮಾಡುವದಿಲ್ಲ; ಮಿತಿಯಲ್ಲಿ ನಿನ್ನನ್ನು ಶಿಕ್ಷಿಸುವೆನು. ಆದರೆ ನಾನು ಶಿಕ್ಷಿಸದೆ ಬಿಡುವದಿಲ್ಲ.
ಯೆರೆಮಿಯ 5:18
ಆದಾಗ್ಯೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣ ವಾಗಿ ಅಳಿಸಿಬಿಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 5:10
ಅವಳ ಗೋಡೆಗಳನ್ನು ಏರಿರಿ, ಕೆಡಿಸಿರಿ; ಆದರೆ ಪೂರ್ಣವಾಗಿ ನಾಶಮಾಡಬೇಡಿರಿ. ಅವಳ ಕೋಟೆಯ ಉಪ್ಪರಿಗೆಗಳನ್ನು ತೆಗೆದುಬಿಡಿರಿ; ಅವು ಕರ್ತನವುಗಳಲ್ಲ.
ರೋಮಾಪುರದವರಿಗೆ 11:1
ಹಾಗಾದರೆ--ದೇವರು ತನ್ನ ಪ್ರಜೆಯನ್ನು ತಳ್ಳಿಬಿಟ್ಟದ್ದುಂಟೇ ಎಂದು ನಾನು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಯಾಕಂದರೆ ನಾನು ಸಹ ಇಸ್ರಾಯೇಲ್ಯನು. ಅಬ್ರ ಹಾಮನ ಸಂತತಿಯವನು, ಬೆನ್ಯಾವಿಾನನ ಗೋತ್ರ ದವನು ಆಗಿದ್ದೇನಲ್ಲಾ.
ರೋಮಾಪುರದವರಿಗೆ 9:27
ಯೆಶಾಯನು ಸಹ ಇಸ್ರಾಯೇಲ್ಯರ ವಿಷಯವಾಗಿ--ಇಸ್ರಾಯೇಲ್ಯರ ಮಕ್ಕಳ ಸಂಖ್ಯೆಯು ಸಮುದ್ರದ ಮರಳಿನೋಪಾದಿಯಲ್ಲಿದ್ದರೂ ಒಂದು ಅಂಶ ಮಾತ್ರ ರಕ್ಷಣೆ ಹೊಂದುವದು ಎಂದು ಕೂಗಿ ಹೇಳುತ್ತಾನೆ.
ಯೆಹೆಜ್ಕೇಲನು 11:13
ನಾನು ಪ್ರವಾದಿಸುತ್ತಿರುವಾಗ ಆದದ್ದೇನಂದರೆ, ಬೆನಾಯನ ಮಗನಾದ ಪೆಲತ್ಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು ಗಟ್ಟಿಯಾಗಿ ಕೂಗಿ--ಹಾ, ದೇವರಾದ ಕರ್ತನೇ, ನೀನು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀಯೋ ಎಂದು ಹೇಳಿದೆನು.
ಯಾಜಕಕಾಂಡ 26:44
ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ.
ಆಮೋಸ 9:8
ಇಗೋ, ದೇವರಾದ ಕರ್ತನ ಕಣ್ಣುಗಳು ಪಾಪವುಳ್ಳ ರಾಜ್ಯದ ಮೇಲಿವೆ; ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. ಆದರೆ ಯಾಕೋ ಬಿನ ಮನೆತನದವರನ್ನು ನಾನು ನಿಜವಾಗಿ ನಾಶ ಮಾಡುವದಿಲ್ಲ ಎಂದು ಕರ್ತನು ಹೇಳುತ್ತಾನೆ.
ಯೆಹೆಜ್ಕೇಲನು 33:28
ನಾನು ಈ ದೇಶವನ್ನು ಹಾಳುಪಾಳು ಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವದು. ಇಸ್ರಾಯೇಲಿನ ಪರ್ವತಗಳು ಹಾದುಹೋಗುವವರಿಲ್ಲದೆ ಹಾಳಾಗು ವವು.
ಯೆಹೆಜ್ಕೇಲನು 6:14
ಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
ಯೆರೆಮಿಯ 18:16
ಹೀಗೆ ತಮ್ಮ ದೇಶವನ್ನು ಹಾಳಾಗಿಯೂ ನಿತ್ಯವಾದ ಹಾಸ್ಯಾಸ್ಪದವಾ ಗಿಯೂ ಮಾಡಿದ್ದಾರೆ. ಅದನ್ನು ಹಾದು ಹೋಗುವವ ರೆಲ್ಲರು ವಿಸ್ಮಿತರಾಗಿ ತಲೆ ಅಲ್ಲಾಡಿಸುವರು.
ಯೆರೆಮಿಯ 12:11
ಅದನ್ನು ಹಾಳು ಮಾಡಿದ್ದಾರೆ; ಅದು ಹಾಳಾ ಗಿಯೇ ನನ್ನ ಕಡೆಗೆ ದುಃಖಿಸುತ್ತದೆ, ದೇಶವೆಲ್ಲಾ ಹಾಳಾ ಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವದಿಲ್ಲ.
ಯೆರೆಮಿಯ 7:34
ಆಗ ನಾನು ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಮದಲಗಿತ್ತಿಯ ಸ್ವರವನ್ನೂ ನಿಲ್ಲಿಸುವೆನು; ಯಾಕಂದರೆ ದೇಶವು ಹಾಳಾಗುವದು.
ಯೆರೆಮಿಯ 4:7
ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
ಯೆಶಾಯ 24:3
ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.
ಯೆಶಾಯ 24:1
ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ.
ಯೆಶಾಯ 6:11
ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ
2 ಪೂರ್ವಕಾಲವೃತ್ತಾ 36:21
ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು.