Isaiah 63 - WEB (Kannada)
1 Who is this who comes from Edom, with dyed garments from Bozrah? this who is glorious in his clothing, marching in the greatness of his strength? I who speak in righteousness, mighty to save.ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.
2 Why are you red in your clothing, and your garments like him who treads in the wine vat?ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ?
3 I have trodden the winepress alone; and of the peoples there was no man with me: yes, I trod them in my anger, and trampled them in my wrath; and their lifeblood is sprinkled on my garments, and I have stained all my clothing.ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು.
4 For the day of vengeance was in my heart, and the year of my redeemed is come.ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.
5 I looked, and there was none to help; and I wondered that there was none to uphold: therefore my own arm brought salvation to me; and my wrath, it upheld me.ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು.
6 I trod down the peoples in my anger, and made them drunk in my wrath, and I poured out their lifeblood on the earth.ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
7 I will make mention of the loving kindnesses of Yahweh, [and] the praises of Yahweh, according to all that Yahweh has bestowed on us, and the great goodness toward the house of Israel, which he has bestowed on them according to his mercies, and according to the multitude of his loving kindnesses.ಕರ್ತನು ನಮಗೆ ಮಾಡಿದ್ದೆಲ್ಲಾದರ ಪ್ರಕಾರ, ಕರ್ತನ ಪ್ರೀತಿ ಕೃಪೆಗಳನ್ನೂ ಕರ್ತನ ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು; ಆತನು ತನ್ನ ಅಂತಃಕರುಣೆಯ ಪ್ರಕಾರವೂ ತನ್ನ ಕೃಪೆಯ ಮಹಾ ಒಳ್ಳೇತನದ ಪ್ರಕಾರವೂ ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
8 For he said, Surely, they are my people, children who will not deal falsely: so he was their Savior.ಆತನು--ನಿಶ್ಚಯವಾಗಿ ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ ಎಂದು ಹೇಳಿದನು; ಆದದರಿಂದ ಅವರಿಗೆ ರಕ್ಷಕನಾಗಿದ್ದನು.
9 In all their affliction he was afflicted, and the angel of his presence saved them: in his love and in his pity he redeemed them; and he bore them, and carried them all the days of old.ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
10 But they rebelled, and grieved his holy Spirit: therefore he was turned to be their enemy, [and] himself fought against them.ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು.
11 Then he remembered the days of old, Moses [and] his people, [saying], Where is he who brought them up out of the sea with the shepherds of his flock? where is he who put his holy Spirit in the midst of them?ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
12 who caused his glorious arm to go at the right hand of Moses? who divided the waters before them, to make himself an everlasting name?ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ?
13 who led them through the depths, as a horse in the wilderness, so that they didn't stumble?ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡಿಸಿ ದವನು ಎಲ್ಲಿ ಅಂದನು.
14 As the cattle that go down into the valley, the Spirit of Yahweh caused them to rest; so did you lead your people, to make yourself a glorious name.ಪಶುವು ತಗ್ಗಿಗೆ ಇಳಿ ಯುವ ಪ್ರಕಾರ, ಕರ್ತನ ಆತ್ಮನು ಅವರಿಗೆ ವಿಶ್ರಾಂತಿ ಕೊಟ್ಟನು; ಈ ಪ್ರಕಾರ ನೀನು ನಿನಗೆ ಮಹಿಮೆ ಯುಳ್ಳ ಹೆಸರನ್ನು ಉಂಟು ಮಾಡುವ ಹಾಗೆ, ನಿನ್ನ ಜನರನ್ನು ನಡಿಸಿದಿ.
15 Look down from heaven, and see from the habitation of your holiness and of your glory: where are your zeal and your mighty acts? the yearning of your heart and your compassion is restrained toward me.ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ?
16 For you are our Father, though Abraham doesn't know us, and Israel does not acknowledge us: you, Yahweh, are our Father; our Redeemer from everlasting is your name.ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ನಿಸ್ಸಂದೇಹವಾಗಿ ನೀನೇ ನಮ್ಮ ತಂದೆಯಾಗಿದ್ದೀ; ಕರ್ತನಾದ ನೀನೇ ನಮ್ಮ ತಂದೆಯು, ನಮ್ಮ ವಿಮೋಚಕನು; ನಿನ್ನ ಹೆಸರು ಸದಾಕಾಲವೂ ಇದೆ.
17 O Yahweh, why do you make us to err from your ways, and harden our heart from your fear? Return for your servants' sake, the tribes of your inheritance.ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು.
18 Your holy people possessed [it] but a little while: our adversaries have trodden down your sanctuary.ಸ್ವಲ್ಪ ಕಾಲ ಮಾತ್ರ ನಿನ್ನ ಪರಿಶುದ್ಧ ಜನರು ಅದನ್ನು ಸ್ವಾಧೀನ ಮಾಡಿಕೊಂಡರು; ನಮ್ಮ ಶತ್ರು ಗಳು ನಿನ್ನ ಪರಿಶುದ್ಧ ಸ್ಥಳವನ್ನು ತುಳಿದುಬಿಟ್ಟಿದ್ದಾರೆ.
19 We are become as they over whom you never bear rule, as those who were not called by your name.ನಾವು ನಿನ್ನವರಾಗಿದ್ದೇವೆ; ಅವರ ಮೇಲೆ ನೀನು ದೊರೆತನ ಮಾಡಲಿಲ್ಲ; ಅವರು ನಿನ್ನ ಹೆಸರಿನಿಂದ ಕರೆಯಲ್ಪಡಲಿಲ್ಲ.
Kannada Bible