ಯೆಶಾಯ 54:4
ಹೆದರಬೇಡ, ನಿನಗೆ ನಾಚಿಕೆಯಾಗುವದಿಲ್ಲ. ಇಲ್ಲವೆ ಗಾಬರಿ ಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತು ಬಿಡುವಿ ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವದಿಲ್ಲ.
Fear | אַל | ʾal | al |
not; | תִּֽירְאִי֙ | tîrĕʾiy | tee-reh-EE |
for | כִּי | kî | kee |
not shalt thou | לֹ֣א | lōʾ | loh |
be ashamed: | תֵב֔וֹשִׁי | tēbôšî | tay-VOH-shee |
neither | וְאַל | wĕʾal | veh-AL |
confounded; thou be | תִּכָּלְמִ֖י | tikkolmî | tee-kole-MEE |
for | כִּ֣י | kî | kee |
thou shalt not | לֹ֣א | lōʾ | loh |
be put to shame: | תַחְפִּ֑ירִי | taḥpîrî | tahk-PEE-ree |
for | כִּ֣י | kî | kee |
thou shalt forget | בֹ֤שֶׁת | bōšet | VOH-shet |
the shame | עֲלוּמַ֙יִךְ֙ | ʿălûmayik | uh-loo-MA-yeek |
of thy youth, | תִּשְׁכָּ֔חִי | tiškāḥî | teesh-KA-hee |
not shalt and | וְחֶרְפַּ֥ת | wĕḥerpat | veh-her-PAHT |
remember | אַלְמְנוּתַ֖יִךְ | ʾalmĕnûtayik | al-meh-noo-TA-yeek |
the reproach | לֹ֥א | lōʾ | loh |
of thy widowhood | תִזְכְּרִי | tizkĕrî | teez-keh-REE |
any more. | עֽוֹד׃ | ʿôd | ode |
Cross Reference
ಯೆರೆಮಿಯ 31:19
ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
ಯೆಶಾಯ 41:10
ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
1 ಪೇತ್ರನು 2:6
ಇದಲ್ಲದೆ--ಇಗೋ, ಚೀಯೋನಿನಲ್ಲಿ ಮೂಲೆ ಗಲ್ಲನ್ನು ಇಡುತ್ತೇನೆ; ಅದು ಆಯಲ್ಪಟ್ಟದ್ದು, ಅಮೂಲ್ಯ ವಾದದ್ದು; ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗ ಪಡುವದೇ ಇಲ್ಲ ಎಂದು ಬರಹದಲ್ಲಿ ಇರುತ್ತದೆ.
ಯೆಶಾಯ 45:16
ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
ಹೋಶೇ 3:1
ತರುವಾಯ ಕರ್ತನು ನನಗೆ--ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು ದ್ರಾಕ್ಷೆಯ ಮದ್ಯ ಪಾತ್ರೆಗಳನ್ನು ಪ್ರೀತಿಸುವ ಇಸ್ರಾ ಯೇಲಿನ ಮಕ್ಕಳನ್ನು ಕರ್ತನು ಪ್ರೀತಿಸುವ ಪ್ರಕಾರ ಅವಳು ವ್ಯಭಿಚಾರಿಣಿಯಾಗಿದ್ದರೂ ನೀನು ಸ್ನೇಹಿತ ನಿಂದ ಪ್ರೀತಿಮಾಡಲ್ಪಟ್ಟ ಸ್ತ್ರೀಯನ್ನು ಪ್ರೀತಿಮಾಡು ಎಂದು ಹೇಳಲು
ಯೆಶಾಯ 61:7
ನಿಮ್ಮ ಅವಮಾನಕ್ಕೆ ಬದಲಾಗಿ ಮಾನವು ಎರಡರಷ್ಟಾಗು ವದು. ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು; ಆದದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನ ಮಾಡಿಕೊಳ್ಳುವರು, ನಿತ್ಯವಾದ ಸಂತೋಷವು ಅವರಿಗೆ ಆಗುವದು.
ಯೆಶಾಯ 51:7
ನೀತಿಯನ್ನು ಅರಿತು ನನ್ನ ನ್ಯಾಯಪ್ರಮಾಣವನ್ನು ಹೃದಯದಲ್ಲಿಟ್ಟು ಕೊಂಡಿರುವ ಜನರೇ, ನನಗೆ ಕಿವಿಗೊಡಿರಿ, ಮನುಷ್ಯರ ನಿಂದೆಗೆ ಭಯಪಡಬೇಡಿರಿ; ಇಲ್ಲವೆ ಅವರ ದೂಷಣೆಗೆ ಹೆದರ ಬೇಡಿರಿ.
ಯೆಶಾಯ 41:14
ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
ಯೆಹೆಜ್ಕೇಲನು 16:60
ಆದಾಗ್ಯೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡು ನಿನಗಾಗಿ ನಿತ್ಯವಾದ ಒಡಂಬಡಿಕೆ ಯೊಂದನ್ನು ಸ್ಥಾಪಿಸುವೆನು.
ಯೆಹೆಜ್ಕೇಲನು 16:43
ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು.
ಯೆಹೆಜ್ಕೇಲನು 16:22
ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ.