Bible

Genesis 22 - WEB (Kannada)

1 It happened after these things, that God tested Abraham, and said to him, "Abraham!" He said, "Here I am."ಇವುಗಳಾದ ಮೇಲೆ ದೇವರು ಅಬ್ರಹಾಮನನ್ನು ಶೋಧಿಸುವದಕ್ಕಾಗಿ ಆತನು ಅವನಿಗೆ--ಅಬ್ರಹಾಮನೇ ಅಂದನು. ಅದಕ್ಕವನು --ಇಗೋ, ಇಲ್ಲಿದ್ದೇನೆ ಅಂದನು.

2 He said, "Now take your son, your only son, whom you love, even Isaac, and go into the land of Moriah. Offer him there for a burnt offering on one of the mountains which I will tell you of."ಆಗ ಆತನು --ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು.

3 Abraham rose early in the morning, and saddled his donkey, and took two of his young men with him, and Isaac his son. He split the wood for the burnt offering, and rose up, and went to the place of which God had told him.ಅಬ್ರಹಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಗೆ ತಡಿಹಾಕಿಸಿ ತನ್ನ ಯುವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದು ಕೊಂಡು ದಹನಬಲಿಗಾಗಿ ಕಟ್ಟಿಗೆಗಳನ್ನು ಒಡಿಸಿ ಎದ್ದು ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು.

4 On the third day Abraham lifted up his eyes, and saw the place far off.ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು.

5 Abraham said to his young men, "Stay here with the donkey. The boy and I will go yonder. We will worship, and come back to you.ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು.

6 Abraham took the wood of the burnt offering and laid it on Isaac his son. He took in his hand the fire and the knife. They both went together.ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು.

7 Isaac spoke to Abraham his father, and said, "My father?" He said, "Here I am, my son." He said, "Here is the fire and the wood, but where is the lamb for a burnt offering?"ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ--ನನ್ನ ತಂದೆಯೇ ಅಂದನು. ಆಗ ಅವನು--ನನ್ನ ಮಗನೇ, ಇದ್ದೇನೆ ಅಂದನು. ಅವನು--ಇಗೋ, ಬೆಂಕಿಯೂ ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು.

8 Abraham said, "God will provide himself the lamb for a burnt offering, my son." So they both went together.ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.

9 They came to the place which God had told him of. Abraham built the altar there, and laid the wood in order, bound Isaac his son, and laid him on the altar, on the wood.ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.

10 Abraham stretched forth his hand, and took the knife to kill his son.ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು.

11 The angel of Yahweh called to him out of the sky, and said, "Abraham, Abraham!" He said, "Here I am."ಆಗ ಕರ್ತನ ದೂತನು ಆಕಾಶದೊಳಗಿಂದ ಅವನನ್ನು ಕರೆದು--ಅಬ್ರಹಾಮನೇ, ಅಬ್ರಹಾಮನೇ ಅಂದಾಗ ಅವನು--ಇಲ್ಲಿ ಇದ್ದೇನೆ ಅಂದನು.

12 He said, "Don't lay your hand on the boy, neither do anything to him. For now I know that you fear God, seeing you have not withheld your son, your only son, from me."ಆಗ ಅವನು --ಹುಡಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ. ನೀನು ದೇವರಿಗೆ ಭಯ ಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವದಕ್ಕೆ ಹಿಂತೆಗೆಯಲಿಲ್ಲ ಅಂದನು.

13 Abraham lifted up his eyes, and looked, and saw that behind him was a ram caught in the thicket by his horns. Abraham went and took the ram, and offered him up for a burnt offering instead of his son.ಆಗ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ನೋಡಿದನು; ಇಗೋ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.

14 Abraham called the name of that place Yahweh-Jireh.{"Yahweh-Jireh" means "Yahweh is my provider."} As it is said to this day, "In Yahweh's mountain it will be provided.ಅಬ್ರಹಾಮನು ಆ ಸ್ಥಳಕ್ಕೆ ಯೆಹೋವಯಾರೆ ಎಂದು ಹೆಸರನ್ನು ಇಟ್ಟದ್ದರಿಂದ ಕರ್ತನ ಪರ್ವತದಲ್ಲಿ ಅದು ಕಾಣಲ್ಪಡುವದು ಎಂದು ಇಂದಿನ ವರೆಗೂ ಹೇಳುತ್ತಾರೆ.

15 The angel of Yahweh called to Abraham a second time out of the sky,ಕರ್ತನ ದೂತನು ಆಕಾಶದೊಳಗಿಂದ ಎರಡ ನೆಯ ಸಾರಿ ಅಬ್ರಹಾಮನನ್ನು ಕರೆದನು.

16 and said, "I have sworn by myself, says Yahweh, because you have done this thing, and have not withheld your son, your only son,ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ

17 that in blessing I will bless you, and in multiplying I will multiply your seed as the stars of the heavens, and as the sand which is on the seashore. Your seed will possess the gate of his enemies.ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.

18 In your seed will all the nations of the earth be blessed, because you have obeyed my voice."ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.

19 So Abraham returned to his young men, and they rose up and went together to Beersheba. Abraham lived at Beersheba.ತರುವಾಯ ಅಬ್ರಹಾಮನು ತನ್ನ ಯುವಕರ ಬಳಿಗೆ ಹಿಂತಿರುಗಿ ಬಂದನು. ಅವರು ಎದ್ದು ಅವ ರೊಂದಿಗೆ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.

20 It happened after these things, that it was told Abraham, saying, "Behold, Milcah, she also has borne children to your brother Nahor:ಇವುಗಳಾದ ಮೇಲೆ ಅಬ್ರಹಾಮನಿಗೆ--ಇಗೋ, ಮಿಲ್ಕಳು ಸಹ ನಿನ್ನ ಸಹೋದರನಾದ ನಾಹೋರನಿಗೆ ಮಕ್ಕಳನ್ನು ಹೆತ್ತಿದ್ದಾಳೆ ಎಂದು ತಿಳಿಸಲ್ಪಟ್ಟಿತು.

21 Uz his firstborn, Buz his brother, Kemuel the father of Aram,ಅವರು ಯಾರಂದರೆ ಅವನ ಚೊಚ್ಚಲು ಮಗ ಊಚನು ಅವನ ಸಹೋದರನಾದ ಬೂಜನು, ಅರಾಮನ ತಂದೆಯಾದ ಕೆಮೂವೇಲನು,

22 Chesed, Hazo, Pildash, Jidlaph, and Bethuel."ಕೆಸೆದನು ಹಜೋ ವನು ಪಿಲ್ದಾಷನು ಇದ್ಲಾಫನು ಬೆತೊವೇಲನು;

23 Bethuel became the father of Rebekah. These eight Milcah bore to Nahor, Abraham's brother.ಬೆತೊವೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಳು ಅಬ್ರಹಾಮನ ಸಹೋದರನಾದ ನಾಹೋರನಿಗೆ ಹೆತ್ತಳು.

24 His concubine, whose name was Reumah, also bare Tebah, Gaham, Tahash, and Maacah.ಅವನ ಉಪಪತ್ನಿಯಾದ ರೂಮಳೆಂಬವಳು ಸಹ ಟೆಬಹನನ್ನೂ ಗಹಮನನ್ನೂ ತಹಷನನ್ನೂ ಮಾಕಾನನ್ನೂ ಹೆತ್ತಳು.

Kannada Bible