Ecclesiastes 2:4
ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು.
Ecclesiastes 2:4 in Other Translations
King James Version (KJV)
I made me great works; I builded me houses; I planted me vineyards:
American Standard Version (ASV)
I made me great works; I builded me houses; I planted me vineyards;
Bible in Basic English (BBE)
I undertook great works, building myself houses and planting vine-gardens.
Darby English Bible (DBY)
I made me great works; I builded me houses; I planted me vineyards;
World English Bible (WEB)
I made myself great works. I built myself houses. I planted myself vineyards.
Young's Literal Translation (YLT)
I made great my works, I builded for me houses, I planted for me vineyards.
| I made me great | הִגְדַּ֖לְתִּי | higdaltî | heeɡ-DAHL-tee |
| works; | מַעֲשָׂ֑י | maʿăśāy | ma-uh-SAI |
| builded I | בָּנִ֤יתִי | bānîtî | ba-NEE-tee |
| me houses; | לִי֙ | liy | lee |
| I planted | בָּתִּ֔ים | bottîm | boh-TEEM |
| me vineyards: | נָטַ֥עְתִּי | nāṭaʿtî | na-TA-tee |
| לִ֖י | lî | lee | |
| כְּרָמִֽים׃ | kĕrāmîm | keh-ra-MEEM |
Cross Reference
1 ಅರಸುಗಳು 7:1
1 1 ಇದಲ್ಲದೆ ಸೊಲೊಮೋನನು ತನ್ನ ಮನೆಯನ್ನು ಹದಿಮೂರು ವರುಷಗಳಲ್ಲಿ ಕಟ್ಟಿಸಿ ಅದನ್ನೆಲ್ಲಾ ಮುಗಿಸಿದನು.
ದಾನಿಯೇಲನು 4:30
ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.
ಯೆಶಾಯ 5:1
ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ.
ಪರಮ ಗೀತ 8:11
ಆಗ, ನಾನು ಅವನ ದೃಷ್ಟಿಯಲ್ಲಿ ದಯ ಹೊಂದಿದವಳ ಹಾಗಿದ್ದೆನು. ಬಾಲ್ಹಾಮೋನಿನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷೇ ತೋಟ ಇತ್ತು. ಅವನು ಆ ದ್ರಾಕ್ಷೇ ತೋಟವನ್ನು ಒಕ್ಕಲಿಗರಿಗೆ ಗುತ್ತಿ ಗೆಗೆ ಕೊಟ್ಟನು. ಒಬ್ಬೊಬ್ಬನು ಅದರ ಫಲಕ್ಕೋಸ್ಕರ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.
ಪರಮ ಗೀತ 7:12
ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.
ಪರಮ ಗೀತ 1:14
ಏನ್ಗೆದಿಯ ದ್ರಾಕ್ಷೇ ತೋಟ ಗಳಲ್ಲಿರುವ ಗೋರಂಟೆಯ ಪೂಗೊಂಚಲಿನಂತೆ ನನ್ನ ಪ್ರಿಯನು ನನಗೆ ಇರುವನು.
ಕೀರ್ತನೆಗಳು 49:11
ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ.
2 ಪೂರ್ವಕಾಲವೃತ್ತಾ 26:10
ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.
2 ಪೂರ್ವಕಾಲವೃತ್ತಾ 8:11
ಸೊಲೊಮೋನನು ಫರೋಹನ ಕುಮಾರ್ತೆ ಯನ್ನು ದಾವೀದನ ಪಟ್ಟಣದಿಂದ ತಾನು ಅವಳಿ ಗೋಸ್ಕರ ಕಟ್ಟಿಸಿದ ಮನೆಗೆ ಬರಮಾಡಿದನು. ಕರ್ತನ ಒಡಂಬಡಿಕೆಯ ಮಂಜೂಷವು ಬಂದ ಸ್ಥಳಗಳು ಪರಿಶುದ್ಧವಾಗಿರುವದರಿಂದ ನನ್ನ ಹೆಂಡತಿಯು ಇಸ್ರಾ ಯೇಲಿನ ಅರಸನಾದ ದಾವೀದನ ಮನೆಯಲ್ಲಿ ವಾಸ ವಾಗಿರಕೂಡದೆಂದು ಹೇಳಿದನು.
2 ಪೂರ್ವಕಾಲವೃತ್ತಾ 8:1
ಸೊಲೊಮೋನನು ಕರ್ತನ ಆಲಯವನ್ನೂ ತನ್ನ ಮನೆಯನ್ನೂ ಇಪ್ಪತ್ತು ವರುಷ ಗಳಲ್ಲಿ ಕಟ್ಟಿದ ತರುವಾಯ ಆದದ್ದೇನಂದರೆ,
1 ಪೂರ್ವಕಾಲವೃತ್ತಾ 27:27
ಬಹಳ ದ್ರಾಕ್ಷೇ ತೋಟಗಳ ಮೇಲೆ ರಾಮಾ ಊರಿನ ಶಿಮ್ಮನು ಇದ್ದನು; ಅಲೆಗೋಸ್ಕರ ದ್ರಾಕ್ಷೇ ತೋಟಗಳ ಫಲದ ಮೇಲೆ ಶಿಪ್ಮಿಯನಾದ ಜಬ್ದೀಯು ಇದ್ದನು.
1 ಅರಸುಗಳು 15:19
ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು.
1 ಅರಸುಗಳು 10:19
ಈ ಸಿಂಹಾಸನಕ್ಕೆ ಆರು ಮೆಟ್ಲುಗ ಳಿದ್ದವು. ಈ ಸಿಂಹಾಸನದ ಹಿಂಭಾಗವು ದುಂಡಾಗಿತ್ತು. ಕುಳಿತುಕೊಳ್ಳುವ ಸ್ಥಳದ ಎರಡು ಪಾರ್ಶ್ವಗಳಲ್ಲಿ ಕೈಗಳಿ ದ್ದವು. ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
1 ಅರಸುಗಳು 9:1
ಸೊಲೊಮೋನನು ಕರ್ತನ ಮಂದಿರ ವನ್ನೂ ಅರಮನೆಯನ್ನೂ ಕಟ್ಟಲು ಆಶೆ ಯಿಂದ ಇಚ್ಚೈಸಿದ್ದನ್ನೆಲ್ಲಾ ಕಟ್ಟಿಸಿ ತೀರಿಸಿದ ಮೇಲೆ ಏನಾಯಿತಂದರೆ,
2 ಸಮುವೇಲನು 18:18
ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.
ಧರ್ಮೋಪದೇಶಕಾಂಡ 8:12
ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ
ಆದಿಕಾಂಡ 11:4
ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;