Acts 5:20
ನೀವು ಹೋಗಿ ದೇವಾಲಯದಲ್ಲಿ ನಿಂತು ಕೊಂಡು ಈ ಜೀವ ವಾಕ್ಯಗಳನ್ನೆಲ್ಲಾ ಜನರಿಗೆ ತಿಳಿಸಿರಿ ಎಂದು ಹೇಳಿದನು.
Acts 5:20 in Other Translations
King James Version (KJV)
Go, stand and speak in the temple to the people all the words of this life.
American Standard Version (ASV)
Go ye, and stand and speak in the temple to the people all the words of this Life.
Bible in Basic English (BBE)
Go, take your place in the Temple and give the people all the teaching about this Life.
Darby English Bible (DBY)
Go ye and stand and speak in the temple to the people all the words of this life.
World English Bible (WEB)
"Go stand and speak in the temple to the people all the words of this life."
Young's Literal Translation (YLT)
`Go on, and standing, speak in the temple to the people all the sayings of this life;'
| Go, | Πορεύεσθε | poreuesthe | poh-RAVE-ay-sthay |
| stand | καὶ | kai | kay |
| and | σταθέντες | stathentes | sta-THANE-tase |
| speak | λαλεῖτε | laleite | la-LEE-tay |
| in | ἐν | en | ane |
| the | τῷ | tō | toh |
| temple | ἱερῷ | hierō | ee-ay-ROH |
| the to | τῷ | tō | toh |
| people | λαῷ | laō | la-OH |
| all | πάντα | panta | PAHN-ta |
| the | τὰ | ta | ta |
| words | ῥήματα | rhēmata | RAY-ma-ta |
| of this | τῆς | tēs | tase |
| ζωῆς | zōēs | zoh-ASE | |
| life. | ταύτης | tautēs | TAF-tase |
Cross Reference
ಯೋಹಾನನು 6:68
ಸೀಮೋನ್ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ.
ಯೋಹಾನನು 6:63
ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.
1 ಯೋಹಾನನು 5:11
ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ.
1 ಯೋಹಾನನು 1:1
ಆದಿಯಿಂದ ಇದ್ದದ್ದನ್ನೂ ಆ ಜೀವ ವಾಕ್ಯದ ವಿಷಯವಾಗಿ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದೇವೆ.
ಅಪೊಸ್ತಲರ ಕೃತ್ಯಗ 11:14
ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
ಯೋಹಾನನು 18:20
ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ; ಯೆಹೂದ್ಯರು ಯಾವಾಗಲೂ ಕೂಡುವಂಥ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಉಪದೇಶಿಸಿದ್ದೆನು; ಗುಪ್ತವಾಗಿ ಯಾವದನ್ನೂ ನಾನು ಹೇಳಲಿಲ್ಲ.
ಯೋಹಾನನು 17:8
ನೀನು ನನಗೆ ಕೊಟ್ಟ ವಾಕ್ಯಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಅವುಗಳನ್ನು ಅಂಗೀಕರಿಸಿದ್ದಾರೆ; ನಾನು ನಿನ್ನ ಬಳಿಯಿಂದಲೇ ಹೊರಟುಬಂದವನೆಂದು ನಿಶ್ಚಯವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿದ್ದೀ ಯೆಂದು ನಂಬಿದ್ದಾರೆ.
ಯೋಹಾನನು 17:3
ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
ಯೋಹಾನನು 12:50
ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.
ಮತ್ತಾಯನು 21:23
ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.
ಯೆರೆಮಿಯ 36:10
ಆಗ ಬಾರೂಕನು ಪುಸ್ತಕದಿಂದ ಯೆರೆ ವಿಾಯನ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಲೇಖಕ ನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೊಠಡಿ ಯಲ್ಲಿ, ಮೇಲಿನ ಅಂಗಳದಲ್ಲಿ, ಕರ್ತನ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರ ಕಿವಿಗಳಲ್ಲಿ ಓದಿ ಹೇಳಿದನು.
ಯೆರೆಮಿಯ 26:2
ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಕರ್ತನ ಆಲಯದಲ್ಲಿ ಆರಾಧಿಸುವದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು; ಒಂದು ಮಾತಾದರೂ ಕಡಿಮೆ ಮಾಡಬೇಡ;
ಯೆರೆಮಿಯ 22:1
ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಅಲ್ಲಿ ಈ ವಾಕ್ಯವನ್ನು ಹೇಳು.
ಯೆರೆಮಿಯ 20:2
ಆಗ ಪಷ್ಹೂರನು ಪ್ರವಾದಿಯಾದ ಯೆರೆವಿಾಯನನ್ನು ಹೊಡೆದು ಅವನನ್ನು ಕರ್ತನ ಆಲಯದ ಬಳಿಯಲ್ಲಿದ್ದ ಬೆನ್ಯಾವಿಾ ನನ ಮೇಲ್ಭಾಗಲಲ್ಲಿದ್ದ ಕೋಳದಲ್ಲಿ ಹಾಕಿಸಿದನು.
ಯೆರೆಮಿಯ 19:14
ಆಗ ಕರ್ತನು ಯೆರೆವಿಾಯನನ್ನು ಪ್ರವಾದಿಸು ವದಕ್ಕೆ ಕಳುಹಿಸಿದ ತೋಫೆತಿನಿಂದ ಬಂದು ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಜನರಿಗೆಲ್ಲಾ ಹೇಳಿದ್ದೇನಂದರೆ--
ಯೆರೆಮಿಯ 7:2
ಕರ್ತನ ಆಲಯದ ಬಾಗಿಲಿನಲ್ಲಿ ನಿಂತುಕೊಂಡು ಈ ವಾಕ್ಯವನ್ನು ಅಲ್ಲಿ ಸಾರು, ಏನಂದರೆ ಯೆಹೂದದವರೆಲ್ಲರೇ, ಕರ್ತನನ್ನು ಆರಾಧಿಸುವದಕ್ಕೆ ಈ ಬಾಗಿಲುಗಳಲ್ಲಿ ಸೇರುವವರೇ, ಕರ್ತನ ವಾಕ್ಯವನ್ನು ಕೇಳಿರಿ.
ಯೆಶಾಯ 58:1
ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.
ವಿಮೋಚನಕಾಂಡ 24:3
ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.