Bible

Acts 4 - DBY (Kannada)

1 And as they were speaking to the people, the priests and captain of the temple and the Sadducees came upon them,ಅವರು ಜನರೊಂದಿಗೆ ಮಾತನಾಡು ತ್ತಿದ್ದಾಗ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅವರಿಗೆ ವಿರೋಧ ವಾಗಿ ಬಂದರು;

2 being distressed on account of their teaching the people and preaching by Jesus the resurrection from among [the] dead;ಯಾಕಂದರೆ ಯೇಸುವಿನ ಮೂಲಕ ಸತ್ತವರಿಗೆ ಪುನರುತ್ಥಾನವಾಗುವದೆಂದು ಅಪೊಸ್ತಲರು ಜನರಿಗೆ ಬೋಧಿಸಿ ಕಲಿಸುತ್ತಿದ್ದದರಿಂದ ಅವರು ಸಂತಾಪಪಟ್ಟಿದ್ದರು.

3 and they laid hands on them, and put them in ward till the morrow; for it was already evening.ಇದಲ್ಲದೆ ಅವರನ್ನು ಹಿಡಿದು ಮರುದಿನದ ವರೆಗೆ ಕಾವಲಲ್ಲಿಟ್ಟರು; ಯಾಕಂದರೆ ಆಗ ಸಾಯಂಕಾಲವಾಗಿತ್ತು.

4 But many of those who had heard the word believed; and the number of the men had become [about] five thousand.ಆದಾಗ್ಯೂ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರವಾಗಿತ್ತು.

5 And it came to pass on the morrow that their rulers and elders and scribes were gathered together at Jerusalem,ಮರುದಿನ ಅವರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ

6 and Annas the high priest, and Caiaphas, and John, and Alexander, and as many as were of [the] high priestly family;ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.

7 and having placed them in the midst they inquired, In what power or in what name have *ye* done this?ಇವರು ಅಪೊಸ್ತಲರನ್ನು ಮಧ್ಯೆ ನಿಲ್ಲಿಸಿ--ನೀವು ಎಂಥಾ ಶಕ್ತಿಯಿಂದ ಇಲ್ಲವೆ ಯಾವ ಹೆಸರಿನಿಂದ ಇದನ್ನು ಮಾಡಿದಿರಿ ಎಂದು ಕೇಳಿದರು.

8 Then Peter, filled with [the] Holy Spirit, said to them, Rulers of the people and elders [of Israel],ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ--ಜನರ ಅಧಿಕಾರಿಗಳೇ, ಇಸ್ರಾಯೇಲಿನ ಹಿರಿಯರೇ,

9 if *we* this day are called upon to answer as to the good deed [done] to the infirm man, how *he* has been healed,ಈ ದುರ್ಬಲನಿಗೆ ಸ್ವಸ್ಥವಾದ ಒಳ್ಳೇ ಕಾರ್ಯವು ಹೇಗಾಯಿತೆಂಬ ವಿಷಯವಾಗಿ ಈ ದಿವಸ ನಾವು ವಿಚಾರಿಸಲ್ಪಡುವದಾದರೆ

10 be it known to you all, and to all the people of Israel, that in the name of Jesus Christ the Nazaraean, whom *ye* have crucified, whom God has raised from among [the] dead, by *him* this [man] stands here before you sound [in body].ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.

11 *He* is the stone which has been set at nought by you the builders, which is become the corner stone.ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು.

12 And salvation is in none other, for neither is there another name under heaven which is given among men by which we must be saved.ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.

13 But seeing the boldness of Peter and John, and perceiving that they were unlettered and uninstructed men, they wondered; and they recognised them that they were with Jesus.ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.

14 And beholding the man who had been healed standing with them, they had nothing to reply;ಸ್ವಸ್ಥನಾದವನು ಅವರೊಂದಿಗೆ ನಿಂತಿರುವದನ್ನು ನೋಡಿ ಅದಕ್ಕೆ ವಿರೋಧವಾಗಿ ಏನೂ ಮಾತನಾಡ ಲಾರದೆ ಇದ್ದರು.

15 but having commanded them to go out of the council they conferred with one another,ಆದರೆ ಆಲೋಚನಾ ಸಭೆಯಿಂದ ಅಪೊಸ್ತಲರು ಹೊರಗೆ ಹೋಗಬೇಕೆಂದು ಅವರು ಅಪ್ಪಣೆಕೊಟ್ಟು ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ--

16 saying, What shall we do to these men? for that indeed an evident sign has come to pass through their means is manifest to all that inhabit Jerusalem, and we cannot deny it.ಈ ಮನುಷ್ಯರಿಗೆ ನಾವೇನು ಮಾಡೋಣ? ನಿಜ ವಾಗಿಯೂ ಅವರ ಮೂಲಕ ನಡೆದ ಪ್ರಸಿದ್ಧವಾದ ಒಂದು ಅದ್ಭುತಕಾರ್ಯವು ಯೆರೂಸಲೇಮಿನಲ್ಲಿ ವಾಸಮಾಡುವವರಿಗೆಲ್ಲಾ ಗೊತ್ತಾಗಿರುವದರಿಂದ ನಾವು ಅದನ್ನು ಅಲ್ಲಗಳೆಯಲಾರೆವು.

17 But that it be not further spread among the people, let us threaten them severely no longer to speak to any man in this name.ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು

18 And having called them, they charged [them] not to speak at all nor teach in the name of Jesus.ಅವರನ್ನು ಕರೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದು, ಬೋಧಿ ಸಲೂಬಾರದು ಎಂದು ಅವರಿಗೆ ಅಪ್ಪಣೆಕೊಟ್ಟರು.

19 But Peter and John answering said to them, If it be righteous before God to listen to you rather than to God, judge ye;ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ.

20 for as for us *we* cannot refrain from speaking of the things which we have seen and heard.ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.

21 But they, having further threatened them, let them go, finding no way how they might punish them, on account of the people, because all glorified God for what had taken place;ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.

22 for the man on whom this sign of healing had taken place was above forty years old.ಸ್ವಸ್ಥಪಡಿಸುವ ಈ ಅದ್ಭುತಕಾರ್ಯದಿಂದ ಗುಣಹೊಂದಿದ ಆ ಮನುಷ್ಯ ನಿಗೆ ನಾಲ್ವತ್ತು ವರುಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.

23 And having been let go, they came to their own [company], and reported all that the chief priests and elders had said to them.ಅವರು ಬಿಡುಗಡೆ ಹೊಂದಿಕೊಂಡು ತಮ್ಮ ಸ್ವಂತ ಜನರ ಬಳಿಗೆ ಹೋಗಿ ಪ್ರಧಾನಯಾಜಕರೂ ಹಿರಿಯರೂ ತಮಗೆ ಹೇಳಿದ್ದೆಲ್ಲವನ್ನು ಅವರಿಗೆ ತಿಳಿಸಿದರು.

24 And they, having heard [it], lifted up [their] voice with one accord to God, and said, Lord, *thou* art the God who made the heaven and the earth and the sea, and all that is in them;ಅದನ್ನು ಕೇಳಿದಾಗ ಅವರು ಒಮ್ಮನಸ್ಸಿನಿಂದ ದೇವರಿಗೆ--ಕರ್ತನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟು ಮಾಡಿದ ದೇವರು ನೀನೇ;

25 who hast said by the mouth of thy servant David, Why have [the] nations raged haughtily and [the] peoples meditated vain things?ನಿನ್ನ ಸೇವಕ ನಾದ ದಾವೀದನ ಬಾಯಿಂದ--ಅನ್ಯಜನರು ಯಾಕೆ ರೇಗಿದರು? ಮತ್ತು ಜನರು ವ್ಯರ್ಥವಾದವುಗಳನ್ನು ಯಾಕೆ ಊಹಿಸಿದರು?

26 The kings of the earth were there, and the rulers were gathered together against the Lord and against his Christ.ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ.

27 For in truth against thy holy servant Jesus, whom thou hadst anointed, both Herod and Pontius Pilate, with [the] nations, and peoples of Israel, have been gathered together in this cityನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್‌ ಜನರ ಸಹಿತ ಒಂದಾಗಿ ಕೂಡಿಕೊಂಡು

28 to do whatever thy hand and thy counsel had determined before should come to pass.ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.

29 And now, Lord, look upon their threatenings, and give to thy bondmen with all boldness to speak thy word,ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ

30 in that thou stretchest out thy hand to heal, and that signs and wonders take place through the name of thy holy servant Jesus.ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು.

31 And when they had prayed, the place in which they were assembled shook, and they were all filled with the Holy Spirit, and spoke the word of God with boldness.ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.

32 And the heart and soul of the multitude of those that had believed were one, and not one said that anything of what he possessed was his own, but all things were common to them;ನಂಬಿದ್ದ ಸಮೂಹದವರ ಹೃದಯವೂ ಪ್ರಾಣವೂ ಒಂದೇ ಆಗಿತ್ತು; ಇದಲ್ಲದೆ ಅವರಲ್ಲಿ ಯಾವನೂ ತನ್ನಗಿದ್ದ ಯಾವದೊಂದನ್ನೂ ತನ್ನ ಸ್ವಂತ ದ್ದೆಂದು ಹೇಳಲಿಲ್ಲ; ಆದರೆ ಎಲ್ಲವೂ ಅವರಿಗೆ ಹುದು ವಾಗಿತ್ತು.

33 and with great power did the apostles give witness of the resurrection of the Lord Jesus, and great grace was upon them all.ಇದಲ್ಲದೆ ಕರ್ತನಾದ ಯೇಸುವಿನ ಪುನ ರುತ್ಥಾನದ ವಿಷಯವಾಗಿ ಅಪೊಸ್ತಲರು ಬಹಳ ಬಲ ವಾಗಿ ಸಾಕ್ಷಿಕೊಟ್ಟರು; ದೊಡ್ಡ ಕೃಪೆಯು ಅವರೆಲ್ಲರ ಮೇಲೆ ಇತ್ತು.

34 For neither was there any one in want among them; for as many as were owners of lands or houses, selling them, brought the price of what was soldಹೀಗಾಗಿ ಅವರಲ್ಲಿ ಕೊರತೆ ಪಡು ವವನು ಒಬ್ಬನಾದರೂ ಇರಲಿಲ್ಲ. ಹೊಲ ಮನೆಗಳಿದ್ದವ ರೆಲ್ಲರೂ ಅವುಗಳನ್ನು ಮಾರಿ ಬಂದ ಹಣವನ್ನು ತಂದು

35 and laid it at the feet of the apostles; and distribution was made to each according as any one might have need.ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟರು; ಪ್ರತಿ ಯೊಬ್ಬನಿಗೆ ಅವನವನ ಅಗತ್ಯತೆಯ ಪ್ರಕಾರ ಹಂಚಿ ದರು.

36 And Joseph, who had been surnamed Barnabas by the apostles (which is, being interpreted, Son of consolation), a Levite, Cyprian by birth,ಅಪೊಸ್ತಲರಿಂದ ಬಾರ್ನಬನೆಂದು ಅಡ್ಡ ಹೆಸರು ಹೊಂದಿದ ಕುಪ್ರ ದೇಶದ ಲೇವಿಯನಾದ ಯೋಸೇಫನೆಂಬವನು (ಬಾರ್ನಬ ಅಂದರೆ ಆದರ ಣೆಯ ಮಗನು)

37 being possessed of land, having sold [it], brought the money and laid it at the feet of the apostles.ತನಗಿದ್ದ ಭೂಮಿಯನ್ನು ಮಾರಿ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.

Kannada Bible