Bible

Acts 3 - DBY (Kannada)

1 And Peter and John went up together into the temple at the hour of prayer, [which is] the ninth [hour];ಪ್ರಾರ್ಥನೆಯ ಸಮಯವಾದ ಒಂಭತ್ತ ನೆಯ ತಾಸಿನಲ್ಲಿ (ಮೂರು ಘಂಟೆಗೆ) ಪೇತ್ರ ಯೋಹಾನರು ಕೂಡಿಕೊಂಡು ದೇವಾಲಯಕ್ಕೆ ಹೋದರು.

2 and a certain man who was lame from his mother's womb was being carried, whom they placed every day at the gate of the temple called Beautiful, to ask alms of those who were going into the temple;ಹುಟ್ಟು ಕುಂಟನಾಗಿದ್ದ ಒಬ್ಬಾನೊಬ್ಬ ಮನುಷ್ಯನು ದೇವಾಲಯಕ್ಕೆ ಹೋಗುತ್ತಿದ್ದವರಿಂದ ಭಿಕ್ಷೆ ಬೇಡುವದಕ್ಕಾಗಿ ಅವನನ್ನು ಕೆಲವರು ಹೊತ್ತು ಕೊಂಡು ಹೋಗಿ ದೇವಾಲಯದ ಸುಂದರವೆಂಬ ಬಾಗಲಿನಲ್ಲಿ ಪ್ರತಿ ದಿನ ಕೂಡ್ರಿಸುತ್ತಿದ್ದರು.

3 who, seeing Peter and John about to enter into the temple, asked to receive alms.ದೇವಾ ಲಯದೊಳಕ್ಕೆ ಹೋಗುವದಕ್ಕಿದ್ದ ಪೇತ್ರ ಯೋಹಾನ ರನ್ನು ಅವನು ನೋಡಿ ಭಿಕ್ಷೆ ಬೇಡಿದನು.

4 And Peter, looking stedfastly upon him with John, said, Look on us.ಆಗ ಪೇತ್ರನು ಯೋಹಾನನೊಂದಿಗೆ ಅವನನ್ನು ಕಣ್ಣಿಟ್ಟು ನೋಡುತ್ತಾ--ನಮ್ಮನ್ನು ನೋಡು ಅಂದನು.

5 And he gave heed to them, expecting to receive something from them.ಆಗ ಅವರಿಂದ ಏನಾದರೂ ತನಗೆ ಸಿಕ್ಕೀತೆಂದು ನಿರೀಕ್ಷಿಸಿ ಅವನು ಅವರ ಮೇಲೆ ಲಕ್ಷ್ಯವಿಟ್ಟನು.

6 But Peter said, Silver and gold I have not; but what I have, this give I to thee: In the name of Jesus Christ the Nazaraean rise up and walk.ಆಗ ಪೇತ್ರನು--ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ. ಆದರೆ ನನಗಿರುವದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆದಾಡು ಎಂದು ಹೇಳಿ

7 And having taken hold of him [by] the right hand he raised him up, and immediately his feet and ankle bones were made strong.ಪೇತ್ರನು ಅವನ ಬಲಗೈಯನ್ನು ಹಿಡಿದು ಎತ್ತಿದನು; ಕೂಡಲೆ ಅವನ ಪಾದಗಳೂ ಹರಡಿನ ಎಲುಬುಗಳೂ ಬಲವನ್ನು ಹೊಂದಿದವು.

8 And leaping up he stood and walked, and entered with them into the temple, walking, and leaping, and praising God.ಆಗ ಅವನು ಹಾರಿ ನಿಂತು ನಡೆದನು. ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.

9 And all the people saw him walking and praising God;ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರೂ ನೋಡಿ

10 and they recognised him, that it was *he* who sat for alms at the Beautiful gate of the temple; and they were filled with wonder and amazement at what had happened to him.ದೇವಾಲಯದ ಸುಂದರ ವೆಂಬ ಬಾಗಲಿನಲ್ಲಿ ಭಿಕ್ಷೆಗಾಗಿ ಕೂತುಕೊಂಡಿದ್ದವನು ಇವನೇ ಎಂದು ಅವರು ತಿಳಿದುಕೊಂಡರು; ಹಾಗೆ ಅವನಿಗೆ ಸಂಭವಿಸಿದ್ದಕ್ಕಾಗಿ ಅವರು ಆಶ್ಚರ್ಯದಿಂದಲೂ ವಿಸ್ಮಯದಿಂದಲೂ ತುಂಬಿದವರಾದರು.

11 And as he held Peter and John, all the people ran together to them in the portico which is called Solomon's, greatly wondering.ಸ್ವಸ್ಥನಾದ ಆ ಕುಂಟನು ಪೇತ್ರನನ್ನೂ ಯೋಹಾನ ನನ್ನೂ ಅಂಟಿಕೊಂಡಿದ್ದಾಗ ಜನರೆಲ್ಲರೂ ಕೂಡಿ ಅವರ ಬಳಿಗೆ ಅತ್ಯಾಶ್ಚರ್ಯದಿಂದ ಸೊಲೊಮೋನನದೆಂದು ಕರೆಯಲ್ಪಟ್ಟ ದ್ವಾರಾಂಗಳದೊಳಕ್ಕೆ ಓಡಿ ಬಂದರು.

12 And Peter, seeing it, answered the people, Men of Israel, why are ye astonished at this? or why do ye gaze on us as if we had by our own power or piety made him to walk?ಪೇತ್ರನು ಇದನ್ನು ನೋಡಿ ಜನರಿಗೆ--ಇಸ್ರಾ ಯೇಲ್‌ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯ ಪಡುತ್ತೀರಿ? ಇಲ್ಲವೆ ನಮ್ಮ ಸ್ವಂತ ಶಕ್ತಿಯಿಂದಾಗಲಿ ಪರಿಶುದ್ಧತೆಯಿಂದಾಗಲಿ ಈ ಮನುಷ್ಯನನ್ನು ನಡೆಯು ವಂತೆ ಮಾಡಿದೆವೋ ಎಂಬಂತೆ ನಮ್ಮ ಮೇಲೆ ಯಾಕೆ ನೀವು ದೃಷ್ಟಿ ಇಟ್ಟು ನೋಡುತ್ತೀರಿ?

13 The God of Abraham and Isaac and Jacob, the God of our fathers, has glorified his servant Jesus, whom *ye* delivered up, and denied him in the presence of Pilate, when *he* had judged that he should be let go.ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.

14 But *ye* denied the holy and righteous one, and asked that a man [that was] a murderer should be granted to you;ಹೀಗೆ ಪರಿಶುದ್ಧನೂ ನೀತಿವಂತನೂ ಆಗಿರುವಾತ ನನ್ನು ನೀವು ಬೇಡವೆಂದು ಹೇಳಿ ಒಬ್ಬ ಕೊಲೆಗಾರನನ್ನು ನಿಮಗಾಗಿ ಬಿಟ್ಟುಕೊಡುವಂತೆ ಅಪೇಕ್ಷಿಸಿ

15 but the originator of life ye slew, whom God raised from among [the] dead, whereof *we* are witnesses.ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ.

16 And, by faith in his name, his name has made this [man] strong whom ye behold and know; and the faith which is by him has given him this complete soundness in the presence of you all.ನೀವು ನೋಡಿ ತಿಳಿದಂಥ ಈ ಮನುಷ್ಯನು ಆತನ ಹೆಸರಿನಲ್ಲಿ ನಂಬಿಕೆ ಇಟ್ಟದ್ದರಿಂದ ಆ ಹೆಸರೇ ಇವನನ್ನು ಬಲಪಡಿಸಿತು; ಹೌದು, ಆತನಿಂದಾದ ನಂಬಿಕೆಯು ನಿಮ್ಮೆಲ್ಲರ ಮುಂದೆ ಇವನಿಗೆ ಇಂಥ ಪೂರ್ಣ ಸ್ವಸ್ಥತೆಯನ್ನು ಕೊಟ್ಟಿತು.

17 And now, brethren, I know that ye did it in ignorance, as also your rulers;ಈಗ ಸಹೋದರರೇ, ನಿಮ್ಮ ಅಧಿಕಾರಿಗಳು ತಿಳಿಯದೆ ಮಾಡಿದಂತೆ ನೀವೂ ಇದನ್ನು ಮಾಡಿದಿ ರೆಂದು ನಾನು ಬಲ್ಲೆನು.

18 but God has thus fulfilled what he had announced beforehand by the mouth of all the prophets, that his Christ should suffer.ಕ್ರಿಸ್ತನು ಬಾಧೆಪಡ ಬೇಕೆಂದು ದೇವರು ಮುಂದಾಗಿ ತನ್ನ ಎಲ್ಲಾ ಪ್ರವಾದಿ ಗಳ ಬಾಯಿಂದ ಹೇಳಿಸಿದವುಗಳನ್ನು ಹೀಗೆ ನೆರವೇರಿ ಸಿದನು.

19 Repent therefore and be converted, for the blotting out of your sins, so that times of refreshing may come from [the] presence of the Lord,ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.

20 and he may send Jesus Christ, who was foreordained for you,ಇದಲ್ಲದೆ ಮೊದಲು ನಿಮಗೆ ಸಾರಲ್ಪ ಟ್ಟಂಥ ಯೇಸು ಕ್ರಿಸ್ತನನ್ನು ಆತನು ಕಳುಹಿಸುವನು.

21 whom heaven indeed must receive till [the] times of [the] restoring of all things, of which God has spoken by the mouth of his holy prophets since time began.ಲೋಕಾದಿಯಿಂದ ತನ್ನ ಎಲ್ಲಾ ಪರಿಶುದ್ಧ ಪ್ರವಾದಿ ಗಳ ಬಾಯಿಯ ಮುಖಾಂತರ ದೇವರು ತಿಳಿಸಿದ್ದೆ ಲ್ಲವುಗಳು ಯಥಾಸ್ಥಿತಿಗೆ ಬರುವ ಸಮಯದ ವರೆಗೆ ಪರಲೋಕದಲ್ಲಿ ಆತನು ಇರುವದು ಅವಶ್ಯವಾಗಿತ್ತು.

22 Moses indeed said, A prophet shall [the] Lord your God raise up to you out of your brethren like me: him shall ye hear in everything whatsoever he shall say to you.ಯಾಕಂದರೆ ಪಿತೃಗಳಿಗೆ ಮೋಶೆಯು ನಿಜವಾಗಿಯೂ ಹೇಳಿದ್ದೇನಂದರೆ--ನನ್ನ ಹಾಗೆ ಒಬ್ಬ ಪ್ರವಾದಿಯನ್ನು ನಿಮ್ಮ ಸಹೋದರರಲ್ಲಿ ನಿಮ್ಮ ದೇವರಾದ ಕರ್ತನು ನಿಮಗಾಗಿ ಎಬ್ಬಿಸುವನು; ಆತನು ನಿಮಗೆ ಹೇಳುವ ಎಲ್ಲಾ ವಿಷಯಗಳಿಗೆ ನೀವು ಕಿವಿಗೊಡತಕ್ಕದ್ದು;

23 And it shall be that whatsoever soul shall not hear that prophet shall be destroyed from among the people.ಆ ಪ್ರವಾದಿಗೆ ಕಿವಿಗೊಡದಿರುವ ಪ್ರತಿಯೊಬ್ಬನೂ ಜನ ರೊಳಗಿಂದ ನಾಶವಾಗುವನು ಎಂಬದು.

24 And indeed all the prophets from Samuel and those in succession after [him], as many as have spoken, have announced also these days.ಹೌದು, ಸಮುವೇಲನು ಮೊದಲುಗೊಂಡು ಎಲ್ಲಾ ಪ್ರವಾದಿ ಗಳೂ ತರುವಾಯ ಬಂದು ಮಾತನಾಡಿದವರೆಲ್ಲರೂ ಈ ದಿವಸಗಳ ವಿಷಯವಾಗಿ ಅದರಂತೆಯೇ ಮುಂತಿಳಿ ಸಿದರು.

25 *Ye* are the sons of the prophets and of the covenant which God appointed to our fathers, saying to Abraham, And in thy seed shall all the families of the earth be blessed.ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.

26 To you first God, having raised up his servant, has sent him, blessing you in turning each one [of you] from your wickedness.ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.

Kannada Bible