Acts 13:30
ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
Acts 13:30 in Other Translations
King James Version (KJV)
But God raised him from the dead:
American Standard Version (ASV)
But God raised him from the dead:
Bible in Basic English (BBE)
But God gave him back from the dead:
Darby English Bible (DBY)
but God raised him from among [the] dead,
World English Bible (WEB)
But God raised him from the dead,
Young's Literal Translation (YLT)
and God did raise him out of the dead,
| ὁ | ho | oh | |
| But | δὲ | de | thay |
| God | θεὸς | theos | thay-OSE |
| raised | ἤγειρεν | ēgeiren | A-gee-rane |
| him | αὐτὸν | auton | af-TONE |
| from | ἐκ | ek | ake |
| the dead: | νεκρῶν | nekrōn | nay-KRONE |
Cross Reference
ಅಪೊಸ್ತಲರ ಕೃತ್ಯಗ 2:24
ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು. ಯಾಕಂದರೆ ಮರಣವು ಆತನನ್ನು ಹಿಡಿದುಕೊಂಡಿರುವದು ಅಸಾಧ್ಯ ವಾಗಿತ್ತು.
ಮತ್ತಾಯನು 28:6
ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ.
ಇಬ್ರಿಯರಿಗೆ 13:20
ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
ಅಪೊಸ್ತಲರ ಕೃತ್ಯಗ 17:31
ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.
ಅಪೊಸ್ತಲರ ಕೃತ್ಯಗ 10:40
ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಬಹಿರಂಗವಾಗಿ ತೋರ್ಪಡಿಸಿದನು.
ಅಪೊಸ್ತಲರ ಕೃತ್ಯಗ 5:30
ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಎಬ್ಬಿಸಿದನು.
ಅಪೊಸ್ತಲರ ಕೃತ್ಯಗ 4:10
ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.
ಅಪೊಸ್ತಲರ ಕೃತ್ಯಗ 3:26
ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 3:15
ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ.
ಅಪೊಸ್ತಲರ ಕೃತ್ಯಗ 3:13
ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.
ಅಪೊಸ್ತಲರ ಕೃತ್ಯಗ 2:32
ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ.
ಯೋಹಾನನು 10:17
ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
ಯೋಹಾನನು 2:19
ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು.