Romans 14:2
ಒಬ್ಬನು ಯಾವದನ್ನಾ ದರೂ ತಿನ್ನಬಹುದೆಂದು ನಂಬುತ್ತಾನೆ; ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ;
Romans 14:2 in Other Translations
King James Version (KJV)
For one believeth that he may eat all things: another, who is weak, eateth herbs.
American Standard Version (ASV)
One man hath faith to eat all things: but he that is weak eateth herbs.
Bible in Basic English (BBE)
One man has faith to take all things as food: another who is feeble in faith takes only green food.
Darby English Bible (DBY)
One man is assured that he may eat all things; but the weak eats herbs.
World English Bible (WEB)
One man has faith to eat all things, but he who is weak eats only vegetables.
Young's Literal Translation (YLT)
one doth believe that he may eat all things -- and he who is weak doth eat herbs;
| For one | ὃς | hos | ose |
| μὲν | men | mane | |
| believeth | πιστεύει | pisteuei | pee-STAVE-ee |
| that he may eat | φαγεῖν | phagein | fa-GEEN |
| things: all | πάντα | panta | PAHN-ta |
another, | ὁ | ho | oh |
| δὲ | de | thay | |
| who is weak, | ἀσθενῶν | asthenōn | ah-sthay-NONE |
| eateth | λάχανα | lachana | LA-ha-na |
| herbs. | ἐσθίει | esthiei | ay-STHEE-ee |
Cross Reference
ರೋಮಾಪುರದವರಿಗೆ 14:14
ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.
1 ತಿಮೊಥೆಯನಿಗೆ 4:4
ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು.
ಆದಿಕಾಂಡ 9:3
ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
ಇಬ್ರಿಯರಿಗೆ 13:9
ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ಯಾಕಂದರೆ ಕೃಪೆಯೊಂದಿಗೆ ಹೃದಯವನ್ನು ದೃಢ ಮಾಡಿಕೊಳ್ಳುವದು ಉತ್ತಮವೇ; ಭೋಜನ ಪದಾರ್ಥಗಳಲ್ಲಿ ಮಗ್ನರಾದವರು ಅವುಗಳಲ್ಲಿ ಏನೂ ಪ್ರಯೋಜನ ಹೊಂದಲಿಲ್ಲ.
ಇಬ್ರಿಯರಿಗೆ 9:10
ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
ತೀತನಿಗೆ 1:15
ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲ ದವರಿಗೂ ಯಾವದೂ ಶುದ್ಧವಲ್ಲ; ಆದರೆ ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಕೂಡ ಮಲಿನವಾಗಿವೆ.
ಗಲಾತ್ಯದವರಿಗೆ 2:12
ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
1 ಕೊರಿಂಥದವರಿಗೆ 10:25
ಕಟುಕರ ಅಂಗಡಿಯಲ್ಲಿ ಮಾರುವದೇನಿದ್ದರೂ ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ.
ರೋಮಾಪುರದವರಿಗೆ 14:22
ನಿನಗೆ ನಂಬಿಕೆಯಿದೆಯೋ? ದೇವರ ಸನ್ನಿಧಿಯಲ್ಲಿ ಅದು ನಿನಗೇ ಇರಲಿ. ಒಬ್ಬನು ತಾನು ಒಪ್ಪುವ ವಿಷಯದಲ್ಲಿ ತನ್ನನ್ನು ತಾನು ಖಂಡಿಸಿ ಕೊಳ್ಳದಿದ್ದರೆ ಅವನು ಧನ್ಯನು.
ದಾನಿಯೇಲನು 1:16
ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂತ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು.
ದಾನಿಯೇಲನು 1:12
ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ.
ಙ್ಞಾನೋಕ್ತಿಗಳು 15:17
ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸ ಕ್ಕಿಂತ ಪ್ರೀತಿ ಇರುವಲ್ಲಿ ಸಸ್ಯಹಾರವು ಉತ್ತಮ.
ಆದಿಕಾಂಡ 1:29
ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು.