Isaiah 40:30
ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.
Isaiah 40:30 in Other Translations
King James Version (KJV)
Even the youths shall faint and be weary, and the young men shall utterly fall:
American Standard Version (ASV)
Even the youths shall faint and be weary, and the young men shall utterly fall:
Bible in Basic English (BBE)
Even the young men will become feeble and tired, and the best of them will come to the end of his strength;
Darby English Bible (DBY)
Even the youths shall faint and shall tire, and the young men shall stumble and fall;
World English Bible (WEB)
Even the youths shall faint and be weary, and the young men shall utterly fall:
Young's Literal Translation (YLT)
Even youths are wearied and fatigued, And young men utterly stumble,
| Even the youths | וְיִֽעֲפ֥וּ | wĕyiʿăpû | veh-yee-uh-FOO |
| shall faint | נְעָרִ֖ים | nĕʿārîm | neh-ah-REEM |
| weary, be and | וְיִגָ֑עוּ | wĕyigāʿû | veh-yee-ɡA-oo |
| and the young men | וּבַחוּרִ֖ים | ûbaḥûrîm | oo-va-hoo-REEM |
| shall utterly | כָּשׁ֥וֹל | kāšôl | ka-SHOLE |
| fall: | יִכָּשֵֽׁלוּ׃ | yikkāšēlû | yee-ka-shay-LOO |
Cross Reference
ಕೀರ್ತನೆಗಳು 33:16
ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ.
ಯೆಶಾಯ 13:18
ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ.
ಆಮೋಸ 2:14
ಆದ ದರಿಂದ ತ್ವರೆಯಾಗಿ ಓಡುವವನು ನಾಶವಾಗುವನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು; ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
ಪ್ರಸಂಗಿ 9:11
ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.
ಯೆಶಾಯ 9:17
ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
ಕೀರ್ತನೆಗಳು 34:10
ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
ಕೀರ್ತನೆಗಳು 39:5
ಇಗೋ, ನನ್ನ ದಿವಸ ಗಳನ್ನು ಗೇಣುದ್ದವಾಗಿ ಮಾಡಿದ್ದೀ; ನನ್ನ ಆಯುಷ್ಯವು ನಿನ್ನ ಮುಂದೆ ಏನೂ ಇಲ್ಲದ ಹಾಗಿದೆ; ನಿಶ್ಚಯವಾಗಿ ಉತ್ತಮ ಸ್ಥಿತಿಯಲ್ಲಿರುವ ಪ್ರತಿಯೊಬ್ಬನು ಒಟ್ಟಾರೆಯಲ್ಲಿ ವ್ಯರ್ಥವಾದವನೇ. ಸೆಲಾ.
ಯೆರೆಮಿಯ 6:11
ಆದದರಿಂದ ಕರ್ತನ ಕೋಪದಿಂದ ನಾನು ತುಂಬಿ ದ್ದೇನೆ, ಅದನ್ನು ನನ್ನೊಳಗೆ ಬಿಗಿಹಿಡಿದು ನನಗೆ ಸಾಕಾಯಿತು; ಅದನ್ನು ದೂರ ಇರುವ ಮಕ್ಕಳ ಮೇಲೆ ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು. ನಿಶ್ಚಯವಾಗಿ ಗಂಡನು ಹೆಂಡತಿಯ ಸಂಗಡಲೂ ಮುದುಕನು ದಿನ ತುಂಬಿದವನ ಸಂಗ ಡಲೂ ಹಿಡಿಯಲ್ಪಡುವರು.
ಯೆರೆಮಿಯ 9:21
ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು, ನಮ್ಮ ಅರಮನೆ ಗಳಲ್ಲಿ ಸೇರಿತು; ಹೊರಗಡೆ ಮಕ್ಕಳನ್ನೂ ಬೀದಿಗಳಲ್ಲಿ ಯೌವ್ವನಸ್ಥರನ್ನೂ ಕಡಿದು ಹಾಕುತ್ತದೆ.