John 5 - KJV (Kannada)
1 After this there was a feast of the Jews; and Jesus went up to Jerusalem.ಇದಾದ ಮೇಲೆ ಯೆಹೂದ್ಯರದೊಂದು ಹಬ್ಬ ಇದ್ದದರಿಂದ ಯೇಸು ಯೆರೂ ಸಲೇಮಿಗೆ ಹೋದನು.
2 Now there is at Jerusalem by the sheep market a pool, which is called in the Hebrew tongue Bethesda, having five porches.ಯೆರೂಸಲೇಮಿನಲ್ಲಿ ಕುರಿ ಮಾರುವ ಸ್ಥಳದ ಹತ್ತಿರದಲ್ಲಿ ಒಂದು ಕೊಳವಿದೆ; ಇದು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯ ಲ್ಪಡುತ್ತದೆ. ಅದಕ್ಕೆ ಐದು ದ್ವಾರಾಂಗಳಗಳಿವೆ.
3 In these lay a great multitude of impotent folk, of blind, halt, withered, waiting for the moving of the water.ಇವು ಗಳಲ್ಲಿ ಬಲಹೀನರೂ ಕುರುಡರೂ ಕುಂಟರೂ ಮೈ ಒಣಗಿದವರೂ ಆಗಿದ್ದ ದೊಡ್ಡ ಸಮೂಹವು ಬಿದ್ದು ಕೊಂಡಿದ್ದು ನೀರಿನ ಕದಲಿಸುವಿಕೆಗಾಗಿ ಕಾದುಕೊಂಡಿ ದ್ದರು.
4 For an angel went down at a certain season into the pool, and troubled the water: whosoever then first after the troubling of the water stepped in was made whole of whatsoever disease he had.ಆಯಾ ಕಾಲದಲ್ಲಿ ಒಬ್ಬ ದೂತನು ಕೊಳ ದೊಳಗೆ ಇಳಿದುಹೋಗಿ ನೀರನ್ನು ಕದಲಿಸುತ್ತಿದ್ದನು; ನೀರು ಕದಲಿಸಲ್ಪಟ್ಟ ಮೇಲೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಸ್ವಸ್ಥವಾಗುತ್ತಿತ್ತು.
5 And a certain man was there, which had an infirmity thirty and eight years.ಆಗ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬಾನೊಬ್ಬ ಮನು ಷ್ಯನು ಅಲ್ಲಿ ಇದ್ದನು.
6 When Jesus saw him lie, and knew that he had been now a long time in that case, he saith unto him, Wilt thou be made whole?ಅವನು ಬಿದ್ದುಕೊಂಡಿರುವದನ್ನು ಯೇಸು ನೋಡಿ ಅವನು ಬಹುಕಾಲದಿಂದ ಆ ಸ್ಥಿತಿ ಯಲ್ಲಿ ಇದ್ದಾನೆಂದು ತಿಳಿದು ಅವನಿಗೆ--ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ ಎಂದು ಕೇಳಿದನು.
7 The impotent man answered him, Sir, I have no man, when the water is troubled, to put me into the pool: but while I am coming, another steppeth down before me.ಅದಕ್ಕೆ ಆ ರೋಗಿಯು ಪ್ರತ್ಯುತ್ತರವಾಗಿ ಆತನಿಗೆ--ಅಯ್ಯಾ, ನೀರು ಕದಲಿಸಲ್ಪಡುವಾಗ ನನ್ನನ್ನು ಕೊಳದೊಳಗೆ ಇಳಿಸುವದಕ್ಕೆ ನನಗೆ ಯಾರು ಇಲ್ಲ; ಆದರೆ ನಾನು ಬರುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು.
8 Jesus saith unto him, Rise, take up thy bed, and walk.ಯೇಸು ಅವನಿಗೆ-- ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅಂದನು.
9 And immediately the man was made whole, and took up his bed, and walked: and on the same day was the sabbath.ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.
10 The Jews therefore said unto him that was cured, It is the sabbath day: it is not lawful for thee to carry thy bed.ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.
11 He answered them, He that made me whole, the same said unto me, Take up thy bed, and walk.ಅವನು ಪ್ರತ್ಯುತ್ತರವಾಗಿ ಅವರಿಗೆ--ನನ್ನನ್ನು ಸ್ವಸ್ಥ ಮಾಡಿದಾತನೇ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನನಗೆ ಹೇಳಿದ್ದಾನೆ ಅಂದನು.
12 Then asked they him, What man is that which said unto thee, Take up thy bed, and walk?ಅದಕ್ಕೆ ಅವರು ಅವನಿಗೆ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.
13 And he that was healed wist not who it was: for Jesus had conveyed himself away, a multitude being in that place.ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ; ಯಾಕಂದರೆ ಆ ಸ್ಥಳ ದಲ್ಲಿ ಜನಸಮೂಹವು ಇದ್ದದರಿಂದ ಯೇಸು ಅಲ್ಲಿಂದ ಸರಕೊಂಡು ಹೋಗಿದ್ದನು.
14 Afterward Jesus findeth him in the temple, and said unto him, Behold, thou art made whole: sin no more, lest a worse thing come unto thee.ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ--ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.
15 The man departed, and told the Jews that it was Jesus, which had made him whole.ಆಗ ಅವನು ಹೊರಟು ಹೋಗಿ ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯ ರಿಗೆ ತಿಳಿಸಿದನು.
16 And therefore did the Jews persecute Jesus, and sought to slay him, because he had done these things on the sabbath day.ಆತನು ಇವುಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸು ವನ್ನು ಹಿಂಸಿಸಿ ಆತನನ್ನು ಕೊಲ್ಲುವದಕ್ಕೆ ನೋಡಿದರು.
17 But Jesus answered them, My Father worketh hitherto, and I work.ಆದರೆ ಯೇಸು ಅವರಿಗೆ--ನನ್ನ ತಂದೆಯು ಈ ವರೆಗೂ ಕೆಲಸ ಮಾಡುತ್ತಾನೆ ಮತ್ತು ನಾನೂ ಕೆಲಸ ಮಾಡುತ್ತೇನೆ ಅಂದನು.
18 Therefore the Jews sought the more to kill him, because he not only had broken the sabbath, but said also that God was his Father, making himself equal with God.ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು.
19 Then answered Jesus and said unto them, Verily, verily, I say unto you, The Son can do nothing of himself, but what he seeth the Father do: for what things soever he doeth, these also doeth the Son likewise.ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡದ್ದನ್ನಲ್ಲದೆ ಮಗನು ತನ್ನಷ್ಟಕ್ಕೆ ತಾನೇ ಯಾವದನ್ನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುವನು.
20 For the Father loveth the Son, and sheweth him all things that himself doeth: and he will shew him greater works than these, that ye may marvel.ಯಾಕಂದರೆ ತಂದೆಯು ಮಗನನ್ನು ಪ್ರೀತಿಸಿ ತಾನು ಸ್ವತಃ ಮಾಡುವವುಗಳನ್ನೆಲ್ಲಾ ಮಗನಿಗೆ ತೋರಿಸುತ್ತಾನೆ; ನೀವು ಆಶ್ಚರ್ಯಪಡುವ ಹಾಗೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು.
21 For as the Father raiseth up the dead, and quickeneth them; even so the Son quickeneth whom he will.ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ತನಗೆ ಇಷ್ಟವಿರು ವವರನ್ನು ಬದುಕಿಸುತ್ತಾನೆ.
22 For the Father judgeth no man, but hath committed all judgment unto the Son:ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ;
23 That all men should honour the Son, even as they honour the Father. He that honoureth not the Son honoureth not the Father which hath sent him.ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.
24 Verily, verily, I say unto you, He that heareth my word, and believeth on him that sent me, hath everlasting life, and shall not come into condemnation; but is passed from death unto life.ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ.
25 Verily, verily, I say unto you, The hour is coming, and now is, when the dead shall hear the voice of the Son of God: and they that hear shall live.ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು.
26 For as the Father hath life in himself; so hath he given to the Son to have life in himself;ತಂದೆಯು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ.
27 And hath given him authority to execute judgment also, because he is the Son of man.ಆತನು ಮನುಷ್ಯಕುಮಾರ ನಾಗಿರುವದರಿಂದ ನ್ಯಾಯತೀರಿಸುವ ಅಧಿಕಾರವನ್ನು ಸಹ ಆತನಿಗೆ ಕೊಟ್ಟಿದ್ದಾನೆ.
28 Marvel not at this: for the hour is coming, in the which all that are in the graves shall hear his voice,ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು,
29 And shall come forth; they that have done good, unto the resurrection of life; and they that have done evil, unto the resurrection of damnation.ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.
30 I can of mine own self do nothing: as I hear, I judge: and my judgment is just; because I seek not mine own will, but the will of the Father which hath sent me.ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ನಾನು ಕೇಳುವಂತೆಯೇ ತೀರ್ಪು ಮಾಡುತ್ತೇನೆ ಮತ್ತು ನನ್ನ ತೀರ್ಪು ನ್ಯಾಯ ವಾದದ್ದು; ಯಾಕಂದರೆ ನಾನು ನನ್ನ ಸ್ವಂತಚಿತ್ತವನ್ನಲ್ಲ, ಆದರೆ ನನ್ನನ್ನು ಕಳುಹಿಸಿದ ತಂದೆಯ ಚಿತ್ತವು ನೆರವೇರ ಬೇಕೆಂದು ಅಪೆಕ್ಷಿಸುತ್ತೇನೆ.
31 If I bear witness of myself, my witness is not true.ನನ್ನನ್ನು ಕುರಿತು ನಾನೇ ಸಾಕ್ಷಿ ಹೇಳುವದಾದರೆ ನನ್ನ ಸಾಕ್ಷಿಯು ನಿಜವಾದದ್ದಲ್ಲ.
32 There is another that beareth witness of me; and I know that the witness which he witnesseth of me is true.ನನ್ನನ್ನು ಕುರಿತು ಸಾಕ್ಷಿಕೊಡುವಾತನು ಬೇರೊಬ್ಬನಿ ದ್ದಾನೆ; ಆತನು ನನ್ನ ವಿಷಯದಲ್ಲಿ ಕೊಡುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು.
33 Ye sent unto John, and he bare witness unto the truth.ನೀವು ಯೋಹಾನನ ಬಳಿಗೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು.
34 But I receive not testimony from man: but these things I say, that ye might be saved.ನಾನು ಮನುಷ್ಯನಿಂದ ಸಾಕ್ಷಿ ಅಂಗೀಕರಿಸುವದಿಲ್ಲ; ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವು ಗಳನ್ನು ಹೇಳುತ್ತೇನೆ.
35 He was a burning and a shining light: and ye were willing for a season to rejoice in his light.ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ;
36 But I have greater witness than that of John: for the works which the Father hath given me to finish, the same works that I do, bear witness of me, that the Father hath sent me.ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
37 And the Father himself, which hath sent me, hath borne witness of me. Ye have neither heard his voice at any time, nor seen his shape.ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ವಿಷಯದಲ್ಲಿ ಸಾಕ್ಷಿ ಹೇಳಿದ್ದಾನೆ; ನೀವು ಎಂದಾದರೂ ಆತನ ಧ್ವನಿಯನ್ನು ಕೇಳಲಿಲ್ಲ ಇಲ್ಲವೆ ಆತನ ರೂಪವನ್ನು ನೋಡಲಿಲ್ಲ.
38 And ye have not his word abiding in you: for whom he hath sent, him ye believe not.ಆತನ ವಾಕ್ಯವು ನಿಮ್ಮಲ್ಲಿ ನೆಲೆಯಾಗಿರುವದಿಲ್ಲ; ಯಾಕಂದರೆ ಆತನು ಕಳುಹಿಸಿದಾತನನ್ನು ನೀವು ನಂಬು ವದಿಲ್ಲ.
39 Search the scriptures; for in them ye think ye have eternal life: and they are they which testify of me.ಬರಹಗಳನ್ನು ಪರಿಶೋಧಿಸಿರಿ; ಅವುಗಳಲ್ಲಿ ನಿಮಗೆ ನಿತ್ಯಜೀವ ಉಂಟೆಂದು ನೀವು ನೆನಸುತ್ತೀರಲ್ಲಾ; ಅವುಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುವವುಗಳಾ ಗಿವೆ.
40 And ye will not come to me, that ye might have life.ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.
41 I receive not honour from men.ನಾನು ಮನುಷ್ಯರಿಂದ ಮಾನವನ್ನು ಅಂಗೀಕರಿ ಸುವದಿಲ್ಲ.
42 But I know you, that ye have not the love of God in you.ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.
43 I am come in my Father's name, and ye receive me not: if another shall come in his own name, him ye will receive.ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.
44 How can ye believe, which receive honour one of another, and seek not the honour that cometh from God only?ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
45 Do not think that I will accuse you to the Father: there is one that accuseth you, even Moses, in whom ye trust.ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.
46 For had ye believed Moses, ye would have believed me; for he wrote of me.ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.
47 But if ye believe not his writings, how shall ye believe my words?ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.
Kannada Bible