John 1:12
ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.
But | ὅσοι | hosoi | OH-soo |
as many as | δὲ | de | thay |
received | ἔλαβον | elabon | A-la-vone |
him, | αὐτόν | auton | af-TONE |
them to | ἔδωκεν | edōken | A-thoh-kane |
gave he | αὐτοῖς | autois | af-TOOS |
power | ἐξουσίαν | exousian | ayks-oo-SEE-an |
become to | τέκνα | tekna | TAY-kna |
the sons | θεοῦ | theou | thay-OO |
of God, | γενέσθαι | genesthai | gay-NAY-sthay |
that them to even | τοῖς | tois | toos |
believe | πιστεύουσιν | pisteuousin | pee-STAVE-oo-seen |
on | εἰς | eis | ees |
his | τὸ | to | toh |
name: | ὄνομα | onoma | OH-noh-ma |
αὐτοῦ | autou | af-TOO |
Cross Reference
Galatians 3:26
ನೀವೆಲ್ಲರು ಕ್ರಿಸ್ತ ಯೇಸು ವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿ ದ್ದೀರಿ.
1 John 3:1
ಇಗೋ, ನಾವು ದೇವರ ಪುತ್ರರೆಂದು ಕರೆಯಲ್ಪಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ; ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳು ವದಿಲ್ಲ; ಯಾಕಂದರೆ ಅದು ಆತನನ್ನು ತಿಳಿದು ಕೊಳ್ಳಲಿಲ್ಲ.
Romans 8:14
ಯಾಕಂದರೆ ಯಾರಾರು ದೇವರ ಆತ್ಮನಿಂದ ನಡಿಸಲ್ಪಡುತ್ತಾರೋ ಅವರು ದೇವರ ಪುತ್ರರಾಗಿದ್ದಾರೆ.
2 Corinthians 6:17
ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
Colossians 2:6
ಆದದರಿಂದ ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದು ಕೊಳ್ಳಿರಿ.
Isaiah 56:5
ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.
Matthew 10:40
ನಿಮ್ಮನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಮತ್ತು ನನ್ನನ್ನು ಅಂಗೀಕರಿಸಿ ಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನು ಅಂಗೀಕರಿಸಿ ಕೊಳ್ಳುತ್ತಾನೆ.
John 3:18
ಆತನ ಮೇಲೆ ನಂಬಿಕೆ ಇಡುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬಿಕೆಯಿಡದವನಿಗೆ ಆಗಲೇ ತೀರ್ಪಾಯಿತು; ಯಾಕಂದರೆ ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.
1 John 5:12
ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ.
Matthew 18:5
ಮತ್ತು ಯಾವನಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿ ಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ.
Jeremiah 3:19
ಆದರೆ ನಾನು--ನಿನ್ನನ್ನು ಮಕ್ಕಳೊಳಗೆ ಇಟ್ಟು ಮನೋಹರವಾದ ದೇಶವನ್ನೂ ಜನಾಂಗಗಳವರ ಸೈನ್ಯಗಳ ರಮ್ಯವಾದ ಸ್ವಾಸ್ತ್ಯವನ್ನೂ ನಿನಗೆ ಕೊಡು ವದು ಹೇಗೆಂದು ನಾನು ಅಂದುಕೊಂಡೆನು; ನಾನು --ನನ್ನ ತಂದೆಯೇ, ನೀನು ನನ್ನನ್ನು ಕರೆದು, ನನ್ನನ್ನು ಬಿಟ್ಟು ತಿರುಗುವದಿಲ್ಲವೆಂದು ಅಂದುಕೊಂಡೆನು.
1 John 3:23
ಆತನ ಆಜ್ಞೆ ಯಾವದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಆತನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.
Hosea 1:10
ಆದಾಗ್ಯೂ ಇಸ್ರಾಯೇಲಿನ ಮಕ್ಕಳ ಸಂಖ್ಯೆ ಅಳೆಯಲೂ ಲೆಕ್ಕಿಸಲೂ ಆಗದ ಸಮುದ್ರದ ಮರಳಿನ ಹಾಗೆ ಇರುವದು; ಮುಂದೆ ಇದಾದ ಮೇಲೆ--ನನ್ನ ಜನರಲ್ಲವೆಂದು ಅವರಿಗೆ ಹೇಳಿದ ಸ್ಥಳದಲ್ಲಿಯೇ ಜೀವವುಳ್ಳ ದೇವರ ಕುಮಾರರೆಂದು ಅವರಿಗೆ ಹೇಳುವರು.
John 1:7
ಎಲ್ಲರೂ ತನ್ನ ಮೂಲಕವಾಗಿ ನಂಬುವಂತೆ ಅವನೇ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡುವದಕ್ಕೆ ಸಾಕ್ಷಿಗಾಗಿ ಬಂದನು.
Galatians 4:6
ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.
Matthew 12:21
ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.
John 11:52
ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೂ ಆತನು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
John 2:23
ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.
Acts 3:16
ನೀವು ನೋಡಿ ತಿಳಿದಂಥ ಈ ಮನುಷ್ಯನು ಆತನ ಹೆಸರಿನಲ್ಲಿ ನಂಬಿಕೆ ಇಟ್ಟದ್ದರಿಂದ ಆ ಹೆಸರೇ ಇವನನ್ನು ಬಲಪಡಿಸಿತು; ಹೌದು, ಆತನಿಂದಾದ ನಂಬಿಕೆಯು ನಿಮ್ಮೆಲ್ಲರ ಮುಂದೆ ಇವನಿಗೆ ಇಂಥ ಪೂರ್ಣ ಸ್ವಸ್ಥತೆಯನ್ನು ಕೊಟ್ಟಿತು.
John 20:31
ಆದರೆ ಯೇಸುವೇ ದೇವಕುಮಾರ ನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲ್ಪಟ್ಟಿವೆ.
2 Peter 1:4
ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಆತನು ಅತ್ಯಂತ ಮಹತ್ವ ವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯ ಪಾಲಿಸಿದ್ದಾನೆ.