Job 36

1 ಎಲೀಹು ಮುಂದುವರಿದು ಹೇಳಿದ್ದೇನಂದರೆ--

2 ನನಗೋಸ್ಕರ ಸ್ವಲ್ಪ ತಾಳಿ ಕೋ; ಆಗ ನಿನಗೆ ಪ್ರಕಟಮಾಡುವೆನು; ಯಾಕಂದರೆ ದೇವರ ಪರವಾಗಿ ಇನ್ನೂ ಮಾತುಗಳುಂಟು.

3 ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು.

4 ನಿಜ ವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದವನು ನಿನ್ನ ಬಳಿಯಲ್ಲಿದ್ದಾನೆ.

5 ಇಗೋ, ದೇವರು ಬಲಿಷ್ಠನಾಗಿದ್ದು ಯಾರನ್ನೂ ತಿರಸ್ಕಾರ ಮಾಡುವದಿಲ್ಲ.

6 ಆತನು ಬಲದಲ್ಲಿಯೂ ಜ್ಞಾನದಲ್ಲಿಯೂ ಪರಾಕ್ರಮಿಯಾಗಿದ್ದಾನೆ. ದುಷ್ಟರ ಜೀವವನ್ನು ಆತನು ಕಾಪಾಡುವದಿಲ್ಲ. ಆದರೆ ಬಡವ ರಿಗೆ ಸರಿಯಾದದ್ದನ್ನು ಕೊಡುತ್ತಾನೆ.

7 ನೀತಿವಂತರಿಂದ ತನ್ನ ಕಣ್ಣುಗಳನ್ನು ತೊಲಗಿಸುವದಿಲ್ಲ. ಅವರು ಅರಸುಗಳ ಸಂಗಡ ಸಿಂಹಾಸನದಲ್ಲಿ ಇದ್ದಾರೆ. ಹೌದು, ಆತನು ಅವರನ್ನು, ಎಂದೆಂದಿಗೂ ಸ್ಥಿರಪಡಿಸುತ್ತಾನೆ. ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ.

8 ಆದರೆ ಸಂಕೋಲೆ ಗಳಿಂದ ಕಟ್ಟಲ್ಪಟ್ಟಿದ್ದಾರೆ. ಬಾಧೆಯ ಬಂಧಗಳಿಂದ ಹಿಡಿಯಲ್ಪಟ್ಟಿದ್ದಾರೆ.

9 ಅವರ ಕೃತ್ಯವನ್ನೂ ದ್ರೋಹ ಗಳನ್ನೂ ಅವುಗಳಲ್ಲಿ ಬಲಗೊಂಡರೆಂದು ಅವರಿಗೆ ತೋರಿಸುತ್ತಾನೆ.

10 ಆತನು ಅವರ ಕಿವಿಯನ್ನು ಶಿಕ್ಷೆಗಾಗಿ ತೆರೆದು ದುಷ್ಟತನ ಬಿಟ್ಟು ತಿರುಗಿರೆಂದು ಅವರಿಗೆ ಆಜ್ಞಾಪಿಸುತ್ತಾನೆ.

11 ಅವರು ವಿಧೇಯರಾಗಿ ಸೇವಿಸಿದರೆ ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿಯೂ ವರುಷ ಗಳನ್ನು ಸುಖದಲ್ಲಿಯೂ ಪೂರೈಸುವರು.

12 ಅವರು ವಿಧೇಯರಾಗದಿದ್ದರೆ ಕತ್ತಿಯಿಂದ ನಾಶವಾಗುವರು; ತಿಳಿಯದೆ ಸಾಯುವರು.

13 ಹೃದಯದಲ್ಲಿ ಕಪಟ ಇರು ವವರು ಕೋಪವನ್ನು ಕೂಡಿಸುತ್ತಾರೆ. ಆತನು ಅವರನ್ನು ಬಂಧಿಸಿದರೆ ಅವರು ಮೊರೆಯಿಡುವದಿಲ್ಲ.

14 ಯೌವ ನದಲ್ಲಿ ಅವರು ಸಾಯುತ್ತಾರೆ. ಅವರ ಜೀವವು ಅಪವಿ ತ್ರರ ಮಧ್ಯದಲ್ಲಿ ಇದೆ.

15 ಬಡವನನ್ನು ಆತನು ಕಷ್ಟದ ಸ್ಥಿತಿಯಿಂದ ತಪ್ಪಿಸುತ್ತಾನೆ. ಬಾಧೆಯಲ್ಲಿ ಅವರ ಕಿವಿ ಯನ್ನು ತೆರೆಯುತ್ತಾನೆ.

16 ನಿನ್ನನ್ನು ಆತನು ಹಾಗೆಯೇ ಇಕ್ಕಟ್ಟಿನೊಳಗಿಂದ ತೆಗೆದು ಇಕ್ಕಟ್ಟಿಲ್ಲದ ವಿಶಾಲವಾದ ಸ್ಥಳಕ್ಕೆ ಬರಮಾಡ ಬಹುದಾಗಿತ್ತು; ನಿನ್ನ ಮೇಜಿನ ಮೇಲೆ ಇಡತಕ್ಕವುಗಳು ಕೊಬ್ಬಿನಿಂದ ತುಂಬಿದವುಗಳಾಗಿರುವವು.

17 ಆದರೆ ನೀನು ದುಷ್ಟನ ನ್ಯಾಯವನ್ನು ಪೂರೈಸಿದಿ; ನ್ಯಾಯವೂ ತೀರ್ಪೂ ನಿನ್ನನ್ನು ಹಿಡಿಯುವವು.

18 ರೌದ್ರ ಉಂಟು, ಅವನು ನಿನ್ನನ್ನು ಒಂದೇ ಪೆಟ್ಟಿನಿಂದ ಒಯ್ಯದ ಹಾಗೆ ನೋಡು; ದೊಡ್ಡ ವಿಮೋಚನೆಯ ಕ್ರಯ ನಿನ್ನನ್ನು ಬಿಡಿಸದು.

19 ಅವನು ನಿನ್ನ ಐಶ್ವರ್ಯವನ್ನು ಲೆಕ್ಕಿಸು ವನೋ? ಬಂಗಾರವನ್ನೂ ಬಲದ ಎಲ್ಲಾ ಶಕ್ತಿಗಳನ್ನೂ ಲೆಕ್ಕಿಸನು.

20 ಜನಗಳು ತಮ್ಮ ಸ್ಥಳದಲ್ಲಿ ಒಡೆಯಲ್ಪಡುವ ರಾತ್ರಿಯನ್ನು ಬಯಸಬೇಡ.

21 ದುಷ್ಟತನಕ್ಕೆ ತಿರುಗದ ಹಾಗೆ ಎಚ್ಚರವಾಗಿರು. ಕಷ್ಟಕ್ಕಿಂತ ಇದನ್ನೇ ನೀನು ಆದುಕೊಂಡಿ.

22 ಇಗೋ, ದೇವರು ತನ್ನ ಶಕ್ತಿಯಲ್ಲಿ ಉನ್ನತನಾಗಿ ದ್ದಾನೆ; ಆತನ ಹಾಗೆ ಬೋಧಿಸುವವನು ಯಾರು?

23 ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?

24 ಮನುಷ್ಯನು ನೋಡುವ ಆತನ ಕೃತ್ಯಗಳನ್ನು ಘನ ಪಡಿಸುವದಕ್ಕೆ ನೆನಸಿಕೋ.

25 ಎಲ್ಲಾ ಮನುಷ್ಯರು ಅದನ್ನು ನೋಡಬಹುದು, ಮನುಷ್ಯರು ದೂರದಿಂದ ದೃಷ್ಟಿಸುತ್ತಾರೆ.

26 ಇಗೋ, ದೇವರು ದೊಡ್ಡವನಾಗಿದ್ದಾನೆ. ನಾವು ಆತನನ್ನು ಅರಿಯದವರಾಗಿದ್ದೇವೆ. ಆತನ ವರುಷಗಳ ಲೆಕ್ಕಕ್ಕೆ ಶೋಧನೆ ಇಲ್ಲ.

27 ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ.

28 ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.

29 ಮೋಡದ ವಿಸ್ತೀರ್ಣತೆಯನ್ನೂ ಆತನ ಗುಡಾರದ ಶಬ್ಧವನ್ನೂ ತಿಳುಕೊಳ್ಳುವವನಾರು?

30 ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ.

31 ಅವುಗಳಿಂದ ಜನಗಳಿಗೆ ಆತನು ನ್ಯಾಯ ತೀರಿಸುತ್ತಾನೆ; ಸಮೃದ್ಧಿಯಾಗಿ ಆತನು ಆಹಾರ ಕೊಡುತ್ತಾನೆ.

32 ಮೇಘಗಳಿಂದ ಬೆಳಕನ್ನು ಮುಚ್ಚು ತ್ತಾನೆ;

33 ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ.

1 Elihu also proceeded, and said,

2 Suffer me a little, and I will shew thee that I have yet to speak on God’s behalf.

3 I will fetch my knowledge from afar, and will ascribe righteousness to my Maker.

4 For truly my words shall not be false: he that is perfect in knowledge is with thee.

5 Behold, God is mighty, and despiseth not any: he is mighty in strength and wisdom.

6 He preserveth not the life of the wicked: but giveth right to the poor.

7 He withdraweth not his eyes from the righteous: but with kings are they on the throne; yea, he doth establish them for ever, and they are exalted.

8 And if they be bound in fetters, and be holden in cords of affliction;

9 Then he sheweth them their work, and their transgressions that they have exceeded.

10 He openeth also their ear to discipline, and commandeth that they return from iniquity.

11 If they obey and serve him, they shall spend their days in prosperity, and their years in pleasures.

12 But if they obey not, they shall perish by the sword, and they shall die without knowledge.

13 But the hypocrites in heart heap up wrath: they cry not when he bindeth them.

14 They die in youth, and their life is among the unclean.

15 He delivereth the poor in his affliction, and openeth their ears in oppression.

16 Even so would he have removed thee out of the strait into a broad place, where there is no straitness; and that which should be set on thy table should be full of fatness.

17 But thou hast fulfilled the judgment of the wicked: judgment and justice take hold on thee.

18 Because there is wrath, beware lest he take thee away with his stroke: then a great ransom cannot deliver thee.

19 Will he esteem thy riches? no, not gold, nor all the forces of strength.

20 Desire not the night, when people are cut off in their place.

21 Take heed, regard not iniquity: for this hast thou chosen rather than affliction.

22 Behold, God exalteth by his power: who teacheth like him?

23 Who hath enjoined him his way? or who can say, Thou hast wrought iniquity?

24 Remember that thou magnify his work, which men behold.

25 Every man may see it; man may behold it afar off.

26 Behold, God is great, and we know him not, neither can the number of his years be searched out.

27 For he maketh small the drops of water: they pour down rain according to the vapour thereof:

28 Which the clouds do drop and distil upon man abundantly.

29 Also can any understand the spreadings of the clouds, or the noise of his tabernacle?

30 Behold, he spreadeth his light upon it, and covereth the bottom of the sea.

31 For by them judgeth he the people; he giveth meat in abundance.

32 With clouds he covereth the light; and commandeth it not to shine by the cloud that cometh betwixt.

33 The noise thereof sheweth concerning it, the cattle also concerning the vapour.

Job 20 in Tamil and English

1 ನಾಮಾಥ್ಯನಾದ ಚೋಫರನು ಉತ್ತರ ಕೊಟ್ಟು ಹೇಳಿದ್ದೇನಂದರೆ--
Then answered Zophar the Naamathite, and said,

2 ಆದದರಿಂದ ನನ್ನಲ್ಲಿರುವ ಆತುರಕ್ಕೋಸ್ಕರವೇ ನನ್ನ ಆಲೋಚನೆಗಳು ನನಗೆ ಉತ್ತರ ಕೊಡುತ್ತವೆ.
Therefore do my thoughts cause me to answer, and for this I make haste.

3 ನನ್ನನ್ನು ನಿಂದಿಸುವ ಶಿಕ್ಷೆಯನ್ನು ಕೇಳಿದ್ದೇನೆ; ಆದರೆ ನನ್ನ ಆತ್ಮವು ನನ್ನ ಗ್ರಹಿಕೆಯ ಪ್ರಕಾರ ನನಗೆ ಉತ್ತರ ಕೊಡುವದು.
I have heard the check of my reproach, and the spirit of my understanding causeth me to answer.

4 ಇದನ್ನು ಆದಿಯಿಂದಲೂ ಅಂದರೆ ಮನುಷ್ಯನನ್ನು ಭೂಮಿಯ ಮೇಲೆ ಇಟ್ಟಂದಿನಿಂದಲೂ ನೀನು ತಿಳಿಯಲಿಲ್ಲವೋ?
Knowest thou not this of old, since man was placed upon earth,

5 ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
That the triumphing of the wicked is short, and the joy of the hypocrite but for a moment?

6 ಅವನ ಮಹತ್ತು ಆಕಾಶಕ್ಕೆ ಏರಿದರೂ ಅವನ ತಲೆ ಮೇಘಕ್ಕೆ ಮುಟ್ಟಿದರೂ
Though his excellency mount up to the heavens, and his head reach unto the clouds;

7 ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು.
Yet he shall perish for ever like his own dung: they which have seen him shall say, Where is he?

8 ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು.
He shall fly away as a dream, and shall not be found: yea, he shall be chased away as a vision of the night.

9 ಅವನನ್ನು ನೋಡಿದ ಕಣ್ಣು ಇನ್ನು ನೋಡದು; ಅವನ ಸ್ಥಳವನ್ನು ಇನ್ನು ಅವನನ್ನು ಕಾಣದು.
The eye also which saw him shall see him no more; neither shall his place any more behold him.

10 ಅವನ ಮಕ್ಕಳು ಬಡವ ರನ್ನು ಮೆಚ್ಚಿಸುತ್ತಾರೆ; ಅವನ ಕೈಗಳು ಅವರ ವಸ್ತುಗ ಳನ್ನು ತಿರುಗಿ ಕೊಡುತ್ತವೆ.
His children shall seek to please the poor, and his hands shall restore their goods.

11 ಅವನ ಎಲುಬುಗಳು ಯೌವನ ಪಾಪದಿಂದ ತುಂಬಿದ್ದರೂ ಅದು ಅವನ ಸಂಗಡ ಧೂಳಿನಲ್ಲಿ ಮಲಗುವದು.
His bones are full of the sin of his youth, which shall lie down with him in the dust.

12 ಅವನ ಬಾಯಿಗೆ ಕೆಟ್ಟತನವು ಸಿಹಿಯಾಗಿದ್ದಾಗ್ಯೂ ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟರೂ
Though wickedness be sweet in his mouth, though he hide it under his tongue;

13 ಅದನ್ನು ಕನಿಕರಿಸಿ ಅದನ್ನು ಬಿಡದೆ ತನ್ನ ಬಾಯಿಯೊಳಗೆ ಇಟ್ಟುಕೊಂಡರೂ
Though he spare it, and forsake it not; but keep it still within his mouth:

14 ಅವನ ಆಹಾರವು ಅವನ ಕರು ಳುಗಳಲ್ಲಿ ಮಾರ್ಪಟ್ಟು ಅವನ ಉಡಿಲಲ್ಲಿ ಸರ್ಪದ ವಿಷವಾಗುವದು.
Yet his meat in his bowels is turned, it is the gall of asps within him.

15 ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡ ಮಾಡುವನು.
He hath swallowed down riches, and he shall vomit them up again: God shall cast them out of his belly.

16 ಸರ್ಪಗಳ ವಿಷ ವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲು ವದು.
He shall suck the poison of asps: the viper’s tongue shall slay him.

17 ಅವನು ಜೇನೂ ಬೆಣ್ಣೆ ಹರಿಯುವ ಹಳ್ಳ ಗಳನ್ನೂ ನದಿಯನ್ನೂ ಕಾಲಿವೆಗಳನ್ನೂ ನೋಡನು.
He shall not see the rivers, the floods, the brooks of honey and butter.

18 ದುಡಿದದ್ದನ್ನ್ನು ನುಂಗದೆ ತಿರುಗಿ ಕೊಡುವನು; ಆಸ್ತಿಯ ಮೇರೆಗೆ ಬದಲು ಕೊಡುವನು; ಅವನು ಉಲ್ಲಾಸ ಹೊಂದುವದಿಲ್ಲ.
That which he laboured for shall he restore, and shall not swallow it down: according to his substance shall the restitution be, and he shall not rejoice therein.

19 ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು.
Because he hath oppressed and hath forsaken the poor; because he hath violently taken away an house which he builded not;

20 ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ.
Surely he shall not feel quietness in his belly, he shall not save of that which he desired.

21 ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ.
There shall none of his meat be left; therefore shall no man look for his goods.

22 ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು.
In the fulness of his sufficiency he shall be in straits: every hand of the wicked shall come upon him.

23 ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು.
When he is about to fill his belly, God shall cast the fury of his wrath upon him, and shall rain it upon him while he is eating.

24 ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು.
He shall flee from the iron weapon, and the bow of steel shall strike him through.

25 ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ.
It is drawn, and cometh out of the body; yea, the glittering sword cometh out of his gall: terrors are upon him.

26 ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು.
All darkness shall be hid in his secret places: a fire not blown shall consume him; it shall go ill with him that is left in his tabernacle.

27 ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು.
The heaven shall reveal his iniquity; and the earth shall rise up against him.

28 ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.
The increase of his house shall depart, and his goods shall flow away in the day of his wrath.

29 ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
This is the portion of a wicked man from God, and the heritage appointed unto him by God.