Job 33 - BBE (Kannada)
1 And now, O Job, give ear to my words, and take note of all I say.ಆದದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು; ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
2 See, now my mouth is open, my tongue gives out words.ಇಗೋ, ಈಗ ನನ್ನ ಬಾಯನ್ನು ತೆರೆದಿದ್ದೇನೆ. ನನ್ನ ನಾಲಿಗೆ ನನ್ನ ಬಾಯಲ್ಲಿ ಮಾತನಾಡುತ್ತದೆ.
3 My heart is overflowing with knowledge, my lips say what is true.ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
4 The spirit of God has made me, and the breath of the Ruler of all gives me life.ದೇವರ ಆತ್ಮನು ನನ್ನನ್ನು ಉಂಟುಮಾಡಿದನು; ಸರ್ವಶಕ್ತನ ಶ್ವಾಸವು ನನಗೆ ಜೀವವನ್ನು ಕೊಟ್ಟಿತು.
5 If you are able, give me an answer; put your cause in order, and come forward.ನೀನು ನನಗೆ ಉತ್ತರ ಕೊಡುವದಕ್ಕೆ ಸಾಧ್ಯವಾದರೆ ನಿನ್ನ ಮಾತುಗಳನ್ನು ಸಿದ್ಧಮಾಡಿಕೊಂಡು ನನ್ನ ಮುಂದೆ ನಿಂತುಕೋ.
6 See, I am the same as you are in the eyes of God; I was cut off from the same bit of wet earth.ಇಗೋ, ನಾನು ದೇವರ ಮುಂದೆ ನಿನ್ನ ಹಾಗೆಯೇ ಇದ್ದೇನೆ; ಮಣ್ಣಿನಿಂದ ನಾನು ಸಹ ರೂಪಿಸಲ್ಪಟ್ಟಿದ್ದೇನೆ.
7 Fear of me will not overcome you, and my hand will not be hard on you.ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
8 But you said in my hearing, and your voice came to my ears:ನಿಶ್ಚಯವಾಗಿ ನೀನು ನನ್ನ ಕಿವಿಗಳಲ್ಲಿ ಹೇಳಿದ್ದೀ ಮತ್ತು ನಾನು ನಿನ್ನ ಮಾತುಗಳ ಶಬ್ದವನ್ನು ಕೇಳಿದ್ದೇನೆ.
9 I am clean, without sin; I am washed, and there is no evil in me:ಏನಂದರೆ--ನಾನು ದ್ರೋಹವಿಲ್ಲದವನಾಗಿ ಶುದ್ಧ ನಾಗಿದ್ದೇನೆ; ನಾನು ಯಥಾರ್ಥನಾಗಿದ್ದೇನೆ; ಇಲ್ಲವೆ ನನ್ನಲ್ಲಿ ಅಪರಾಧವಿಲ್ಲ.
10 See, he is looking for something against me; in his eyes I am as one of his haters;ಇಗೋ, ಆತನು ನನಗೆ ವಿರೋಧವಾಗಿ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ; ಆತನು ತನಗೆ ಶತ್ರುವೆಂದು ನನ್ನನ್ನು ಎಣಿಸುತ್ತಾನೆ.
11 He puts chains on my feet; he is watching all my ways.ಆತನು ನನ್ನ ಕಾಲುಗಳನ್ನು ಕೊಳಕ್ಕೆ ಸೇರಿಸಿದ್ದಾನೆ; ನನ್ನ ಹಾದಿಗಳನ್ನೆಲ್ಲಾ ಗುರುತಿಸುತ್ತಾನೆ.
12 Truly, in saying this you are wrong; for God is greater than man.ಇಗೋ, ಈ ವಿಷಯವಾಗಿ ನೀನು ನೀತಿವಂತನಲ್ಲ; ನಾನು ನಿನಗೆ ಉತ್ತರ ಕೊಡುತ್ತೇನೆ; ಏನಂದರೆ ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನೆ.
13 Why do you put forward your cause against him, saying, He gives no answer to any of my words?ನೀನು ಆತನ ಸಂಗಡ ಯಾಕೆ ವಾದಿಸಿದಿ? ಆತನು ನಿನ್ನ ಯಾವ ವಿಷಯದಲ್ಲಿಯೂ ಉತ್ತರ ಕೊಡುವದಿಲ್ಲ.
14 For God gives his word in one way, even in two, and man is not conscious of it:ಒಂದು ಸಾರಿ ಹೌದು, ಎರಡು ಸಾರಿ ದೇವರು ಮಾತನಾಡುತ್ತಾನೆ; ಆದರೂ ಮನುಷ್ಯನು ಅದನ್ನು ಗ್ರಹಿಸಿಕೊಳ್ಳುವದಿಲ್ಲ.
15 In a dream, in a vision of the night, when deep sleep comes on men, while they take their rest on their beds;ಸ್ವಪ್ನದಲ್ಲಿ ರಾತ್ರಿಯ ದರ್ಶನ ದಲ್ಲಿ; ಗಾಢ ನಿದ್ರೆಯು ಮನುಷ್ಯರ ಮೇಲೆ ಬೀಳುವಾಗ ಮಂಚದ ಮೇಲಿನ ತೂಕಡಿಕೆಗಳಲ್ಲಿ
16 Then he makes his secrets clear to men, so that they are full of fear at what they see;ಆತನು ಮನುಷ್ಯರ ಕಿವಿಗಳನ್ನು ತೆರೆದು ಶಿಕ್ಷಣದ ಮಾತು ಗಳನ್ನು ಅವರಿಗೆ ಮುದ್ರೆಹಾಕುತ್ತಾನೆ.
17 In order that man may be turned from his evil works, and that pride may be taken away from him;ಮನುಷ್ಯ ನನ್ನು ಅವನ ಉದ್ದೇಶದಿಂದ ತೊಲಗಿಸುವದಕ್ಕೂ ಮನುಷ್ಯನ ಗರ್ವವನ್ನು ಅಡಗಿಸುವದಕ್ಕೂ ಹಾಗೆ ಮಾಡುತ್ತಾನೆ.
18 To keep back his soul from the underworld, and his life from destruction.ಅವನ ಪ್ರಾಣವನ್ನು ಕುಣಿಯಿಂದ ಲೂ ಅವನ ಜೀವವನ್ನು ಕತ್ತಿಯಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾನೆ.
19 Pain is sent on him as a punishment, while he is on his bed; there is no end to the trouble in his bones;ಅವನು ತನ್ನ ಹಾಸಿಗೆಯಲ್ಲಿ ನೋವಿನಿಂದ ಶಿಕ್ಷಿಸ ಲ್ಪಡುತ್ತಾನೆ; ಅವನ ಎಲುಬುಗಳಿಗೆಲ್ಲಾ ಕಠಿಣವಾದ ನೋವು ಉಂಟು.
20 He has no desire for food, and his soul is turned away from delicate meat;ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ.
21 His flesh is so wasted away, that it may not be seen, and his bones. ...ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ.
22 And his soul comes near to the underworld, and his life to the angels of death.ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.
23 If now there may be an angel sent to him, one of the thousands which there are to be between him and God, and to make clear to man what is right for him;ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ,
24 And if he has mercy on him, and says, Let him not go down to the underworld, I have given the price for his life:ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು.
25 Then his flesh becomes young again, and he comes back to the days of his early strength;ಆಗ ಅವನ ಶರೀರವು ಮಗುವಿನ ಶರೀರಕ್ಕಿಂತ ಮೃದುವಾಗಿರು ವದು; ಅವನು ತನ್ನ ಯೌವನ ದಿವಸಗಳಿಗೆ ತಿರುಗಿ ಕೊಳ್ಳುವನು.
26 He makes his prayer to God, and he has mercy on him; he sees God's face with cries of joy; he gives news of his righteousness to men;ಅವನು ದೇವರಿಗೆ ಬಿನ್ನಹ ಮಾಡು ವನು; ಆತನು ಅವನಿಗೆ ಕೃಪಾಳುವಾಗಿರುವನು. ಅವನು ಆತನ ಮುಖವನ್ನು ಸಂತೋಷದಿಂದ ನೋಡುವನು; ಆತನು ಮನುಷ್ಯನಿಗೆ ತನ್ನ ನೀತಿಯನ್ನು ಅನುಗ್ರಹಿ ಸುವನು.
27 He makes a song, saying, I did wrong, turning from the straight way, but he did not give me the reward of my sin.ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;
28 He kept my soul from the underworld, and my life sees the light in full measure.ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು.
29 Truly, God does all these things to man, twice and three times,ಇಗೋ, ಇವೆಲ್ಲವುಗಳನ್ನು ಅನೇಕ ಸಾರಿ ಮನು ಷ್ಯನಿಗೆ ಮಾಡುತ್ತಾನೆ.
30 Keeping back his soul from the underworld, so that he may see the light of life.ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.
31 Take note O Job, give ear to me; keep quiet, while I say what is in my mind.ಓ ಯೋಬನೇ, ಚೆನ್ನಾಗಿ ಗುರುತಿಸು; ನನ್ನ ಮಾತಿಗೆ ಕಿವಿಗೊಡು. ಮೌನವಾಗಿರು, ನಾನು ಮಾತನಾಡು ತ್ತೇನೆ.
32 If you have anything to say, give me an answer; for it is my desire that you may be judged free from sin.ನಿನಗೆ ಹೇಳುವದಕ್ಕೆ ಏನಾದರೂ ಇದ್ದರೆ ನನಗೆ ಉತ್ತರ ಕೊಡು; ಮಾತನಾಡು, ನಿನ್ನನ್ನು ನೀತಿವಂತನೆಂದು ನಿರ್ಣಯಿಸುವದಕ್ಕೆ ಇಚ್ಚಿಸುತ್ತೇನೆ.
33 If not, give attention to me, and keep quiet, and I will give you wisdom.ಇಲ್ಲದಿದ್ದರೆ ನಾನು ಹೇಳುವದನ್ನು ಕೇಳು. ಮೌನ ವಾಗಿರು, ನಾನು ನಿನಗೆ ಜ್ಞಾನವನ್ನು ಕಲಿಸುತ್ತೇನೆ.
Kannada Bible