Bible

Job 22 - WEB (Kannada)

1 Then Eliphaz the Temanite answered,ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--

2 "Can a man be profitable to God? Surely he who is wise is profitable to himself.ಮನುಷ್ಯನು ದೇವರಿಗೆ ಪ್ರಯೋಜನಕರವಾಗಿರುವನೋ? ಬುದ್ಧಿ ವಂತನು ಪ್ರಯೋಜನಕರವಾಗಿರುವದು ತನಗೆ ಸರಿಯೋ?

3 Is it any pleasure to the Almighty, that you are righteous? Or does it benefit him, that you make your ways perfect?ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?

4 Is it for your piety that he reproves you, That he enters with you into judgment?ನಿನ್ನ ಭಯದ ನಿಮಿತ್ತ ನಿನ್ನನ್ನು ಗದರಿಸಿ ನಿನ್ನ ಸಂಗಡ ನ್ಯಾಯಕ್ಕೆ ಬರುವನೋ?

5 Isn't your wickedness great? Neither is there any end to your iniquities.ನಿನ್ನ ಕೆಟ್ಟ ತನವು ಬಹಳವಲ್ಲವೋ? ನಿನ್ನ ಅಕ್ರಮಗಳಿಗೆ ಅಂತ್ಯ ವಿಲ್ಲವಷ್ಟೇ.

6 For you have taken pledges from your brother for nothing, And stripped the naked of their clothing.ಸುಮ್ಮನೆ ನಿನ್ನ ಸಹೋದರನಿಂದ ಈಡು ತೆಗೆದು ಕೊಂಡಿ; ಬೆತ್ತಲೆಯಾಗಿರುವವರ ವಸ್ತ್ರಗಳನ್ನು ನೀನು ಸುಲುಕೊಂಡಿ.

7 You haven't given water to the weary to drink, And you have withheld bread from the hungry.ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ.

8 But as for the mighty man, he had the earth. The honorable man, he lived in it.ಬಲಿಷ್ಠನಿಗಾದರೋ ದೇಶವು ಅವನದೇ; ಗೌರವದ ಮನುಷ್ಯನು ಅದರಲ್ಲಿ ವಾಸಿಸಿದನು.

9 You have sent widows away empty, And the arms of the fatherless have been broken.ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.

10 Therefore snares are round about you. Sudden fear troubles you,ಆದದರಿಂದ ನಿನ್ನ ಸುತ್ತಲೂ ಉರುಲುಗಳು ಉಂಟು; ಭಯವು ನಿನ್ನನ್ನು ಫಕ್ಕನೆ ತಲ್ಲಣಪಡಿಸುತ್ತದೆ.

11 Or darkness, so that you can not see, And floods of waters cover you.ಇಲ್ಲವೆ ನೀನು ನೋಡದ ಹಾಗೆ ಕತ್ತಲುಂಟು; ಜಲ ಪ್ರವಾಹವು ನಿನ್ನನ್ನು ಮುಚ್ಚುತ್ತದೆ.

12 "Isn't God in the heights of heaven? See the height of the stars, how high they are!ದೇವರು ಆಕಾಶದ ಎತ್ತರದಲ್ಲಿದ್ದಾನಲ್ಲವೋ? ನಕ್ಷತ್ರಗಳ ಎತ್ತರ ನೋಡು, ಅವು ಎಷ್ಟು ಉನ್ನತ!

13 You say, 'What does God know? Can he judge through the thick darkness?ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ?

14 Thick clouds are a covering to him, so that he doesn't see. He walks on the vault of the sky.'ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.

15 Will you keep the old way Which wicked men have trodden,ದುಷ್ಟ ಜನರು ನಡೆದ ಪೂರ್ವಕಾಲದ ದಾರಿ ಯನ್ನು ನೋಡಿಕೊಂಡಿಯೋ?

16 Who were snatched away before their time, Whose foundation was poured out as a stream,ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು.

17 Who said to God, 'Depart from us;' And, 'What can the Almighty do for us?'ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ.

18 Yet he filled their houses with good things, But the counsel of the wicked is far from me.ಆದರೆ ಆತನು ಅವರ ಮನೆಗಳನ್ನು ಒಳ್ಳೇದರಿಂದ ತುಂಬಿದ್ದಾನೆ; ಆದರೂ ದುಷ್ಟರ ಆಲೋಚನೆಯು ನನಗೆ ದೂರವಾಗಿದೆ.

19 The righteous see it, and are glad; The innocent ridicule them,ನೀತಿವಂತರು ನೋಡಿ ಸಂತೋಷಪಡುವರು. ನಿರಪರಾಧಿಯು ಅವರಿಗೆ ಗೇಲಿ ಮಾಡುವನು.

20 Saying, 'Surely those who rose up against us are cut off, The fire has consumed the remnant of them.'ನಿಶ್ಚಯವಾಗಿ ನಮ್ಮ ಆಸ್ತಿಯು ತೆಗೆ ಯಲ್ಪಡಲಿಲ್ಲ; ಅವರಲ್ಲಿ ಉಳಿದವರನ್ನು ಬೆಂಕಿ ದಹಿಸಿಬಿಡುತ್ತದೆ.

21 "Acquaint yourself with him, now, and be at peace. Thereby good shall come to you.ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು.

22 Please receive instruction from his mouth, And lay up his words in your heart.ಆತನ ಬಾಯಿಂದ ನ್ಯಾಯಪ್ರಮಾಣವನ್ನು ತಕ್ಕೋ; ಆತನ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.

23 If you return to the Almighty, you shall be built up, If you put away unrighteousness far from your tents.ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.

24 Lay your treasure in the dust, The gold of Ophir among the stones of the brooks.ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್‌ ಬಂಗಾರವನ್ನು ತೆಗೆದು ಹಾಕುವಿ.

25 The Almighty will be your treasure, Precious silver to you.ಆಗ ಸರ್ವಶಕ್ತನು ನಿನಗೆ ರಕ್ಷಣೆಯೂ ಸಮೃದ್ಧಿಯಾದ ಬೆಳ್ಳಿಯೂ ಆಗಿರುವನು.

26 For then shall you delight yourself in the Almighty, And shall lift up your face to God.ಆಗ ಸರ್ವಶಕ್ತನಲ್ಲಿ ನೀನು ಆನಂದಗೊಂಡು ನಿನ್ನ ಮುಖ ವನ್ನು ದೇವರ ಕಡೆಗೆ ಎತ್ತುವಿ.

27 You shall make your prayer to him, and he will hear you. You shall pay your vows.ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.

28 You shall also decree a thing, and it shall be established to you. Light shall shine on your ways.ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.

29 When they cast down, you shall say, 'be lifted up.' He will save the humble person.ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.

30 He will even deliver him who is not innocent; Yes, he shall be delivered through the cleanness of your hands."ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.

Kannada Bible