Bible

Job 22 - BBE (Kannada)

1 Then Eliphaz the Temanite made answer and said,ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--

2 Is it possible for a man to be of profit to God? No, for a man's wisdom is only of profit to himself.ಮನುಷ್ಯನು ದೇವರಿಗೆ ಪ್ರಯೋಜನಕರವಾಗಿರುವನೋ? ಬುದ್ಧಿ ವಂತನು ಪ್ರಯೋಜನಕರವಾಗಿರುವದು ತನಗೆ ಸರಿಯೋ?

3 Is it of any interest to the Ruler of all that you are upright? or is it of use to him that your ways are without sin?ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?

4 Is it because you give him honour that he is sending punishment on you and is judging you?ನಿನ್ನ ಭಯದ ನಿಮಿತ್ತ ನಿನ್ನನ್ನು ಗದರಿಸಿ ನಿನ್ನ ಸಂಗಡ ನ್ಯಾಯಕ್ಕೆ ಬರುವನೋ?

5 Is not your evil-doing great? and there is no end to your sins.ನಿನ್ನ ಕೆಟ್ಟ ತನವು ಬಹಳವಲ್ಲವೋ? ನಿನ್ನ ಅಕ್ರಮಗಳಿಗೆ ಅಂತ್ಯ ವಿಲ್ಲವಷ್ಟೇ.

6 For you have taken your brother's goods when he was not in your debt, and have taken away the clothing of those who have need of it.ಸುಮ್ಮನೆ ನಿನ್ನ ಸಹೋದರನಿಂದ ಈಡು ತೆಗೆದು ಕೊಂಡಿ; ಬೆತ್ತಲೆಯಾಗಿರುವವರ ವಸ್ತ್ರಗಳನ್ನು ನೀನು ಸುಲುಕೊಂಡಿ.

7 You do not give water to the tired traveller, and from him who has no food you keep back bread.ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ.

8 For it was the man with power who had the land, and the man with an honoured name who was living in it.ಬಲಿಷ್ಠನಿಗಾದರೋ ದೇಶವು ಅವನದೇ; ಗೌರವದ ಮನುಷ್ಯನು ಅದರಲ್ಲಿ ವಾಸಿಸಿದನು.

9 You have sent widows away without hearing their cause, and you have taken away the support of the child who has no father.ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.

10 For this cause nets are round your feet, and you are overcome with sudden fear.ಆದದರಿಂದ ನಿನ್ನ ಸುತ್ತಲೂ ಉರುಲುಗಳು ಉಂಟು; ಭಯವು ನಿನ್ನನ್ನು ಫಕ್ಕನೆ ತಲ್ಲಣಪಡಿಸುತ್ತದೆ.

11 Your light is made dark so that you are unable to see, and you are covered by a mass of waters.ಇಲ್ಲವೆ ನೀನು ನೋಡದ ಹಾಗೆ ಕತ್ತಲುಂಟು; ಜಲ ಪ್ರವಾಹವು ನಿನ್ನನ್ನು ಮುಚ್ಚುತ್ತದೆ.

12 Is not God as high as heaven? and see the stars, how high they are!ದೇವರು ಆಕಾಶದ ಎತ್ತರದಲ್ಲಿದ್ದಾನಲ್ಲವೋ? ನಕ್ಷತ್ರಗಳ ಎತ್ತರ ನೋಡು, ಅವು ಎಷ್ಟು ಉನ್ನತ!

13 And you say, What knowledge has God? is he able to give decisions through the deep dark?ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ?

14 Thick clouds are covering him, so that he is unable to see; and he is walking on the arch of heaven.ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.

15 Will you keep the old way by which evil men went?ದುಷ್ಟ ಜನರು ನಡೆದ ಪೂರ್ವಕಾಲದ ದಾರಿ ಯನ್ನು ನೋಡಿಕೊಂಡಿಯೋ?

16 Who were violently taken away before their time, who were overcome by the rush of waters:ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು.

17 Who said to God, Go away from us; and, What is the Ruler of all able to do to us?ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ.

18 Though he made their houses full of good things: but the purpose of the evil-doers is far from me!ಆದರೆ ಆತನು ಅವರ ಮನೆಗಳನ್ನು ಒಳ್ಳೇದರಿಂದ ತುಂಬಿದ್ದಾನೆ; ಆದರೂ ದುಷ್ಟರ ಆಲೋಚನೆಯು ನನಗೆ ದೂರವಾಗಿದೆ.

19 The upright saw it and were glad: and those who had done no wrong made sport of them,ನೀತಿವಂತರು ನೋಡಿ ಸಂತೋಷಪಡುವರು. ನಿರಪರಾಧಿಯು ಅವರಿಗೆ ಗೇಲಿ ಮಾಡುವನು.

20 Saying, Truly, their substance is cut off, and their wealth is food for the fire.ನಿಶ್ಚಯವಾಗಿ ನಮ್ಮ ಆಸ್ತಿಯು ತೆಗೆ ಯಲ್ಪಡಲಿಲ್ಲ; ಅವರಲ್ಲಿ ಉಳಿದವರನ್ನು ಬೆಂಕಿ ದಹಿಸಿಬಿಡುತ್ತದೆ.

21 Put yourself now in a right relation with him and be at peace: so will you do well in your undertakings.ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು.

22 Be pleased to take teaching from his mouth, and let his words be stored up in your heart.ಆತನ ಬಾಯಿಂದ ನ್ಯಾಯಪ್ರಮಾಣವನ್ನು ತಕ್ಕೋ; ಆತನ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.

23 If you come back to the Ruler of all, making yourself low before him; if you put evil far away from your tents;ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.

24 And put your gold in the dust, even your gold of Ophir among the rocks of the valleys;ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್‌ ಬಂಗಾರವನ್ನು ತೆಗೆದು ಹಾಕುವಿ.

25 Then the Ruler of all will be your gold, and his teaching will be your silver;ಆಗ ಸರ್ವಶಕ್ತನು ನಿನಗೆ ರಕ್ಷಣೆಯೂ ಸಮೃದ್ಧಿಯಾದ ಬೆಳ್ಳಿಯೂ ಆಗಿರುವನು.

26 For then you will have delight in the Ruler of all, and your face will be lifted up to God.ಆಗ ಸರ್ವಶಕ್ತನಲ್ಲಿ ನೀನು ಆನಂದಗೊಂಡು ನಿನ್ನ ಮುಖ ವನ್ನು ದೇವರ ಕಡೆಗೆ ಎತ್ತುವಿ.

27 You will make your prayer to him, and be answered; and you will give effect to your oaths.ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.

28 Your purposes will come about, and light will be shining on your ways.ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.

29 For God makes low those whose hearts are lifted up, but he is a saviour to the poor in spirit.ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.

30 He makes safe the man who is free from sin, and if your hands are clean, salvation will be yours.ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.

Kannada Bible