Job 18:4
ಕೋಪದಿಂದ ತನ್ನನ್ನು ತಾನೇ ಹರಿಯುವವನೇ, ನಿನ್ನ ನಿಮಿತ್ತ ಭೂಮಿ ಬಿಡಲ್ಪಡಬೇಕೋ? ಬಂಡೆ ತನ್ನ ಸ್ಥಳದಿಂದ ತೊಲಗ ಬೇಕೋ?
He teareth | טֹֽרֵ֥ף | ṭōrēp | toh-RAFE |
himself | נַפְשׁ֗וֹ | napšô | nahf-SHOH |
anger: his in | בְּאַ֫פּ֥וֹ | bĕʾappô | beh-AH-poh |
shall the earth | הַֽ֭לְמַעַנְךָ | halmaʿankā | HAHL-ma-an-ha |
be forsaken | תֵּעָ֣זַב | tēʿāzab | tay-AH-zahv |
for | אָ֑רֶץ | ʾāreṣ | AH-rets |
thee? and shall the rock | וְיֶעְתַּק | wĕyeʿtaq | veh-yeh-TAHK |
removed be | צ֝֗וּר | ṣûr | tsoor |
out of his place? | מִמְּקֹמֽוֹ׃ | mimmĕqōmô | mee-meh-koh-MOH |
Cross Reference
Job 16:9
ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
Job 14:18
ಆದರೂ ಬೆಟ್ಟವು ಬಿದ್ದು ಹಾಳಾಗುವದು; ಬಂಡೆಯು ತನ್ನ ಸ್ಥಳದಿಂದ ಜರಗುವದು.
Job 13:14
ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು?
Luke 9:39
ಇಗೋ, ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಅದು ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವದಲ್ಲದೆ ಜಜ್ಜುವದು. ಅದು ಅವನನ್ನು ಬಿಟ್ಟುಹೋಗುವದು ಕಷ್ಟ.
Mark 9:18
ಅದು ಅವನನ್ನು ತೆಗೆದುಕೊಂಡು ಹೋದಲ್ಲೆಲ್ಲಾ ಅವನನ್ನು ಒದ್ದಾಡಿಸುತ್ತದೆ; ಮತ್ತು ಅವನು ನೊರೆ ಸುರಿಸುತ್ತಾ ತನ್ನ ಹಲ್ಲು ಕಡಿಯುತ್ತಾ ಕುಂದಿ ಹೋಗುತ್ತಾನೆ; ಅದನ್ನು (ದೆವ್ವವನ್ನು) ಬಿಡಿಸಬೇಕೆಂದು ನಾನು ನಿನ ಶಿಷ್ಯರಿಗೆ ಹೇಳಿದೆನು; ಆದರೆ ಅವರಿಂದ ಆಗಲಿಲ್ಲ ಎಂದು ಹೇಳಿದನು.
Matthew 24:35
ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
Jonah 4:9
ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
Ezekiel 9:9
ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
Isaiah 54:10
ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
Job 40:8
ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?
Job 5:2
ಮೂಢನನ್ನು ಕೋಪವು ಕೊಲ್ಲು ವದು; ಬುದ್ಧಿಹೀನನನ್ನು ರೋಷವು ಸಾಯುವಂತೆ ಮಾಡುವದು.