Bible

Job 17 - BBE (Kannada)

1 My spirit is broken, my days are ended, the last resting-place is ready for me.ನನ್ನ ಉಸಿರು ಕಟ್ಟಿದೆ; ನನ್ನ ದಿವಸಗಳು ಮುಗಿದಿವೆ; ಸಮಾಧಿಗಳು ನನಗೆ ಸಿದ್ಧ ವಾಗಿವೆ.

2 Truly, those who make sport of me are round about me, and my eyes become dark because of their bitter laughing.ಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರ ಲ್ಲವೋ? ಅವರ ಕೋಪದಲ್ಲಿ ನನ್ನ ಕಣ್ಣು ಮುಂದು ವರಿಯುತ್ತದಲ್ಲಾ.

3 Be pleased, now, to be responsible for me to yourself; for there is no other who will put his hand in mine.ದಯಮಾಡಿ ನನ್ನ ಸಂಗಡ ಇದ್ದು ನಿನ್ನೊಂದಿಗೆ ನನಗೆ ಹೊಣೆಯಾಗು; ನನ್ನೊಂದಿಗೆ ಕೈ ತಟ್ಟುವವರು ಯಾರು?

4 You have kept their hearts from wisdom: for this cause you will not give them honour.ಅವರ ಹೃದಯವನ್ನು ಬುದ್ಧಿಗೆ ಅಡಗಿಸಿದಿ; ಆದದರಿಂದ ನೀನು ಅವರನ್ನು ಉನ್ನತಕ್ಕೇರಿಸುವದಿಲ್ಲ.

5 As for him who is false to his friend for a reward, light will be cut off from the eyes of his children.ತನ್ನ ಸ್ನೇಹಿತರನ್ನು ಹೊಗಳಿ ಮಾತನಾಡುವವನ ಮಕ್ಕಳ ಕಣ್ಣುಗಳು ಕ್ಷೀಣವಾಗುವವು.

6 He has made me a word of shame to the peoples; I have become a mark for their sport.ನನ್ನನ್ನು ಜನರಿಗೆ ಗಾದೆಯಾಗ ಮಾಡಿದನು; ಅವರ ಮುಂದೆ ನಾನು ಬಾರಿಸುವ ವಾದ್ಯವಾದೆನು.

7 My eyes have become dark because of my pain, and all my body is wasted to a shade.ನನ್ನ ಕಣ್ಣು ದುಃಖದಿಂದ ಮೊಬ್ಬಾಯಿತು; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಅವೆ.

8 The upright are surprised at this, and he who has done no wrong is troubled because of the evil-doers.ಇದಕ್ಕೋಸ್ಕರ ಯಥಾರ್ಥರು ಆಶ್ಚರ್ಯ ಪಡುವರು: ನಿರ್ಮಲನು ಕಪಟಿಗೆ ವಿರೋಧವಾಗಿ ತನ್ನನ್ನು ಉದ್ರೇಕಿಸಿಕೊಳ್ಳುವನು.

9 Still the upright keeps on his way, and he who has clean hands gets new strength.ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.

10 But come back, now, all of you, come; and I will not see a wise man among you.ಆದಾಗ್ಯೂ ನೀವೆಲ್ಲರೂ ತಿರುಗಿಕೊಂಡು ಬನ್ನಿರಿ; ನಿಮ್ಮಲ್ಲಿ ನಾನು ಜ್ಞಾನಿಯನ್ನು ಕಂಡುಕೊಳ್ಳಲಿಲ್ಲ.

11 My days are past, my purposes are broken off, even the desires of my heart.ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.

12 They are changing night into day; they say, The light is near the dark.ಅವರು ರಾತ್ರಿಯನ್ನು ಹಗಲನ್ನಾಗಿ ಮಾಡು ತ್ತಾರೆ; ಬೆಳಕು ಕತ್ತಲೆಯ ನಿಮಿತ್ತ ಚಿಕ್ಕದಾಗಿದೆ.

13 If I am waiting for the underworld as my house, if I have made my bed in the dark;ನಾನು ನಿರೀಕ್ಷಿಸಿದರೆ ಸಮಾಧಿಯೇ ನನ್ನ ಮನೆ; ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿದ್ದೇನೆ.

14 If I say to the earth, You are my father; and to the worm, My mother and my sister;ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.

15 Where then is my hope? and who will see my desire?ಹಾಗಾದರೆ ಈಗ ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?

16 Will they go down with me into the underworld? Will we go down together into the dust?ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.

Kannada Bible