Job 13
1 ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
2 ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
3 ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
4 ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
5 ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು.
6 ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
7 ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?
8 ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ?
9 ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ?
10 ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು.
11 ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
12 ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ.
13 ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ.
14 ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು?
15 ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
16 ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ.
17 ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
18 ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ.
19 ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.
20 ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ.
21 ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ.
22 ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು.
23 ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು.
24 ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ?
25 ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ?
26 ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ.
27 ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ.
28 ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
1 Lo, mine eye hath seen all this, mine ear hath heard and understood it.
2 What ye know, the same do I know also: I am not inferior unto you.
3 Surely I would speak to the Almighty, and I desire to reason with God.
4 But ye are forgers of lies, ye are all physicians of no value.
5 O that ye would altogether hold your peace! and it should be your wisdom.
6 Hear now my reasoning, and hearken to the pleadings of my lips.
7 Will ye speak wickedly for God? and talk deceitfully for him?
8 Will ye accept his person? will ye contend for God?
9 Is it good that he should search you out? or as one man mocketh another, do ye so mock him?
10 He will surely reprove you, if ye do secretly accept persons.
11 Shall not his excellency make you afraid? and his dread fall upon you?
12 Your remembrances are like unto ashes, your bodies to bodies of clay.
13 Hold your peace, let me alone, that I may speak, and let come on me what will.
14 Wherefore do I take my flesh in my teeth, and put my life in mine hand?
15 Though he slay me, yet will I trust in him: but I will maintain mine own ways before him.
16 He also shall be my salvation: for an hypocrite shall not come before him.
17 Hear diligently my speech, and my declaration with your ears.
18 Behold now, I have ordered my cause; I know that I shall be justified.
19 Who is he that will plead with me? for now, if I hold my tongue, I shall give up the ghost.
20 Only do not two things unto me: then will I not hide myself from thee.
21 Withdraw thine hand far from me: and let not thy dread make me afraid.
22 Then call thou, and I will answer: or let me speak, and answer thou me.
23 How many are mine iniquities and sins? make me to know my transgression and my sin.
24 Wherefore hidest thou thy face, and holdest me for thine enemy?
25 Wilt thou break a leaf driven to and fro? and wilt thou pursue the dry stubble?
26 For thou writest bitter things against me, and makest me to possess the iniquities of my youth.
27 Thou puttest my feet also in the stocks, and lookest narrowly unto all my paths; thou settest a print upon the heels of my feet.
28 And he, as a rotten thing, consumeth, as a garment that is moth eaten.
Job 20 in Tamil and English
1 ನಾಮಾಥ್ಯನಾದ ಚೋಫರನು ಉತ್ತರ ಕೊಟ್ಟು ಹೇಳಿದ್ದೇನಂದರೆ--
Then answered Zophar the Naamathite, and said,
2 ಆದದರಿಂದ ನನ್ನಲ್ಲಿರುವ ಆತುರಕ್ಕೋಸ್ಕರವೇ ನನ್ನ ಆಲೋಚನೆಗಳು ನನಗೆ ಉತ್ತರ ಕೊಡುತ್ತವೆ.
Therefore do my thoughts cause me to answer, and for this I make haste.
3 ನನ್ನನ್ನು ನಿಂದಿಸುವ ಶಿಕ್ಷೆಯನ್ನು ಕೇಳಿದ್ದೇನೆ; ಆದರೆ ನನ್ನ ಆತ್ಮವು ನನ್ನ ಗ್ರಹಿಕೆಯ ಪ್ರಕಾರ ನನಗೆ ಉತ್ತರ ಕೊಡುವದು.
I have heard the check of my reproach, and the spirit of my understanding causeth me to answer.
4 ಇದನ್ನು ಆದಿಯಿಂದಲೂ ಅಂದರೆ ಮನುಷ್ಯನನ್ನು ಭೂಮಿಯ ಮೇಲೆ ಇಟ್ಟಂದಿನಿಂದಲೂ ನೀನು ತಿಳಿಯಲಿಲ್ಲವೋ?
Knowest thou not this of old, since man was placed upon earth,
5 ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
That the triumphing of the wicked is short, and the joy of the hypocrite but for a moment?
6 ಅವನ ಮಹತ್ತು ಆಕಾಶಕ್ಕೆ ಏರಿದರೂ ಅವನ ತಲೆ ಮೇಘಕ್ಕೆ ಮುಟ್ಟಿದರೂ
Though his excellency mount up to the heavens, and his head reach unto the clouds;
7 ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು.
Yet he shall perish for ever like his own dung: they which have seen him shall say, Where is he?
8 ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು.
He shall fly away as a dream, and shall not be found: yea, he shall be chased away as a vision of the night.
9 ಅವನನ್ನು ನೋಡಿದ ಕಣ್ಣು ಇನ್ನು ನೋಡದು; ಅವನ ಸ್ಥಳವನ್ನು ಇನ್ನು ಅವನನ್ನು ಕಾಣದು.
The eye also which saw him shall see him no more; neither shall his place any more behold him.
10 ಅವನ ಮಕ್ಕಳು ಬಡವ ರನ್ನು ಮೆಚ್ಚಿಸುತ್ತಾರೆ; ಅವನ ಕೈಗಳು ಅವರ ವಸ್ತುಗ ಳನ್ನು ತಿರುಗಿ ಕೊಡುತ್ತವೆ.
His children shall seek to please the poor, and his hands shall restore their goods.
11 ಅವನ ಎಲುಬುಗಳು ಯೌವನ ಪಾಪದಿಂದ ತುಂಬಿದ್ದರೂ ಅದು ಅವನ ಸಂಗಡ ಧೂಳಿನಲ್ಲಿ ಮಲಗುವದು.
His bones are full of the sin of his youth, which shall lie down with him in the dust.
12 ಅವನ ಬಾಯಿಗೆ ಕೆಟ್ಟತನವು ಸಿಹಿಯಾಗಿದ್ದಾಗ್ಯೂ ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟರೂ
Though wickedness be sweet in his mouth, though he hide it under his tongue;
13 ಅದನ್ನು ಕನಿಕರಿಸಿ ಅದನ್ನು ಬಿಡದೆ ತನ್ನ ಬಾಯಿಯೊಳಗೆ ಇಟ್ಟುಕೊಂಡರೂ
Though he spare it, and forsake it not; but keep it still within his mouth:
14 ಅವನ ಆಹಾರವು ಅವನ ಕರು ಳುಗಳಲ್ಲಿ ಮಾರ್ಪಟ್ಟು ಅವನ ಉಡಿಲಲ್ಲಿ ಸರ್ಪದ ವಿಷವಾಗುವದು.
Yet his meat in his bowels is turned, it is the gall of asps within him.
15 ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡ ಮಾಡುವನು.
He hath swallowed down riches, and he shall vomit them up again: God shall cast them out of his belly.
16 ಸರ್ಪಗಳ ವಿಷ ವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲು ವದು.
He shall suck the poison of asps: the viper’s tongue shall slay him.
17 ಅವನು ಜೇನೂ ಬೆಣ್ಣೆ ಹರಿಯುವ ಹಳ್ಳ ಗಳನ್ನೂ ನದಿಯನ್ನೂ ಕಾಲಿವೆಗಳನ್ನೂ ನೋಡನು.
He shall not see the rivers, the floods, the brooks of honey and butter.
18 ದುಡಿದದ್ದನ್ನ್ನು ನುಂಗದೆ ತಿರುಗಿ ಕೊಡುವನು; ಆಸ್ತಿಯ ಮೇರೆಗೆ ಬದಲು ಕೊಡುವನು; ಅವನು ಉಲ್ಲಾಸ ಹೊಂದುವದಿಲ್ಲ.
That which he laboured for shall he restore, and shall not swallow it down: according to his substance shall the restitution be, and he shall not rejoice therein.
19 ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು.
Because he hath oppressed and hath forsaken the poor; because he hath violently taken away an house which he builded not;
20 ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ.
Surely he shall not feel quietness in his belly, he shall not save of that which he desired.
21 ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ.
There shall none of his meat be left; therefore shall no man look for his goods.
22 ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು.
In the fulness of his sufficiency he shall be in straits: every hand of the wicked shall come upon him.
23 ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು.
When he is about to fill his belly, God shall cast the fury of his wrath upon him, and shall rain it upon him while he is eating.
24 ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು.
He shall flee from the iron weapon, and the bow of steel shall strike him through.
25 ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ.
It is drawn, and cometh out of the body; yea, the glittering sword cometh out of his gall: terrors are upon him.
26 ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು.
All darkness shall be hid in his secret places: a fire not blown shall consume him; it shall go ill with him that is left in his tabernacle.
27 ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು.
The heaven shall reveal his iniquity; and the earth shall rise up against him.
28 ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.
The increase of his house shall depart, and his goods shall flow away in the day of his wrath.
29 ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
This is the portion of a wicked man from God, and the heritage appointed unto him by God.