Bible

Job 12 - BBE (Kannada)

1 And Job made answer and said,ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು--

2 No doubt you have knowledge, and wisdom will come to an end with you.ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವದು.

3 But I have a mind as well as you; I am equal to you: yes, who has not knowledge of such things as these?ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು; ನಾನು ನಿಮಗಿಂತ ಕಡಿಮೆ ಇಲ್ಲ. ಹೌದು, ಇಂಥಾ ಮಾತುಗಳನ್ನು ತಿಳಿಯದಿರುವವನು ಯಾರು?

4 It seems that I am to be as one who is a cause of laughing to his neighbour, one who makes his prayer to God and is answered! the upright man who has done no wrong is to be made sport of!ನಾನು ನೆರೆಯವನಿಗೆ ನಗೆಯಾದವನು; ದೇವರಿಗೆ ಕೂಗು ತ್ತೇನೆ. ಆತನು ಉತ್ತರ ಕೊಡುತ್ತಾನೆ; ನೀತಿವಂತ ಮನು ಷ್ಯನನ್ನು ಗೇಲಿಮಾಡಿ ನಗುವರು.

5 In the thought of him who is in comfort there is no respect for one who is in trouble; such is the fate of those whose feet are slipping.ತನ್ನ ಕಾಲುಗ ಳಿಂದ ಜಾರುವದಕ್ಕೆ ಸಿದ್ಧನಾಗಿರುವವನು, ನೆಮ್ಮದಿಯಾ ಗಿರುವವನ ಯೋಚನೆಯಲ್ಲಿ ತಿರಸ್ಕಾರದ ದೀವಟಿ ಗೆಯಾಗಿದ್ದಾನೆ.

6 There is wealth in the tents of those who make destruction, and those by whom God is moved to wrath are safe; even those whose god is their strength.ಕಳ್ಳರ ಗುಡಾರಗಳು ವೃದ್ಧಿಯಾ ಗುತ್ತವೆ; ದೇವರಿಗೆ ಕೋಪ ಎಬ್ಬಿಸುವವರಿಗೆ ಅಭಯ ಉಂಟು. ದೇವರು ಅವರ ಕೈಯಲ್ಲಿ ಸಮೃದ್ಧಿಯನ್ನು ಬರ ಮಾಡುತ್ತಾನೆ.

7 But put now a question to the beasts, and get teaching from them; or to the birds of the heaven, and they will make it clear to you;ಆದರೂ ಪಶುಗಳನ್ನು ಕೇಳು. ಅವು ನಿನಗೆ ಬೋಧಿ ಸುವವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವವು.

8 Or to the things which go flat on the earth, and they will give you wisdom; and the fishes of the sea will give you news of it.ಅಥವಾ ಭೂಮಿಯ ಸಂಗಡ ಮಾತ ನಾಡು; ಅದು ನಿನಗೆ ಬೋಧಿಸುವದು; ಸಮುದ್ರದ ವಿಾನುಗಳು ನಿನಗೆ ವಿವರಿಸುವವು.

9 Who does not see by all these that the hand of the Lord has done this?ಕರ್ತನ ಕೈ ಇದನ್ನು ಮಾಡಿತೆಂದು ಇವೆಲ್ಲವುಗಳಲ್ಲಿ ತಿಳಿಯದಿರು ವದು ಯಾವದು?

10 In whose hand is the soul of every living thing, and the breath of all flesh of man.ಆತನ ಕೈಯಲ್ಲಿ ಎಲ್ಲಾ ಜೀವಿ ಗಳ ಪ್ರಾಣವು ಎಲ್ಲಾ ಮನುಷ್ಯರ ಶ್ವಾಸವೂ ಇವೆ.

11 Are not words tested by the ear, even as food is tasted by the mouth?ಕಿವಿಯು ನುಡಿಗಳನ್ನು ಶೋಧಿಸುವದಿಲ್ಲವೇ? ಬಾಯಿಯು ಆಹಾರವನ್ನು ರುಚಿನೋಡುವದಿಲ್ಲವೇ?

12 Old men have wisdom, and a long life gives knowledge.ಮುದುಕರಲ್ಲಿ ಜ್ಞಾನವೂ ದಿನಗಳುದ್ದಕ್ಕೂ ಗ್ರಹಿ ಕೆಯೂ ಇವೆ.

13 With him there is wisdom and strength; power and knowledge are his.ಜ್ಞಾನವೂ ಪರಾಕ್ರಮವೂ ಆತನಲ್ಲಿವೆ; ಆಲೋ ಚನೆಯೂ ಗ್ರಹಿಕೆಯೂ ಆತನವೇ.

14 Truly, there is no building up of what is pulled down by him; when a man is shut up by him, no one may let him loose.ಇಗೋ, ಆತನು ಕೆಡವುತ್ತಾನೆ; ಅದು ತಿರುಗಿ ಕಟ್ಟಲ್ಪಡುವದಿಲ್ಲ. ಆತನು ಮನುಷ್ಯನಿಂದ ಮುಚ್ಚಿಬಿಡುತ್ತಾನೆ; ಅದು ತೆರೆ ಯಲ್ಪಡುವದಿಲ್ಲ.

15 Truly, he keeps back the waters and they are dry; he sends them out and the earth is overturned.ಇಗೋ, ಆತನು ಜಲಗಳನ್ನು ಬಿಗಿ ಹಿಡಿಯುತ್ತಾನೆ; ಅವು ಬತ್ತಿಹೋಗುತ್ತವೆ; ಆತನು ಅವುಗಳನ್ನು ಹೊರಗೆ ಕಳುಹಿಸಿದಾಗ ಅವು ಭೂಮಿ ಯನ್ನು ಬುಡಮೇಲು ಮಾಡುತ್ತವೆ.

16 With him are strength and wise designs; he who is guided into error, together with his guide, are in his hands;ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ.

17 He takes away the wisdom of the wise guides, and makes judges foolish;ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ.

18 He undoes the chains of kings, and puts his band on them;ಆತನು ಅರಸರ ಬಂಧನಗಳನ್ನು ಬಿಡಿಸಿ ಅವರ ನಡುಗಳಿಗೆ ನಡುಕಟ್ಟನ್ನು ಕಟ್ಟುತ್ತಾನೆ.

19 He makes priests prisoners, overturning those in safe positions;ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ.

20 He makes the words of responsible persons without effect, and takes away the good sense of the old;ನಂಬಿಕೆಯು ಳ್ಳವರ ಮಾತನ್ನು ತೆಗೆದುಹಾಕುತ್ತಾನೆ; ವೃದ್ಧರ ವಿವೇಕ ವನ್ನು ಇಲ್ಲದಾಗಿ ಮಾಡುತ್ತಾನೆ.

21 He puts shame on chiefs, and takes away the power of the strong;ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾನೆ; ಬಲಿಷ್ಠರ ಬಲವನ್ನು ಕುಂದಿಸುತ್ತಾನೆ.

22 Uncovering deep things out of the dark, and making the deep shade bright;ಕತ್ತಲೆಯೊಳಗಿನಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾನೆ; ಮರಣದ ನೆರ ಳನ್ನು ಬೆಳಕಿಗೆ ತರುತ್ತಾನೆ.

23 Increasing nations, and sending destruction on them; making wide the lands of peoples, and then giving them up.ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ.

24 He takes away the wisdom of the rulers of the earth, and sends them wandering in a waste where there is no way.ಆತನು ಭೂಮಿಯ ಮುಖ್ಯಸ್ಥರ ವಿವೇಕವನ್ನು ತೆಗೆದು ಬಿಡುತ್ತಾನೆ. ಮಾರ್ಗವಿಲ್ಲದ ಕಾಡಿನಲ್ಲಿ ಅವರನ್ನು ಅಲೆಯ ಮಾಡುತ್ತಾನೆ.

25 They go feeling about in the dark without light, wandering without help like those overcome with wine.ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ.

Kannada Bible