Bible

Jeremiah 39 - DBY (Kannada)

1 And it came to pass when Jerusalem was taken, in the ninth year of Zedekiah king of Judah, in the tenth month, came Nebuchadrezzar king of Babylon and all his army against Jerusalem, and they besieged it.ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು.

2 In the eleventh year of Zedekiah, in the fourth month, on the ninth of the month, the city was broken into;ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು.

3 and all the princes of the king of Babylon came in, and sat in the middle gate: Nergal-sharezer, Samgar-nebu, Sarsechim, chief chamberlain, Nergal-sharezer, chief magian, and all the rest of the princes of the king of Babylon.ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್‌ಸ ರೇಚರನೂ ಸಮ್ಗರ್‌ನೆಬೋವನೂ ಸರ್ಸೆಕೀಮನೂ ನೇರ್ಗೆಲ್‌ಸರೆಚರನೂ ರಬ್‌ಶರೀಸ್‌ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.

4 And it came to pass when Zedekiah the king of Judah and all the men of war saw them, that they fled, and went forth out of the city by night, by the way of the king's garden, by the gate between the two walls; and he went out the way of the plain.ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು;

5 And the army of the Chaldeans pursued after them, and overtook Zedekiah in the plains of Jericho; and they took him, and brought him up to Nebuchadnezzar king of Babylon, unto Riblah in the land of Hamath; and he pronounced judgment upon him.ಅವನು ಬೈಲುಸೀಮೆಯ ಮಾರ್ಗ ವಾಗಿ ಹೊರಟನು. ಆದರೆ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಅವರು ಅವನನ್ನು ಹಿಡಿದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹಮಾತ್‌ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು. ಅಲ್ಲಿ ಅವನು ಅವನಿಗೆ ನ್ಯಾಯತೀರಿಸಿದನು.

6 And the king of Babylon slaughtered the sons of Zedekiah in Riblah before his eyes, and the king of Babylon slaughtered all the nobles of Judah;ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು.

7 and he put out the eyes of Zedekiah, and bound him with chains of brass, to carry him to Babylon.ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು.

8 And the Chaldeans burned the king's house and the houses of the people with fire, and broke down the walls of Jerusalem.ಅರಸನ ಮನೆಯನ್ನೂ ಜನರ ಮನೆಗಳನ್ನೂ ಕಸ್ದೀಯರು ಬೆಂಕಿಯಿಂದ ಸುಟ್ಟರು; ಮತ್ತು ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.

9 And Nebuzar-adan the captain of the body-guard carried away captive into Babylon the rest of the people that were left in the city, and the deserters that had deserted to him, with the rest of the people that were left.ಆಗ ಪಟ್ಟಣದೊಳಗೆ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಅವನ ಕಡೆಗೆ ಒಳಬಿದ್ದು ಮೊರೆ ಹೊಕ್ಕವರನ್ನೂ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಕಾವಲಿನವರ ಅಧಿಪತಿ ಯಾದ ನೆಬೂಜರದಾನನು ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋದನು.

10 But Nebuzar-adan the captain of the body-guard left [certain] of the people, the poor who had nothing, in the land of Judah, and gave them vineyards and fields at the same time.ಆದರೆ ಜನರೊಳಗೆ ಏನೂ ಇಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶ ದಲ್ಲಿ ಬಿಟ್ಟು ಅವರಿಗೆ ಆಗಲೇ ದ್ರಾಕ್ಷೇ ತೋಟಗಳನ್ನೂ ಹೊಲಗಳನ್ನೂ ಕೊಟ್ಟನು.

11 And Nebuchadrezzar king of Babylon had given charge concerning Jeremiah by Nebuzar-adan the captain of the body-guard, saying,ಇದಲ್ಲದೆ ಯೆರೆವಿಾಯನ ವಿಷಯವಾಗಿ ಬಾಬೆ ಲಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇ ನಂದರೆ--

12 Take him, and keep an eye upon him, and do him no harm; but do unto him even as he shall say unto thee.ಅವನನ್ನು ತಕ್ಕೋ; ಅವನನ್ನು ಚೆನ್ನಾಗಿ ನೋಡಿಕೋ, ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಏನು ಹೇಳುವನೋ ಹಾಗೆಯೇ ಅವನಿಗೆ ಮಾಡು.

13 So Nebuzar-adan the captain of the body-guard sent, and Nebushazban, chief chamberlain, and Nergal-sharezer, chief magian, and all the king of Babylon's princes,ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.

14 even they sent, and took Jeremiah out of the court of the guard and committed him to Gedaliah the son of Ahikam the son of Shaphan, that he should conduct him away home. And he dwelt among the people.ಅವರು ಕಳುಹಿಸಿ ಯೆರೆವಿಾಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ ಶಾಫಾನನ ಮಗ ನಾದ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ ಮನೆಗೆ ಕರಕೊಂಡು ಹೋಗಬೇಕೆಂದು ಅಪ್ಪಣೆ ಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು.

15 And the word of Jehovah came unto Jeremiah, while he was shut up in the court of the guard, saying,ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಹಾಕ ಲ್ಪಟ್ಟಿರುವಾಗ ಕರ್ತನ ವಾಕ್ಯವು ಅವನಿಗೆ ಉಂಟಾಗಿ ಹೇಳಿದ್ದೇನಂದರೆ--

16 Go and speak to Ebed-melech the Ethiopian, saying, Thus saith Jehovah of hosts, the God of Israel: Behold, I will bring my words upon this city for evil, and not for good, and they shall come to pass before thy face in that day.ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ ಹೇಳತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಒಳ್ಳೇದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ; ಅವು ಆ ದಿವಸದಲ್ಲಿ ನಿನ್ನ ಮುಂದೆಯೇ ಉಂಟಾಗುವವು.

17 And I will deliver thee in that day, saith Jehovah; and thou shalt not be given into the hand of the men of whom thou art afraid;ಆದರೆ ಆ ದಿನದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಕರ್ತನು ಅನ್ನುತ್ತಾನೆ; ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲ.

18 for I will certainly save thee, and thou shalt not fall by the sword, but thou shalt have thy life for a prey; for thou hast put thy confidence in me, saith Jehovah.ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು; ನೀನು ಕತ್ತಿಯಿಂದ ಬೀಳುವದಿಲ್ಲ; ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವದೆಂದು ಕರ್ತನು ಅನ್ನುತ್ತಾನೆ

Kannada Bible