Isaiah 58:14
ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
Then | אָ֗ז | ʾāz | az |
shalt thou delight thyself | תִּתְעַנַּג֙ | titʿannag | teet-ah-NAHɡ |
in | עַל | ʿal | al |
the Lord; | יְהוָ֔ה | yĕhwâ | yeh-VA |
ride to thee cause will I and | וְהִרְכַּבְתִּ֖יךָ | wĕhirkabtîkā | veh-heer-kahv-TEE-ha |
upon | עַל | ʿal | al |
the high places | בָּ֣מֳותֵי | bāmŏwtê | BA-move-tay |
earth, the of | אָ֑רֶץ | ʾāreṣ | AH-rets |
and feed | וְהַאֲכַלְתִּ֗יךָ | wĕhaʾăkaltîkā | veh-ha-uh-hahl-TEE-ha |
heritage the with thee | נַחֲלַת֙ | naḥălat | na-huh-LAHT |
of Jacob | יַעֲקֹ֣ב | yaʿăqōb | ya-uh-KOVE |
father: thy | אָבִ֔יךָ | ʾābîkā | ah-VEE-ha |
for | כִּ֛י | kî | kee |
the mouth | פִּ֥י | pî | pee |
Lord the of | יְהוָ֖ה | yĕhwâ | yeh-VA |
hath spoken | דִּבֵּֽר׃ | dibbēr | dee-BARE |
Cross Reference
Deuteronomy 32:13
ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು.
Job 22:26
ಆಗ ಸರ್ವಶಕ್ತನಲ್ಲಿ ನೀನು ಆನಂದಗೊಂಡು ನಿನ್ನ ಮುಖ ವನ್ನು ದೇವರ ಕಡೆಗೆ ಎತ್ತುವಿ.
Isaiah 1:19
ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
Isaiah 33:16
ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
Isaiah 40:5
ಎಲ್ಲಾ ಮನುಷ್ಯರು ಒಟ್ಟಿಗೆ ಅದನ್ನು ಕಾಣುವರು ಕರ್ತನ ಬಾಯಿಯೇ ಇದನ್ನು ನುಡಿದದೆ ಎಂದು ಒಬ್ಬನು ಕೂಗುತ್ತಾನೆ.
Habakkuk 3:18
ನಾನು ಕರ್ತನಲ್ಲಿ ಸಂತೋಷಿ ಸುವೆನು, ನನ್ನ ರಕ್ಷಣೆಯ ದೇವರಲ್ಲಿ ಉಲ್ಲಾಸಪಡು ವೆನು.
Micah 4:4
ಆದರೆ ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷೇ ಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕೂತುಕೊಳ್ಳುವನು. ಭಯಪಡಿಸುವವನು ಯಾರೂ ಇರುವದಿಲ್ಲ. ಯಾಕಂದರೆ ಸೈನ್ಯಗಳ ಕರ್ತನ ಬಾಯಿ ಅದನ್ನು ನುಡಿದಿದೆ.
Jeremiah 3:19
ಆದರೆ ನಾನು--ನಿನ್ನನ್ನು ಮಕ್ಕಳೊಳಗೆ ಇಟ್ಟು ಮನೋಹರವಾದ ದೇಶವನ್ನೂ ಜನಾಂಗಗಳವರ ಸೈನ್ಯಗಳ ರಮ್ಯವಾದ ಸ್ವಾಸ್ತ್ಯವನ್ನೂ ನಿನಗೆ ಕೊಡು ವದು ಹೇಗೆಂದು ನಾನು ಅಂದುಕೊಂಡೆನು; ನಾನು --ನನ್ನ ತಂದೆಯೇ, ನೀನು ನನ್ನನ್ನು ಕರೆದು, ನನ್ನನ್ನು ಬಿಟ್ಟು ತಿರುಗುವದಿಲ್ಲವೆಂದು ಅಂದುಕೊಂಡೆನು.
Psalm 105:9
ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ.
Psalm 37:11
ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದ ಪಡುವರು.
Psalm 36:8
ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
Job 27:10
ಇಲ್ಲವೆ ಸರ್ವಶಕ್ತನಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿ ದೇವರನ್ನು ಕರೆಯುವನೋ?
Deuteronomy 33:29
ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.
Psalm 37:4
ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು.
Psalm 135:12
ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
Psalm 136:21
ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.
Matthew 24:35
ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
Philippians 4:4
ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ.
1 Peter 1:8
ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
Job 34:9
ಅವನು--ದೇವರ ಸಂಗಡ ಆನಂದಿಸುವದು ಮನುಷ್ಯನಿಗೆ ಉಪಯೋಗ ವಿಲ್ಲವೆಂದು ಹೇಳುತ್ತಾನೆ.