Bible

Isaiah 56 - ASV (Kannada)

1 Thus saith Jehovah, Keep ye justice, and do righteousness; for my salvation is near to come, and my righteousness to be revealed.ಕರ್ತನು ಹೀಗನ್ನುತ್ತಾನೆ--ನ್ಯಾಯವನ್ನು ಕೈಕೊಳ್ಳಿರಿ, ನೀತಿಯಲ್ಲಿ ನಡೆಯಿರಿ; ಯಾಕಂದರೆ ನನ್ನ ರಕ್ಷಣೆಯು ಬರುವದಕ್ಕೂ ನನ್ನ ನೀತಿಯು ಪ್ರಕಟವಾಗುವದಕ್ಕೂ ಸವಿಾಪವಾಗಿದೆ.

2 Blessed is the man that doeth this, and the son of man that holdeth it fast; that keepeth the sabbath from profaning it, and keepeth his hand from doing any evil.ಇದನ್ನು ಮಾಡುವ ಮನುಷ್ಯನೂ ಇದನ್ನು ಹಿಡಿದು ಕೊಳ್ಳುವವರ ಪುತ್ರನೂ ಅಂದರೆ ಸಬ್ಬತ್‌ ದಿನವನ್ನು ಅಪವಿತ್ರಮಾಡದೆ ಕೈಕೊಳ್ಳುವನೋ ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.

3 Neither let the foreigner, that hath joined himself to Jehovah, speak, saying, Jehovah will surely separate me from his people; neither let the eunuch say, Behold, I am a dry tree.ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.

4 For thus saith Jehovah of the eunuchs that keep my sabbaths, and choose the things that please me, and hold fast my covenant:ಕರ್ತನು ತನ್ನ ಸಬ್ಬತ್ತನ್ನು ಕೈಕೊಂಡು ತನಗೆ ಮೆಚ್ಚಿಕೆಯಾದದ್ದನ್ನು ಆದುಕೊಂಡು ತನ್ನ ಒಡಂಬಡಿಕೆಯನ್ನು ಹಿಡಿದು ಕೊಂಡಿರುವ ನಪುಂಸಕರಿಗೆ--

5 Unto them will I give in my house and within my walls a memorial and a name better than of sons and of daughters; I will give them an everlasting name, that shall not be cut off.ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.

6 Also the foreigners that join themselves to Jehovah, to minister unto him, and to love the name of Jehovah, to be his servants, every one that keepeth the sabbath from profaning it, and holdeth fast my covenant;ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ

7 even them will I bring to my holy mountain, and make them joyful in my house of prayer: their burnt-offerings and their sacrifices shall be accepted upon mine altar; for my house shall be called a house of prayer for all peoples.ನನ್ನ ಪರಿಶುದ್ಧ ಪರ್ವತಕ್ಕೆ ತರುತ್ತೇನೆ; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವ ನ್ನುಂಟು ಮಾಡುವೆನು; ನನ್ನ ಯಜ್ಞವೇದಿಯ ಮೇಲೆ ಅವರು ಅರ್ಪಿಸುವ ದಹನಬಲಿಗಳೂ, ಯಜ್ಞಗಳೂ ನನಗೆ ಒಪ್ಪಿಗೆಯಾಗುವವು; ಯಾಕಂದರೆ ನನ್ನ ಆಲ ಯವು ಸಮಸ್ತ ಜನಗಳಿಗೆ ಪ್ರಾರ್ಥನಾಲಯವು ಎಂದು ಕರೆಯಲ್ಪಡುವದು.

8 The Lord Jehovah, who gathereth the outcasts of Israel, saith, Yet will I gather `others' to him, besides his own that are gathered.ಇಸ್ರಾಯೇಲಿನ ತಳ್ಳಲ್ಪ ಟ್ಟವರನ್ನು ಕೂಡಿಸುವಂಥ ಕರ್ತನಾದ ದೇವರು ಹೇಳುವದೇನಂದರೆ--ನಾನು ಕೂಡಿಸಿದ ಇಸ್ರಾ ಯೇಲ್ಯರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು ಎಂದು ಹೇಳುತ್ತಾನೆ.

9 All ye beasts of the field, come to devour, `yea', all ye beasts in the forest.ಅರಣ್ಯದ ಸಕಲ ಮೃಗಗಳೇ, ಹೌದು, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವದಕ್ಕೆ ಬನ್ನಿರಿ.

10 His watchmen are blind, they are all without knowledge; they are all dumb dogs, they cannot bark; dreaming, lying down, loving to slumber.ಅವನ ಕಾವಲುಗಾರರು ಕುರುಡರು, ಅವರೆಲ್ಲರೂ ತಿಳುವಳಿಕೆ ಯಿಲ್ಲದವರು; ಅವರೆಲ್ಲರೂ ಮೂಕ ನಾಯಿಗಳು; ಅವು ಬೊಗಳಲಾರವು, ನಿದ್ರಿಸುತ್ತವೆ, ಬಿದ್ದುಕೊಂಡಿ ರುತ್ತವೆ. ತೂಕಡಿಕೆಯನ್ನು ಪ್ರೀತಿಸುತ್ತವೆ.

11 Yea, the dogs are greedy, they can never have enough; and these are shepherds that cannot understand: they have all turned to their own way, each one to his gain, from every quarter.ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.

12 Come ye, `say they', I will fetch wine, and we will fill ourselves with strong drink; and to-morrow shall be as this day, `a day' great beyond measure.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.

Kannada Bible