Bible

Isaiah 15 - BBE (Kannada)

1 The word about Moab. For in a night Ar of Moab has become waste, and is seen no longer; for in a night Kir of Moab has become waste, and is seen no longer.ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್‌ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್‌ ಹಾಳಾಗಿ ನಿಶ್ಯಬ್ಧವಾಯಿತು

2 The daughter of Dibon has gone up to the high places, weeping: Moab is sounding her cry of sorrow over Nebo, and over Medeba: everywhere the hair of the head and of the face is cut off.ಬಯಿತ್‌ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.

3 In their streets they are covering themselves with haircloth: on the tops of their houses, and in their public places, there is crying and bitter weeping.ಅವರು ತಮ್ಮ ಬೀದಿಗಳಲ್ಲಿ ಗೋಣೀತಟ್ಟನ್ನು ತಾವೇ ಸುತ್ತಿ ಕೊಳ್ಳುವರು; ಪ್ರತಿಯೊಬ್ಬನು ತಮ್ಮ ಮನೆಗಳ ಮೇಲೆ ಯೂ ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕ ದಿಂದ ಗೋಳಾಡುವನು.

4 Heshbon is crying out, and Elealeh; their voice is sounding even to Jahaz: for this cause the heart of Moab is shaking; his soul is shaking with fear.ಹೆಷ್ಬೋನ್‌ ಮತ್ತು ಎಲೆ ಯಾಲೆ ಕೂಗುತ್ತವೆ; ಅವುಗಳ ಸ್ವರವು ಯಹಜಿನ ವರೆಗೂ ಕೇಳಿಸುತ್ತದೆ; ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು; ಅವನ ಪ್ರಾಣವು ತನ್ನೊಳಗೆ ತತ್ತರಿಸುತ್ತದೆ.

5 My heart is crying out for Moab; her people go in flight to Zoar, and to Eglath-shelishiyah: for they go up with weeping by the slope of Luhith; on the way to Horonaim they send up a cry of destruction.ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗು ತ್ತದೆ; ಅಲ್ಲಿಂದ ಪಲಾಯನವಾದವರು ಮೂರು ವರುಷದ ಕಡಸಿನಂತೆ ಚೋಯರಿಗೆ ಓಡಿಹೋಗು ವರು; ಲೂಹೀಥ್‌ ದಿಣ್ಣೆಯನ್ನು ಅಳುತ್ತಾ ಹತ್ತುತ್ತಾರೆ; ಯಾಕಂ ದರೆ ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಸ್ವರಗೈಯು ತ್ತಾರೆ.

6 The waters of Nimrim will become dry: for the grass is burned up, the young grass is coming to an end, every green thing is dead.ನಿವ್ರೆಾಮ್‌ ನೀರು ಹಾಳಾಯಿತು; ಹುಲ್ಲು ಬಾಡಿಹೋಗಿದೆ, ಹಸಿಹುಲ್ಲು ಮುಗಿಯಿತು, ಅಲ್ಲಿ ಹಸಿರಾದದ್ದು ಇಲ್ಲವೇ ಇಲ್ಲ.

7 For this cause they will take away their wealth, and the stores they have got together, over the stream of the water-plants.ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.

8 For the cry has gone round the limits of Moab; as far as to Eglaim and Beer-elim.ಕೂಗಾಟವು ಮೋವಾಬಿನ ಎಲ್ಲೆ ಗಳ ತನಕ ಹಬ್ಬಿದೆ, ಅದರ ಕಿರಿಚಾಟ ಎಗ್ಲಯಿಮಿನ ವರೆಗೆ ಬೆಯೇರ್‌ ಏಲೀಮಿನ ವರೆಗೂ ವ್ಯಾಪಿಸಿದೆ.

9 For the waters of Dimon are full of blood: and I'm sending even more on Moab, a lion on those of Moab who go in flight, and on the rest of the land.ದೀಮೋನಿನ ನೀರೆಲ್ಲಾ ರಕ್ತವಾಯಿತು; ದೀಮೋ ನಿನ ಮೇಲೆ ಹೆಚ್ಚಾದದ್ದನ್ನು ತರುವೆನು; ಮೋವಾ ಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ ದೇಶ ದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.

Kannada Bible