Bible

Hosea 11 - BBE (Kannada)

1 When Israel was a child he was dear to me; and I took my son out of Egypt.ಇಸ್ರಾಯೇಲನು ಮಗುವಾಗಿದ್ದಾಗ ನಾನು ಅವನನ್ನು ಪ್ರೀತಿಮಾಡಿದೆನು, ಮತ್ತು ನನ್ನ ಮಗನನ್ನು ಐಗುಪ್ತದೊಳಗಿಂದ ಕರೆದೆನು.

2 When I sent for them, then they went away from me; they made offerings to the Baals, burning perfumes to images.ಅವರು ಅವರನ್ನು ಕರೆದ ಹಾಗೆಯೇ ಅವರಿಂದ ಹೊರಟು ಹೋದರು; ಅವರು ಬಾಳ್‌ ದೇವತೆಗಳಿಗೆ ಬಲಿ ಅರ್ಪಿಸಿದರು; ಕೆತ್ತಲ್ಪಟ್ಟ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.

3 But I was guiding Ephraim's footsteps; I took them up in my arms, but they were not conscious that I was ready to make them well.ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವ ರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.

4 I made them come after me with the cords of a man, with the bands of love; I was to them as one who took the yoke from off their mouths, putting meat before them.ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.

5 He will go back to the land of Egypt and the Assyrian will be his king, because they would not come back to me.ಅವನು ಐಗುಪ್ತ ದೇಶದೊಳಗೆ ಹಿಂತಿರುಗಿ ಬರಲಾರನು; ಆದರೆ ಅಶ್ಯೂರ್ಯನು ಅವನ ರಾಜನಾಗಿದ್ದಾನೆ. ಅವರು ತಿರುಗಿ ಬರುವದಕ್ಕೆ ನಿರಾಕರಿಸಿದರು.

6 And the sword will go through his towns, wasting his children and causing destruction because of their evil designs.ಆದದರಿಂದ ಅವರ ಆಲೋಚನೆಗಳ ನಿಮಿತ್ತ ಕತ್ತಿಯು ಅವರ ಪಟ್ಟಣಗಳ ಮೇಲೆ ನೆಲೆಯಾಗಿದ್ದು ಅಲ್ಲಿನ ಕೊಂಬೆ ಗಳನ್ನು ಸುಟ್ಟು ಅವರನ್ನು ನುಂಗಿಬಿಡುತ್ತದೆ.

7 My people are given up to sinning against me; though their voice goes up on high, no one will be lifting them up.ನನ್ನ ಜನರು ನನ್ನ ಕಡೆಯಿಂದ ಹಿಂಜರಿಯಬೇಕೆಂದು ತೀರ್ಮಾನಿಸಿದ್ದಾರೆ; ಅವರನ್ನು ಮಹೋನ್ನತನ ಬಳಿಗೆ ಕರೆದರೂ ಒಬ್ಬನಾದರೂ ಆತನನ್ನು ಉನ್ನತ ಪಡಿಸಲಾರನು.

8 How may I give you up, O Ephraim? how may I be your saviour, O Israel? how may I make you like Admah? how may I do to you as I did to Zeboim? My heart is turned in me, it is soft with pity.ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.

9 I will not put into effect the heat of my wrath; I will not again send destruction on Ephraim; for I am God and not man, the Holy One among you; I will not put an end to you.ನನ್ನ ಕೋಪದ ಉರಿಯನ್ನು ನಾನು ತೀರಿಸುವದಿಲ್ಲ, ನಾನು ಎಫ್ರಾಯಾಮನ್ನು ನಾಶ ಮಾಡಲು ತಿರುಗಿಕೊಳ್ಳುವದಿಲ್ಲ; ನಾನು ದೇವರೇ ಮನುಷ್ಯನಲ್ಲ, ನಿಮ್ಮ ಮಧ್ಯದಲ್ಲಿರುವಾತನಾದ ಪರಿ ಶುದ್ಧನೇ. ಪಟ್ಟಣದೊಳಗೆ ನಾನು ಪ್ರವೇಶಿಸುವದಿಲ್ಲ.

10 They will go after the Lord; his cry will be like that of a lion; his cry will be loud, and the children will come from the west, shaking with fear;ಅವರು ಕರ್ತನ ಹಿಂದೆ ಹೋಗುವರು; ಆತನು ಸಿಂಹದ ಹಾಗೆ ಗರ್ಜಿಸುವನು; ಆತನು ಗರ್ಜಿಸುವಾಗ ಮಕ್ಕಳು ಪಶ್ಚಿಮದಿಂದ ನಡುಗಿಬರುವರು;

11 Shaking with fear like a bird, they will come out of Egypt, like a dove out of the land of Assyria: and I will give them rest in their houses, says the Lord.ಐಗುಪ್ತದ ಪಕ್ಷಿಯ ಹಾಗೆ ಮತ್ತು ಅಶ್ಯೂರ್ಯರ ದೇಶದ ಪಾರಿವಾಳದ ಹಾಗೆ ಅವರು ನಡುಗುವರು. ನಾನು ಅವರನ್ನು ಅವರ ಮನೆತನಗಳಲ್ಲಿ ಇಡುವೆನು ಎಂದು ಕರ್ತನು ಹೇಳುತ್ತಾನೆ.

Kannada Bible