Bible

Colossians 3 - WEB (Kannada)

1 If then you were raised together with Christ, seek the things that are above, where Christ is, seated on the right hand of God.ಹಾಗಾದರೆ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟವರಾಗಿದ್ದರೆ ಮೇಲಿರುವ ವುಗಳನ್ನೇ ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.

2 Set your mind on the things that are above, not on the things that are on the earth.ಮೇಲಿರು ವಂಥವುಗಳ ಮೇಲೆ ನಿಮ್ಮ ಮನಸ್ಸಿಡಿರಿ. ಭೂಸಂಬಂಧ ವಾದವುಗಳ ಮೇಲೆ ಇಡಬೇಡಿರಿ.

3 For you died, and your life is hidden with Christ in God.ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಟ್ಟದೆ.

4 When Christ, our life, is revealed, then you will also be revealed with him in glory.ನಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನ ಜೊತೆ ಯಲ್ಲಿ ಪ್ರಭಾವದಿಂದ ಕೂಡಿದವರಾಗಿ ಪ್ರತ್ಯಕ್ಷ ರಾಗುವಿರಿ.

5 Put to death therefore your members which are on the earth: sexual immorality, uncleanness, depraved passion, evil desire, and covetousness, which is idolatry;ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.

6 for which things' sake the wrath of God comes on the children of disobedience.ಇವುಗಳ ನಿಮಿತ್ತ ಅವಿಧೇಯ ರಾದ ಮಕ್ಕಳ ಮೇಲೆ ದೇವರ ಕೋಪವು ಬರುತ್ತದೆ.

7 You also once walked in those, when you lived in them;ಪೂರ್ವದಲ್ಲಿ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿ ದ್ದಾಗ ಅವುಗಳಂತೆ ನಡೆದಿರಿ.

8 but now you also put them all away: anger, wrath, malice, slander, and shameful speaking out of your mouth.ಈಗಲಾದರೋ ಕ್ರೋಧ ಕೋಪ ಮತ್ಸರ ದೇವದೂಷಣೆ ನಿಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.

9 Don't lie to one another, seeing that you have put off the old man with his doings,ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ?

10 and have put on the new man, that is being renewed in knowledge after the image of his Creator,ನೀವು ನೂತನ ಮನುಷ್ಯನನ್ನು ಧರಿಸಿಕೊಂಡವರಾಗಿದ್ದೀರಿ ಅವನನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ಜ್ಞಾನದಲ್ಲಿ ಅವನು ನೂತನವಾಗುತ್ತಾನೆ.

11 where there can't be Greek and Jew, circumcision and uncircumcision, barbarian, Scythian, bondservant, freeman; but Christ is all, and in all.ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.

12 Put on therefore, as God's chosen ones, holy and beloved, a heart of compassion, kindness, lowliness, humility, and perseverance;ಆದದರಿಂದ ನೀವು ದೇವರಿಂದ ಆರಿಸಿಕೊಂಡ ವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

13 bearing with one another, and forgiving each other, if any man has a complaint against any; even as Christ forgave you, so you also do.ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ.

14 Above all these things, walk in love, which is the bond of perfection.ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಂಪೂರ್ಣ ಮಾಡುವ ಬಂಧವಾಗಿದೆ.

15 And let the peace of God rule in your hearts, to which also you were called in one body; and be thankful.ದೇವರ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ; ಅದಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲ್ಪಟ್ಟಿದ್ದೀರಿ; ಇದಲ್ಲದೆ ನೀವು ಕೃತಜ್ಞತೆಯುಳ್ಳವರಾಗಿರ್ರಿ.

16 Let the word of Christ dwell in you richly; in all wisdom teaching and admonishing one another with psalms, hymns, and spiritual songs, singing with grace in your heart to the Lord.ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ.

17 Whatever you do, in word or in deed, do all in the name of the Lord Jesus, giving thanks to God the Father, through him.ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.

18 Wives, be in subjection to your husbands, as is fitting in the Lord.ಸ್ತ್ರೀಯರೇ, ನೀವು ಕರ್ತನಲ್ಲಿ ಯೋಗ್ಯರಾಗಿ ರುವಂತೆ ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.

19 Husbands, love your wives, and don't be bitter against them.ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ; ಅವರಿಗೆ ನಿಷ್ಠುರವಾಗಿರಬೇಡಿರಿ.

20 Children, obey your parents in all things, for this pleases the Lord.ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯ ರಾಗಿರ್ರಿ; ಯಾಕಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.

21 Fathers, don't provoke your children, so that they won't be discouraged.ತಂದೆಗಳೇ, ನಿಮ್ಮ ಮಕ್ಕಳು ಮನಗುಂದದಂತೆ ಅವರನ್ನು ಕೆಣಕಿ ಕೋಪವನ್ನೆಬ್ಬಿಸ ಬೇಡಿರಿ.

22 Servants, obey in all things those who are your masters according to the flesh, not just when they are looking, as men-pleasers, but in singleness of heart, fearing God.ಸೇವಕರೇ, ಶಾರೀರಕವಾದ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯ ರಾಗಿರ್ರಿ; ಮನುಷ್ಯರನ್ನು ಮೆಚ್ಚುಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ದೇವರಿಗೆ ಭಯಪಡುವ ವರಾಗಿ ಸರಳ ಹೃದಯದಿಂದ ಕೆಲಸಮಾಡಿರಿ.

23 And whatever you do, work heartily, as for the Lord, and not for men,ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ;

24 knowing that from the Lord you will receive the reward of the inheritance; for you serve the Lord Christ.ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವರೆಂದು ತಿಳಿದಿದ್ದೀರಲ್ಲಾ. ಯಾಕಂದರೆ ನೀವು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿದ್ದೀರಿ.

25 But he who does wrong will receive again for the wrong that he has done, and there is no partiality.ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ.

Kannada Bible