Bible

Genesis 9 - YLT (Kannada)

1 And God blesseth Noah, and his sons, and saith to them, `Be fruitful, and multiply, and fill the earth;ದೇವರು ನೋಹನನ್ನೂ ಅವನ ಕುಮಾರರನ್ನೂ ಆಶೀರ್ವದಿಸಿ ಅವರಿಗೆ--ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.

2 and your fear and your dread is on every beast of the earth, and on every fowl of the heavens, on all that creepeth on the ground, and on all fishes of the sea -- into your hand they have been given.ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ.

3 Every creeping thing that is alive, to you it is for food; as the green herb I have given to you the whole;ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.

4 only flesh in its life -- its blood -- ye do not eat.ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.

5 `And only your blood for your lives do I require; from the hand of every living thing I require it, and from the hand of man, from the hand of every man's brother I require the life of man;ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು.

6 whoso sheddeth man's blood, by man is his blood shed: for in the image of God hath He made man.ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.

7 And ye, be fruitful and multiply, teem in the earth, and multiply in it.'ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯಲ್ಲಿ ಅಧಿಕವಾಗಿ ಹುಟ್ಟಿ ಅದರಲ್ಲಿ ಹೆಚ್ಚಿರಿ ಎಂದು ಹೇಳಿದನು.

8 And God speaketh unto Noah, and unto his sons with him, saying,ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ--

9 `And I, lo, I am establishing My covenant with you, and with your seed after you,ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ

10 and with every living creature which `is' with you, among fowl, among cattle, and among every beast of the earth with you, from all who are going out of the ark -- to every beast of the earth.ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ

11 And I have established My covenant with you, and all flesh is not any more cut off by waters of a deluge, and there is not any more a deluge to destroy the earth.'ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.

12 And God saith, `This is a token of the covenant which I am giving between Me and you, and every living creature that `is' with you, to generations age-during;ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು.

13 My bow I have given in the cloud, and it hath been for a token of a covenant between Me and the earth;ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು.

14 and it hath come to pass (in My sending a cloud over the earth) that the bow hath been seen in the cloud,ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು.

15 and I have remembered My covenant which is between Me and you, and every living creature among all flesh, and the waters become no more a deluge to destroy all flesh;ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ.

16 and the bow hath been in the cloud, and I have seen it -- to remember the covenant age-during between God and every living creature among all flesh which `is' on the earth.'ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು.

17 And God saith unto Noah, `This `is' a token of the covenant which I have established between Me and all flesh that `is' upon the earth.'ದೇವರು ನೋಹನಿಗೆ--ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು.

18 And the sons of Noah who are going out of the ark are Shem, and Ham, and Japheth; and Ham is father of Canaan.ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್‌ ಹಾಮ್‌ ಯೆಫೆತ್‌; ಹಾಮನು ಕಾನಾನನ ತಂದೆಯು.

19 These three `are' sons of Noah, and from these hath all the earth been overspread.ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.

20 And Noah remaineth a man of the ground, and planteth a vineyard,ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.

21 and drinketh of the wine, and is drunken, and uncovereth himself in the midst of the tent.ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.

22 And Ham, father of Canaan, seeth the nakedness of his father, and declareth to his two brethren without.ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು.

23 And Shem taketh -- Japheth also -- the garment, and they place on the shoulder of them both, and go backward, and cover the nakedness of their father; and their faces `are' backward, and their father's nakedness they have not seen.ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.

24 And Noah awaketh from his wine, and knoweth that which his young son hath done to him,ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು--

25 and saith: `Cursed `is' Canaan, Servant of servants he is to his brethren.'ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು--

26 And he saith: `Blessed of Jehovah my God `is' Shem, And Canaan is servant to him.ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ.

27 God doth give beauty to Japheth, And he dwelleth in tents of Shem, And Canaan is servant to him.'ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು.

28 And Noah liveth after the deluge three hundred and fifty years;ಪ್ರಳಯವಾದ ಮೇಲೆ ನೋಹನು ಮೂನ್ನೂರ ಐವತ್ತು ವರುಷ ಬದುಕಿದನು.

29 and all the days of Noah are nine hundred and fifty years, and he dieth.ನೋಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಐವತ್ತು ವರುಷ ಗಳಾಗಿದ್ದವು. ತರುವಾಯ ಅವನು ಸತ್ತನು.

Kannada Bible