Genesis 6 - WBT (Kannada)
1 And it came to pass, when men began to multiply on the face of the earth, and daughters were born to them,ತರುವಾಯ ಭೂಮಿಯ ಮೇಲೆ ಜನರು ಹೆಚ್ಚುವದಕ್ಕೆ ಆರಂಭಿಸಿದಾಗ ಅವರಿಗೆ ಕುಮಾರ್ತೆಯರು ಹುಟ್ಟಿದರು.
2 That the sons of God saw the daughters of men that they were fair; and they took them wives of all whom they chose.ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
3 And the LORD said, My spirit shall not always strive with man, for that he also is flesh: yet his days shall be a hundred and twenty years.ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
4 There were giants in the earth in those days; and also after that, when the sons of God came in to the daughters of men, and they bore children to them: the same became mighty men, who were of old, men of renown.ಆ ದಿನಗಳಲ್ಲಿ ಭೂಮಿಯ ಮೇಲೆ ಮಹಾ ಶರೀರಗಳಾದವರು ಇದ್ದರು, ಆಮೇಲೆಯೂ ಇದ್ದರು; ದೇವಕುಮಾರರು ಮನುಷ್ಯ ಕುಮಾರ್ತೆಯರನ್ನು ಕೂಡಿದಾಗ ಅವರಿಗೆ ಮಕ್ಕಳನ್ನು ಹೆತ್ತರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾದ ಪರಾಕ್ರಮಶಾಲಿ ಗಳಾಗಿದ್ದವರು.
5 And GOD saw that the wickedness of man was great in the earth, and that every imagination of the thoughts of his heart was only evil continually.ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
6 And the LORD repented that he had made man on the earth, and it grieved him at his heart.ಕರ್ತನು ಭೂಮಿಯ ಮೇಲೆ ಮನುಷ್ಯನನ್ನು ಉಂಟುಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪ ಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 And the LORD said, I will destroy man whom I have created, from the face of the earth, both man and beast, and the creeping animal, and the fowls of the air; for I repent that I have made them.ಇದಲ್ಲದೆ ಕರ್ತನು--ನಾನು ಸೃಷ್ಟಿಸಿದ ಮನುಷ್ಯ ನನ್ನೂ ಮನುಷ್ಯನ ಸಂಗಡ ಸಕಲ ಮೃಗ, ಕ್ರಿಮಿ, ಆಕಾಶದ ಪಕ್ಷಿಗಳನ್ನೂ ಭೂಮುಖದಿಂದ ನಾಶಮಾಡು ವೆನು; ನಾನು ಅವರನ್ನು ಉಂಟುಮಾಡಿದ್ದಕ್ಕೆ ಅದು ಪಶ್ಚಾತ್ತಾಪಪಡುವಂತೆ ಆಯಿತು ಅಂದನು.
8 But Noah found grace in the eyes of the LORD.ಆದರೆ ನೋಹನಿಗೆ ಕರ್ತನ ದೃಷ್ಟಿಯಲ್ಲಿ ಕೃಪೆ ದೊರಕಿತು.
9 These are the generations of Noah: Noah was a just man, and perfect in his generations, and Noah walked with God.ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.
10 And Noah begat three sons, Shem, Ham, and Japheth.ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬ ಮೂವರು ಕುಮಾರರು ಹುಟ್ಟಿದರು.
11 The earth also was corrupt before God; and the earth was filled with violence.ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು.
12 And God looked upon the earth, and behold, it was corrupt: for all flesh had corrupted his way upon the earth.ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.
13 And God said to Noah, The end of all flesh is come before me; for the earth is filled with violence through them: and behold, I will destroy them with the earth.ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
14 Make thee an ark of gopher-wood: rooms shalt thou make in the ark, and shalt pitch it within and without with pitch.ನೀನು ಗೋಫೆರ್ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.
15 And this is the fashion in which thou shalt make it: the length of the ark shall be three hundred cubits, the breadth of it fifty cubits, and the height of it thirty cubits.ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
16 A window shalt thou make to the ark, and in a cubit shalt thou finish it above; and the door of the ark shalt thou set in its side: with lower, second, and third stories shalt thou make it.ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.
17 And behold, I, even I do bring a flood of waters upon the earth, to destroy all flesh, in which is the breath of life, from under heaven: and every thing that is on the earth shall die.ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
18 But with thee will I establish my covenant: and thou shalt come into the ark, thou, and thy sons, and thy wife, and thy sons' wives with thee.ಆದರೆ ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು; ನೀನೂ ನಿನ್ನ ಹೆಂಡತಿ ಮಕ್ಕಳು ಸೂಸೆಯರ ಸಂಗಡ ನಾವೆ ಯೊಳಗೆ ಬರಬೇಕು.
19 And of every living thing of all flesh, two of every sort shalt thou bring into the ark, to keep them alive with thee: they shall be male and female.ಇದಲ್ಲದೆ ಜೀವವುಳ್ಳ ಎಲ್ಲಾ ಶರೀರಗಳ ಎಲ್ಲಾ ವಿಧವಾದ ಎರಡೆರಡು ನಿನ್ನ ಸಂಗಡ ಜೀವದಲ್ಲಿ ಕಾಪಾಡುವಂತೆ ನೀನು ಅವುಗಳನ್ನು ನಾವೆಯೊಳಗೆ ತರಬೇಕು; ಅವು ಗಂಡು ಹೆಣ್ಣಾಗಿರಬೇಕು.
20 Of fowls after their kind, and of cattle after their kind, of every creeping animal of the earth after its kind, two of every sort shall come to thee, to keep them alive.ಪಶುಪಕ್ಷಿಗಳಲ್ಲಿ ಅವುಗಳ ಜಾತ್ಯಾನುಸಾರವಾಗಿಯೂ ಭೂಮಿಯಲ್ಲಿ ರುವ ಸಕಲ ಕ್ರಿಮಿಗಳಲ್ಲಿಯೂ ಎಲ್ಲಾ ತರವಾದದ್ದರಲ್ಲಿ ಎರಡೆ ರಡು ಜೀವದಲ್ಲಿ ಅವುಗಳನ್ನು ನೀನು ಕಾಪಾಡು ವಂತೆ ನಿನ್ನ ಬಳಿಗೆ ಬರುವವು.
21 And take thou to thee of all food that is eaten, and thou shalt gather it to thee; and it shall be for food for thee, and for them.ತಿನ್ನತಕ್ಕ ಆಹಾರ ವನ್ನೆಲ್ಲಾ ನಿನ್ನ ಕೂಡ ತೆಗೆದುಕೊಂಡು ನಿನ್ನ ಬಳಿಯಲ್ಲಿ ಕೂಡಿಸಿಕೋ; ಅದು ನಿನಗೂ ಅವುಗಳಿಗೂ ಆಹಾರ ವಾಗಿರುವದು ಎಂದು ಹೇಳಿದನು.
22 Thus did Noah; according to all that God commanded him, so did he.ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
Kannada Bible