Genesis 6 - BBE (Kannada)
1 And after a time, when men were increasing on the earth, and had daughters,ತರುವಾಯ ಭೂಮಿಯ ಮೇಲೆ ಜನರು ಹೆಚ್ಚುವದಕ್ಕೆ ಆರಂಭಿಸಿದಾಗ ಅವರಿಗೆ ಕುಮಾರ್ತೆಯರು ಹುಟ್ಟಿದರು.
2 The sons of God saw that the daughters of men were fair; and they took wives for themselves from those who were pleasing to them.ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
3 And the Lord said, My spirit will not be in man for ever, for he is only flesh; so the days of his life will be a hundred and twenty years.ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
4 There were men of great strength and size on the earth in those days; and after that, when the sons of God had connection with the daughters of men, they gave birth to children: these were the great men of old days, the men of great name.ಆ ದಿನಗಳಲ್ಲಿ ಭೂಮಿಯ ಮೇಲೆ ಮಹಾ ಶರೀರಗಳಾದವರು ಇದ್ದರು, ಆಮೇಲೆಯೂ ಇದ್ದರು; ದೇವಕುಮಾರರು ಮನುಷ್ಯ ಕುಮಾರ್ತೆಯರನ್ನು ಕೂಡಿದಾಗ ಅವರಿಗೆ ಮಕ್ಕಳನ್ನು ಹೆತ್ತರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾದ ಪರಾಕ್ರಮಶಾಲಿ ಗಳಾಗಿದ್ದವರು.
5 And the Lord saw that the sin of man was great on the earth, and that all the thoughts of his heart were evil.ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
6 And the Lord had sorrow because he had made man on the earth, and grief was in his heart.ಕರ್ತನು ಭೂಮಿಯ ಮೇಲೆ ಮನುಷ್ಯನನ್ನು ಉಂಟುಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪ ಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 And the Lord said, I will take away man, whom I have made, from the face of the earth, even man and beast and that which goes on the earth and every bird of the air; for I have sorrow for having made them.ಇದಲ್ಲದೆ ಕರ್ತನು--ನಾನು ಸೃಷ್ಟಿಸಿದ ಮನುಷ್ಯ ನನ್ನೂ ಮನುಷ್ಯನ ಸಂಗಡ ಸಕಲ ಮೃಗ, ಕ್ರಿಮಿ, ಆಕಾಶದ ಪಕ್ಷಿಗಳನ್ನೂ ಭೂಮುಖದಿಂದ ನಾಶಮಾಡು ವೆನು; ನಾನು ಅವರನ್ನು ಉಂಟುಮಾಡಿದ್ದಕ್ಕೆ ಅದು ಪಶ್ಚಾತ್ತಾಪಪಡುವಂತೆ ಆಯಿತು ಅಂದನು.
8 But Noah had grace in the eyes of God.ಆದರೆ ನೋಹನಿಗೆ ಕರ್ತನ ದೃಷ್ಟಿಯಲ್ಲಿ ಕೃಪೆ ದೊರಕಿತು.
9 These are the generations of Noah. Noah was an upright man and without sin in his generation: he went in the ways of God.ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.
10 And Noah had three sons, Shem, Ham, and Japheth.ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬ ಮೂವರು ಕುಮಾರರು ಹುಟ್ಟಿದರು.
11 And the earth was evil in God's eyes and full of violent ways.ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು.
12 And God, looking on the earth, saw that it was evil: for the way of all flesh had become evil on the earth.ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.
13 And God said to Noah, The end of all flesh has come; the earth is full of their violent doings, and now I will put an end to them with the earth.ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
14 Make for yourself an ark of gopher wood with rooms in it, and make it safe from the water inside and out.ನೀನು ಗೋಫೆರ್ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.
15 And this is the way you are to make it: it is to be three hundred cubits long, fifty cubits wide, and thirty cubits high.ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
16 You are to put a window in the ark, a cubit from the roof, and a door in the side of it, and you are to make it with a lower and second and third floors.ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.
17 For truly, I will send a great flow of waters over the earth, for the destruction from under the heaven of all flesh in which is the breath of life; everything on the earth will come to an end.ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
18 But with you I will make an agreement; and you will come into the ark, you and your sons and your wife and your sons' wives with you.ಆದರೆ ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು; ನೀನೂ ನಿನ್ನ ಹೆಂಡತಿ ಮಕ್ಕಳು ಸೂಸೆಯರ ಸಂಗಡ ನಾವೆ ಯೊಳಗೆ ಬರಬೇಕು.
19 And you will take with you into the ark two of every sort of living thing, and keep them safe with you; they will be male and female.ಇದಲ್ಲದೆ ಜೀವವುಳ್ಳ ಎಲ್ಲಾ ಶರೀರಗಳ ಎಲ್ಲಾ ವಿಧವಾದ ಎರಡೆರಡು ನಿನ್ನ ಸಂಗಡ ಜೀವದಲ್ಲಿ ಕಾಪಾಡುವಂತೆ ನೀನು ಅವುಗಳನ್ನು ನಾವೆಯೊಳಗೆ ತರಬೇಕು; ಅವು ಗಂಡು ಹೆಣ್ಣಾಗಿರಬೇಕು.
20 Two of every sort of bird and cattle and of every sort of living thing which goes on the earth will you take with you to keep them from destruction.ಪಶುಪಕ್ಷಿಗಳಲ್ಲಿ ಅವುಗಳ ಜಾತ್ಯಾನುಸಾರವಾಗಿಯೂ ಭೂಮಿಯಲ್ಲಿ ರುವ ಸಕಲ ಕ್ರಿಮಿಗಳಲ್ಲಿಯೂ ಎಲ್ಲಾ ತರವಾದದ್ದರಲ್ಲಿ ಎರಡೆ ರಡು ಜೀವದಲ್ಲಿ ಅವುಗಳನ್ನು ನೀನು ಕಾಪಾಡು ವಂತೆ ನಿನ್ನ ಬಳಿಗೆ ಬರುವವು.
21 And make a store of every sort of food for yourself and them.ತಿನ್ನತಕ್ಕ ಆಹಾರ ವನ್ನೆಲ್ಲಾ ನಿನ್ನ ಕೂಡ ತೆಗೆದುಕೊಂಡು ನಿನ್ನ ಬಳಿಯಲ್ಲಿ ಕೂಡಿಸಿಕೋ; ಅದು ನಿನಗೂ ಅವುಗಳಿಗೂ ಆಹಾರ ವಾಗಿರುವದು ಎಂದು ಹೇಳಿದನು.
22 And all these things Noah did; as God said, so he did.ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
Kannada Bible