Bible

Genesis 3 - WEB (Kannada)

1 Now the serpent was more subtle than any animal of the field which Yahweh God had made. He said to the woman, "Yes, has God said, 'You shall not eat of any tree of the garden?'"ಕರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು. ಅದು ಸ್ತ್ರೀಗೆ--ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು.

2 The woman said to the serpent, "Of the fruit of the trees of the garden we may eat,ಆಗ ಸ್ತ್ರೀಯು ಸರ್ಪಕ್ಕೆ--ತೋಟದ ಮರಗಳ ಫಲಗಳನ್ನು ನಾವು ತಿನ್ನಬಹುದು.

3 but of the fruit of the tree which is in the midst of the garden, God has said, 'You shall not eat of it, neither shall you touch it, lest you die.'"ಆದರೆ ತೋಟದ ಮಧ್ಯದಲ್ಲಿ ರುವ ಮರದ ಫಲದ ವಿಷಯದಲ್ಲಿ ದೇವರು--ನೀವು ಸಾಯದ ಹಾಗೆ ಅದನ್ನು ತಿನ್ನಲೂ ಬಾರದು, ಮುಟ್ಟಲೂ ಬಾರದು ಎಂದು ಹೇಳಿದ್ದಾನೆ ಅಂದಳು.

4 The serpent said to the woman, "You won't surely die,ಸರ್ಪವು ಸ್ತ್ರೀಗೆ--ನೀವು ಖಂಡಿತವಾಗಿ ಸಾಯುವದಿಲ್ಲ;

5 for God knows that in the day you eat it, your eyes will be opened, and you will be like God, knowing good and evil."ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು.

6 When the woman saw that the tree was good for food, and that it was a delight to the eyes, and that the tree was to be desired to make one wise, she took of the fruit of it, and ate; and she gave some to her husband with her, and he ate.ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.

7 Both of their eyes were opened, and they knew that they were naked. They sewed fig leaves together, and made themselves aprons.ಆಗ ಅವರಿಬ್ಬರ ಕಣ್ಣುಗಳು ತೆರೆಯಲ್ಪಟ್ಟು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಕೊಂಡರು; ಅವರು ಅಂಜೂರದ ಎಲೆಗಳನ್ನು ಹೊಲಿದುಕೊಂಡು ತಮಗೆ ತಾವೇ ಉಡುಗೆಗಳನ್ನು ಮಾಡಿಕೊಂಡರು.

8 They heard the voice of Yahweh God walking in the garden in the cool of the day, and the man and his wife hid themselves from the presence of Yahweh God among the trees of the garden.ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು.

9 Yahweh God called to the man, and said to him, "Where are you?"ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು.

10 The man said, "I heard your voice in the garden, and I was afraid, because I was naked; and I hid myself."ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು.

11 God said, "Who told you that you were naked? Have you eaten from the tree that I commanded you not to eat from?"ಅದಕ್ಕೆ ಆತನು--ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ತಿಂದಿದ್ದೀಯೋ? ಅನ್ನಲು

12 The man said, "The woman whom you gave to be with me, she gave me of the tree, and I ate."ಅವನು--ನೀನು ನನ್ನ ಸಂಗಡ ಇರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಫಲವನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು.

13 Yahweh God said to the woman, "What is this you have done?" The woman said, "The serpent deceived me, and I ate."ಕರ್ತನಾದ ದೇವರು ಸ್ತ್ರೀಗೆ--ಇದೇನು ನೀನು ಮಾಡಿದ್ದು ಎಂದು ಕೇಳಿದಾಗ ಸ್ತ್ರೀಯು--ಸರ್ಪವು ನನ್ನನ್ನು ವಂಚಿಸಿದ್ದರಿಂದ ನಾನು ತಿಂದೆನು ಅಂದಳು.

14 Yahweh God said to the serpent, "Because you have done this, cursed are you above all cattle, and above every animal of the field. On your belly shall you go, and you shall eat dust all the days of your life.ಆಗ ಕರ್ತನಾದ ದೇವರು ಸರ್ಪಕ್ಕೆ--ನೀನು ಇದನ್ನು ಮಾಡಿದ ಕಾರಣ ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಅಡವಿಯ ಮೃಗಗಳ ಲ್ಲಿಯೂ ಶಪಿಸಲ್ಪಟ್ಟು ಜೀವದಿಂದಿರುವ ದಿವಸಗಳಲ್ಲೆಲ್ಲಾ ಹೊಟ್ಟೆಯಿಂದ ಹರಿದಾಡಿ ಮಣ್ಣನ್ನು ತಿನ್ನುವಿ.

15 I will put enmity between you and the woman, and between your offspring and her offspring. He will bruise your head, and you will bruise his heel."ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು, ಕಚ್ಚುವಿ ಅಂದನು.

16 To the woman he said, "I will greatly multiply your pain in childbirth. In pain you will bring forth children. Your desire will be for your husband, and he will rule over you."ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು, ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ, ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು; ಅವನು ನಿನ್ನನ್ನು ಆಳುವನು ಅಂದನು.

17 To Adam he said, "Because you have listened to your wife's voice, and have eaten of the tree, of which I commanded you, saying, 'You shall not eat of it,' cursed is the ground for your sake. In toil you will eat of it all the days of your life.ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.

18 Thorns also and thistles will it bring forth to you; and you will eat the herb of the field.ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ.

19 By the sweat of your face will you eat bread until you return to the ground, for out of it you were taken. For you are dust, and to dust you shall return."ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.

20 The man called his wife Eve, because she was the mother of all living.ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಯಾಕಂದರೆ ಆಕೆಯು ಜೀವವುಳ್ಳ ವರಿಗೆಲ್ಲಾ ತಾಯಿಯಾಗಿದ್ದಾಳೆ.

21 Yahweh God made coats of skins for Adam and for his wife, and clothed them.ಕರ್ತನಾದ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ಅವರಿಗೆ ತೊಡಿಸಿದನು.

22 Yahweh God said, "Behold, the man has become like one of us, knowing good and evil. Now, lest he put forth his hand, and also take of the tree of life, and eat, and live forever..."ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.

23 Therefore Yahweh God sent him forth from the garden of Eden, to till the ground from whence he was taken.ಆದದರಿಂದ ಕರ್ತನಾದ ದೇವರು ಅವನನ್ನು ಯಾವದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯಮಾಡುವದಕ್ಕೆ ಏದೆನ್‌ ತೋಟದಿಂದ ಹೊರಡಿಸಿಬಿಟ್ಟನು.

24 So he drove out the man; and he placed Cherubs at the east of the garden of Eden, and the flame of a sword which turned every way, to guard the way to the tree of life.ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು.

Kannada Bible