Genesis 24 - DBY (Kannada)
1 And Abraham was old, [and] advanced in age; and Jehovah had blessed Abraham in all things.ಅಬ್ರಹಾಮನು ಮುದುಕನೂ ದಿನಗತಿಸಿದವನೂ ಆಗಿದ್ದನು. ಕರ್ತನು ಅಬ್ರಹಾಮ ನನ್ನು ಎಲ್ಲಾದರಲ್ಲಿ ಆಶೀರ್ವದಿಸಿದನು.
2 And Abraham said to his servant, the eldest of his house, who ruled over all that he had, Put thy hand, I pray thee, under my thigh,ಆಗ ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರೀ ಸೇವಕನಿಗೆ ಹೇಳಿದ್ದೇ ನಂದರೆ--ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು;
3 and I will make thee swear by Jehovah, the God of the heavens and the God of the earth, that thou take not a wife for my son of the daughters of the Canaanites, among whom I am dwelling;ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ
4 but thou shalt go to my land and to my kindred, and take a wife for my son Isaac.ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗಿ ನನ್ನ ಮಗನಾದ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಳ್ಳ ಬೇಕೆಂದೂ ಪರಲೋಕ ಭೂಲೋಕಗಳ ದೇವರಾಗಿ ರುವ ಕರ್ತನ ಮೇಲೆ ನೀನು ಆಣೆಯಿಡುವಂತೆ ಮಾಡುತ್ತೇನೆ ಅಂದನು.
5 And the servant said to him, Perhaps the woman will not be willing to follow me to this land: must I, then, bring thy son again in any case to the land from which thou hast removed?ಆ ಸೇವಕನು ಅವನಿಗೆ-- ಒಂದು ವೇಳೆ ನನ್ನ್ನ ಹಿಂದೆ ಈ ದೇಶಕ್ಕೆ ಬರುವಹಾಗೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದರೆ ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರಿಗಿ ಕರಕೊಂಡು ಹೋಗ ಬೇಕೋ ಅಂದನು.
6 And Abraham said to him, Beware that thou bring not my son thither again.ಅಬ್ರಹಾಮನು ಅವನಿಗೆ-- ನನ್ನ ಮಗನನ್ನು ತಿರಿಗಿ ಅಲ್ಲಿಗೆ ಕರಕೊಂಡು ಹೋಗಲೇ ಬಾರದು.
7 Jehovah the God of the heavens, who took me out of my father's house, and out of the land of my nativity, and who has spoken to me, and who has sworn to me, saying, Unto thy seed will I give this land -- he will send his angel before thee, that thou mayest take a wife for my son thence.ನನ್ನ ತಂದೆಯ ಮನೆಯಿಂದಲೂ ಬಂಧು ಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು ನನ್ನ ಸಂಗಡ ಮಾತನಾಡಿ--ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಕರ್ತನು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸುವನು.
8 And if the woman be not willing to follow thee, then thou shalt be quit of this my oath: only, bring not my son thither again.ಆದರೆ ನಿನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದಿದ್ದರೆ ನನಗೆ ಮಾಡಿದ ಈ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ನನ್ನ ಮಗನನ್ನು ಮಾತ್ರ ಅಲ್ಲಿಗೆ ತಿರಿಗಿ ಕರಕೊಂಡು ಹೋಗಬಾರದು ಅಂದನು.
9 And the servant put his hand under the thigh of Abraham his master, and swore unto him concerning that matter.ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನ ನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು ಆ ವಿಷಯದಲ್ಲಿ ಅವನಿಗೆ ಪ್ರಮಾಣ ಮಾಡಿದನು.
10 And the servant took ten camels of the camels of his master, and departed; now all the treasure of his master was under his hand; and he arose and went to Aram-naharaim, to the city of Nahor.ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ತೆಗೆದುಕೊಂಡು ಹೋದನು. ಅವನ ಯಜಮಾನನ ಎಲ್ಲಾ ಆಸ್ತಿಯು ಅವನ ಕೈಯಲ್ಲಿ ಇತ್ತು. ಅವನು ಎದ್ದು ನಾಹೋರನ ಪಟ್ಟಣವಾದ ಮೆಸೊಪೊತಾಮ್ಯಕ್ಕೆ ಹೋದನು.
11 And he made the camels kneel down outside the city by a well of water, at the time of the evening, when the women came out to draw [water].ಸಂಜೆಯಾದಾಗ ನೀರಿಗಾಗಿ ಸ್ತ್ರೀಯರು ಪಟ್ಟಣದ ಹೊರಗೆ ಬರುವ ಸಮಯದಲ್ಲಿ ಬಾವಿಯ ಬಳಿಯಲ್ಲಿ ಒಂಟೆಗಳು ಮೊಣಕಾಲೂರಿ ಮಲಗುವಂತೆ ಅವನು ಮಾಡಿದನು.
12 And he said, Jehovah, God of my master Abraham, meet me, I pray thee, [with thy blessing] this day, and deal kindly with my master Abraham.ಆಗ ಅವನು--ನನ್ನ ಯಜಮಾನನಾದ ಅಬ್ರಹಾ ಮನ ದೇವರಾಗಿರುವ ಕರ್ತನೇ, ಈಹೊತ್ತು ನನಗೆ ತ್ವರೆಯಾಗಿ ಕಾರ್ಯಕೈಗೂಡುವಂತೆ ಮಾಡಿ ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸು.
13 Behold, I stand [here] by the well of water, and the daughters of the men of the city come out to draw water.ಇಗೋ, ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ; ಊರಿನ ಜನರ ಕುಮಾರ್ತೆಯರು ನೀರು ಸೇದುವದಕ್ಕೆ ಬರುತ್ತಾರೆ.
14 And let it come to pass, [that] the maiden to whom I shall say, Let down thy pitcher, I pray thee, that I may drink, and who will say, Drink, and I will give thy camels drink also, be she whom thou hast appointed for thy servant Isaac; and hereby I shall know that thou hast dealt kindly with my master.ನಾನು ಯಾವ ಹುಡುಗಿಗೆ--(ನೀರು) ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು ಎಂದು ಕೇಳಿ ಕೊಂಡಾಗ --ನೀನು ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವದಕ್ಕೆ ಕೊಡುತ್ತೇನೆ ಎಂದು ಹೇಳುವಳೋ ಆಕೆಯನ್ನೇ ನೀನು ನಿನ್ನ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದಾಗಿರಲಿ. ಇದರಿಂದ ನೀನು ನನ್ನ ಯಜಮಾನನಿಗೆ ದಯೆ ತೋರಿಸಿದ್ದೀ ಎಂದು ನಾನು ತಿಳುಕೊಳ್ಳುವೆನು ಎಂದು ಬೇಡಿಕೊಂಡನು.
15 And it came to pass before he had ended speaking, that behold, Rebecca came out, who was born to Bethuel, son of Milcah the wife of Nahor, Abraham's brother; and [she had] her pitcher upon her shoulder.ಅವನು ಹಾಗೆ ಹೇಳುವದನ್ನು ಮುಗಿಸುವದಕ್ಕಿಂತ ಮುಂಚೆ ಆದದ್ದೇನಂದರೆ, ಇಗೋ, ಅಬ್ರಹಾಮನ ಸಹೋದರ ನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲಿಟ್ಟುಕೊಂಡು ಹೊರಗೆ ಬಂದಳು.
16 And the maiden was very fair in countenance; a virgin, and no man had known her. And she went down to the well, and filled her pitcher, and came up.ಆ ಹುಡುಗಿಯು ನೋಡುವದಕ್ಕೆ ಬಹು ಸುಂದರಿಯಾಗಿದ್ದು ಯಾವ ಮನುಷ್ಯನು ಅರಿಯದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಗೆ ಇಳಿದುಹೋಗಿ ತನ್ನ ಕೊಡವನ್ನು ತುಂಬಿಕೊಂಡು ಮೇಲೆ ಬಂದಳು.
17 And the servant ran to meet her, and said, Let me, I pray thee, sip a little water out of thy pitcher.ಆಗ ಆ ಸೇವಕನು ಅವಳೆದುರಿಗೆ ಓಡಿಹೋಗಿ--ನಿನ್ನ ಕೊಡದೊಳಗಿನಿಂದ ಸ್ವಲ್ಪ ನೀರು ನನಗೆ ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಂಡನು.
18 And she said, Drink, my lord! And she hasted and let down her pitcher on her hand, and gave him to drink.ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು.
19 And when she had given him enough to drink, she said, I will draw [water] for thy camels also, until they have drunk enough.ಅವನಿಗೆ ಕುಡಿಯು ವದಕ್ಕೆ ಕೊಟ್ಟನಂತರ ಆಕೆಯು--ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ತರುತ್ತೇನೆ ಎಂದು ಹೇಳಿದಳು.
20 And she hasted and emptied her pitcher into the trough, and ran again to the well to draw [water]; and she drew for all his camels.ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ದೋಣಿಯಲ್ಲಿ ಹೊಯ್ದು ತಿರಿಗಿ ತರುವದಕ್ಕೆ ಬಾವಿಯ ಬಳಿಗೆ ಓಡಿ ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ತಂದುಕೊಟ್ಟಳು.
21 And the man was astonished at her, remaining silent, to know whether Jehovah had made his journey prosperous or not.ಆಗ ಕರ್ತನು ತನ್ನ ಪ್ರಯಾಣವನ್ನು ಸಫಲಮಾಡಿದನೋ ಇಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ಆ ಮನುಷ್ಯನು ಆಕೆಯ ವಿಷಯವಾಗಿ ಆಶ್ಚರ್ಯ ಪಡುತ್ತಾ ಮೌನವಾಗಿದ್ದನು.
22 And it came to pass when the camels had drunk enough, that the man took a gold ring, of half a shekel weight, and two bracelets for her hands, ten [shekels] weight of gold,ಒಂಟೆಗಳು ಕುಡಿದ ಮೇಲೆ ಆ ಮನುಷ್ಯನು ಅರ್ಧ ಶೆಕೆಲ್ ತೂಕದ ಚಿನ್ನದ ವಾಲೆಯನ್ನು ಹತ್ತು ಶೆಕೆಲ್ ತೂಕದ ಎರಡು ಕಡಗಗಳನ್ನು ಆಕೆಯ ಕೈಗಳಿಗೆ ಕೊಟ್ಟನು.
23 and said, Whose daughter art thou? tell me, I pray thee. Is there room [in] thy father's house for us to lodge?ಅವನು--ನೀನು ಯಾರ ಮಗಳು? ನನಗೆ ಹೇಳು; ನಿನ್ನ ತಂದೆಯ ಮನೆಯಲ್ಲಿ ಇಳುಕೊಳ್ಳುವದಕ್ಕೆ ನಮಗೆ ಸ್ಥಳವಿದೆಯೋ ಅಂದನು.
24 And she said to him, I am the daughter of Bethuel the son of Milcah, whom she bore to Nahor.ಅದಕ್ಕೆ ಆಕೆಯು ನಾನು ನಾಹೋರನಿಗೆ ಮಿಲ್ಕಳು ಹೆತ್ತ ಬೆತೂವೇಲನ ಮಗಳು ಅಂದಳು.
25 And she said to him, There is straw, and also much provender with us; also room to lodge.ಇದಲ್ಲದೆ ಆಕೆಯು ಅವನಿಗೆ--ಹುಲ್ಲೂ ಮೇವೂ ನಮ್ಮಲ್ಲಿ ಸಾಕಷ್ಟು ಇವೆ; ನೀವು ಇಳುಕೊಳ್ಳುವದಕ್ಕೂ ಸ್ಥಳವಿದೆ ಎಂದು ಅವನಿಗೆ ಹೇಳಿದಳು.
26 And the man stooped, and bowed down before Jehovah,ಆಗ ಆ ಮನುಷ್ಯನು ಬಾಗಿ ಕರ್ತನಿಗೆ ಅಡ್ಡಬಿದ್ದು ಆತನನ್ನು ಆರಾಧಿ ಸುತ್ತಾ--
27 and said, Blessed be Jehovah, God of my master Abraham, who has not withdrawn his loving-kindness and his faithfulness from my master; I being in the way, Jehovah has led me to the house of my master's brethren.ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರು ಸ್ತುತಿಹೊಂದಲಿ; ಆತನು ನನ್ನ ಯಜಮಾನನನ್ನು ಅನಾಥನನ್ನಾಗಿ ಬಿಡದೆ ತನ್ನ ಕೃಪೆಯನ್ನೂ ಸತ್ಯವನ್ನೂ ತೋರಿಸಿದ್ದಾನೆ. ನಾನು ಮಾರ್ಗದಲ್ಲಿರುವಾಗ ಕರ್ತನು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೆ ನಡಿಸಿದ್ದಾನೆ ಅಂದನು.
28 And the maiden ran and told these things to her mother's house.ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿ ತಿಳಿಸಿದಳು.
29 And Rebecca had a brother, named Laban; and Laban ran out to the man, to the well.ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿಬಂದನು.
30 And it came to pass when he saw the ring and the bracelets on his sister's hand, and when he heard the words of Rebecca his sister, saying, Thus spoke the man to me -- that he came to the man, and behold, he was standing by the camels, by the well.ಅವನು ವಾಲೆಯನ್ನೂ ತನ್ನ ಸಹೋದರಿಯ ಕೈಗಳಲ್ಲಿದ್ದ ಕಡಗಗಳನ್ನೂ ನೋಡಿ ಆ ಮನುಷ್ಯನು ತನ್ನ ಕೂಡ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿಯಾದ ರೆಬೆಕ್ಕಳ ಮಾತುಗಳನ್ನು ಕೇಳಿ ಆ ಮನುಷ್ಯನ ಬಳಿಗೆ ಬಂದನು. ಇಗೋ, ಅವನು ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
31 And he said, Come in, blessed of Jehovah! why standest thou outside? for I have prepared the house, and room for the camels.ಲಾಬಾನನು ಅವನಿಗೆ--ಕರ್ತನಿಂದ ಆಶೀರ್ವದಿಸಲ್ಪಟ್ಟವನೇ, ಒಳಗೆ ಬಾ, ಯಾಕೆ ಹೊರಗೆ ನಿಂತಿರುತ್ತೀ? ನಾನು ಮನೆ ಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಅಂದನು.
32 And the man came into the house; and he ungirded the camels, and gave the camels straw and provender, and water to wash his feet, and the feet of the men who were with him.ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು.
33 And there was set [meat] before him to eat; but he said, I will not eat until I have made known my business. And he said, Speak on.ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
34 And he said, I am Abraham's servant.ಅವನು--ನಾನು ಅಬ್ರಹಾಮನ ಸೇವಕನು.
35 And Jehovah has blessed my master greatly, and he is become great; and he has given him sheep and cattle, and silver and gold, and bondmen and bondwomen, and camels and asses.ಕರ್ತನು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ದೊಡ್ಡವನಾದನು. ಆತನು ಅವನಿಗೆ ಕುರಿದನಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಟ್ಟಿದ್ದಾನೆ.
36 And Sarah, my master's wife, bore a son to my master after she had grown old; and unto him has he given all that he has.ಇದಲ್ಲದೆ ನನ್ನ ಯಜಮಾನನ ಹೆಂಡತಿಯಾದ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
37 And my master made me swear, saying, Thou shalt not take a wife for my son of the daughters of the Canaanite, in whose land I am dwelling;ನನ್ನ ಯಜಮಾನನು--ನಾನು ಯಾರ ದೇಶದಲ್ಲಿ ವಾಸ ಮಾಡುತ್ತೇನೋ ಆ ಕಾನಾನ್ಯರ ಕುಮಾರ್ತೆಗಳಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಡ;
38 but thou shalt by all means go to my father's house and to my family, and take a wife for my son.ಆದರೆ ನೀನು ನನ್ನ ತಂದೆಯ ಮನೆಗೂ ನನ್ನ ಬಂಧುಗಳ ಬಳಿಗೂ ಹೋಗಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಕೆಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.
39 And I said to my master, Perhaps the woman will not follow me?ನಾನು ನನ್ನ ಯಜಮಾನನಿಗೆ--ಒಂದು ವೇಳೆ ಆ ಸ್ತ್ರೀ ನನ್ನ ಹಿಂದೆಬಾರದೆ ಹೋದಾಳು ಅಂದಾಗ
40 And he said to me, Jehovah, before whom I have walked, will send his angel with thee, and prosper thy way, that thou mayest take a wife for my son of my family, and out of my father's house.ಅವನು ನನಗೆ--ನಾನು ಯಾರ ಮುಂದೆ ನಡೆದುಕೊಳ್ಳುತ್ತೇನೋ ಆ ಕರ್ತನು ತನ್ನ ದೂತನನ್ನು ನಿನ್ನ ಸಂಗಡ ಕಳುಹಿಸಿ ನೀನು ನನ್ನ ಬಂಧುಗಳೊಳಗಿಂದಲೂ ನನ್ನ ತಂದೆಯ ಮನೆಯೊಳಗಿಂದಲೂ ನನ್ನ ಮಗನಿಗೋಸ್ಕರ ಹೆಂಡತಿಯನ್ನು ತಕ್ಕೊಳ್ಳುವ ಹಾಗೆ ನಿನ್ನ ಮಾರ್ಗವನ್ನು ಸಫಲಮಾಡುವನು;
41 Then shalt thou be quit of my oath, when thou shalt have come to my family. And if they give thee not [one], thou shalt be quit of my oath.ಹಾಗೆ ಆದರೆ ನನ್ನ ಪ್ರಮಾಣದಿಂದ ಬಿಡುಗಡೆಯಾಗಿರುವಿ; ನೀನು ನನ್ನ ಬಂಧುಗಳ ಬಳಿಗೆ ಬಂದಾಗ ಅವರು ನಿನಗೆ ಆ ಹುಡುಗಿಯನ್ನು ಕೊಡದೆ ಹೋದರೆ ನನ್ನ ಪ್ರಮಾಣದಿಂದ ಬಿಡುಗಡೆಯಾಗಿರುವಿ ಅಂದನು.
42 And I came this day to the well, and said, Jehovah, God of my master Abraham, if now thou wilt prosper my way on which I go,ಈ ದಿನ ನಾನು ಆ ಬಾವಿಯ ಬಳಿಗೆ ಬಂದಾಗ --ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರೇ, ನಾನು ಹೋಗುವ ಮಾರ್ಗ ವನ್ನು ನೀನು ಸಫಲ ಮಾಡುವದಾದರೆ
43 behold, I stand by the well of water, and let it come to pass that the damsel who cometh forth to draw [water], and to whom I shall say, Give me, I pray thee, a little water out of thy pitcher to drink,ಇಗೋ, ನಾನು ಈಗ ನೀರಿನ ಬಾವಿಯ ಬಳಿಯಲ್ಲಿ ನಿಂತಿದ್ದೇನೆ; ಹೀಗಿರುವಲ್ಲಿ ಯಾವ ಕನ್ನಿಕೆಯು ನೀರು ತರಲು ಹೊರಗೆ ಬರುವಾಗ ನಾನು ಆಕೆಗೆ--ನಿನ್ನ ಕೊಡದಿಂದ ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು ಎಂದು ಹೇಳುವಾಗ
44 and she shall say to me, Both drink thou, and I will also draw for thy camels -- that she should be the woman whom Jehovah hath appointed for my master's son.ಆಕೆಯು ನನಗೆ--ನೀನು ಕುಡಿ, ನಿನ್ನ ಒಂಟೆಗಳಿಗೂ ಕೊಡುವೆನು ಎಂದು ನನಗೆ ಹೇಳುವಳೋ ಆಕೆಯೇ ಕರ್ತನಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾ ಗಿರಲಿ ಎಂದು ಅಂದುಕೊಂಡೆನು.
45 Before I ended speaking in my heart, behold, Rebecca came forth with her pitcher on her shoulder, and went down to the well, and drew [water]; and I said to her, Give me, I pray thee, to drink.ನಾನು ನನ್ನ ಹೃದಯದಲ್ಲಿ ಅಂದುಕೊಂಡು ಮುಗಿಸುವದರೊಳಗಾಗಿ ಇಗೋ, ರೆಬೆಕ್ಕಳು ತನ್ನ ಹೆಗಲಿನ ಮೇಲೆ ಕೊಡವನ್ನಿಟ್ಟು ಕೊಂಡು ಬಂದಳು. ಆಕೆಯು ಬಾವಿಯಲ್ಲಿ ಇಳಿದು ನೀರನ್ನು ತುಂಬಿಕೊಂಡು ತಂದಾಗ ನಾನು--ನನಗೆ ಕುಡಿಯುವದಕ್ಕೆ ನೀರು ಕೊಡು ಎಂದು ಆಕೆಯನ್ನು ಕೇಳಿದೆನು.
46 And she hasted and let down her pitcher from her [shoulder], and said, Drink, and I will give thy camels drink also. And I drank; and she gave the camels drink also.ಅದಕ್ಕೆ ಆಕೆಯು ತ್ವರೆಪಟ್ಟು ತನ್ನ ಕೊಡವನ್ನು ಹೆಗಲಿನಿಂದ ಇಳಿಸಿ--ನೀನು ಕುಡಿ ಮತ್ತು ನಿನ್ನ ಒಂಟೆಗಳಿಗೂ ಕುಡಿಸುವೆನು ಅಂದಳು. ಆಗ ನಾನು ಕುಡಿದೆನು; ಆಕೆಯು ಒಂಟೆಗ ಳಿಗೂ ಕುಡಿಸಿದಳು.
47 And I asked her, and said, Whose daughter art thou? And she said, The daughter of Bethuel, Nahor's son, whom Milcah bore to him. And I put the ring on her nose, and the bracelets on her hands.ನಾನು ಆಕೆಗೆ--ನೀನು ಯಾರ ಮಗಳು ಎಂದು ಕೇಳಿದೆನು. ಅದಕ್ಕವಳು--ನಾಹೋರ ನಿಗೆ ಮಿಲ್ಕಳು ಹೆತ್ತ ಮಗನಾದ ಬೆತೊವೇಲನ ಮಗಳು ಅಂದಳು. ಆಗ ನಾನು ಆಕೆಗೆ ವಾಲೆಯನ್ನೂ ಕೈಗಳಿಗೆ ಕಡಗಗಳನ್ನೂ ಇಟ್ಟು
48 And I stooped, and bowed down before Jehovah; and I blessed Jehovah, God of my master Abraham, who has led me the right way to take my master's brother's daughter for his son.ನನ್ನ ತಲೆಯನ್ನು ಬಾಗಿಸಿ ಕರ್ತನನ್ನು ಆರಾಧಿಸಿ ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿ ಯಾಗಿ ತಕ್ಕೊಳ್ಳುವದಕ್ಕೆ ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು.
49 And now, if ye will deal kindly and truly with my master, tell me; and if not, tell me; and I will turn to the right hand or to the left.ಆದ ದರಿಂದ ನೀವು ನನ್ನ ಯಜಮಾನನೊಂದಿಗೆ ದಯ ದಿಂದಲೂ ಸತ್ಯದಿಂದಲೂ ವರ್ತಿಸುವದಾದರೆ ನನಗೆ ತಿಳಿಸಿರಿ, ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ ಎಡಗಡೆಯಾದರೂ ತಿರುಗಿಕೊಳ್ಳುವೆನು ಅಂದನು.
50 And Laban and Bethuel answered and said, The thing proceeds from Jehovah: we cannot speak to thee bad or good.ಲಾಬಾನನೂ ಬೆತೊವೇಲನೂ ಪ್ರತ್ಯುತ್ತರವಾಗಿ--ಕರ್ತನಿಂದ ಆದ ಕಾರ್ಯಕ್ಕೆ ನಾವು ಕೆಟ್ಟದ್ದ ನ್ನಾದರೂ ಒಳ್ಳೆಯದನ್ನಾದರೂ ನಿನಗೆ ಹೇಳಲಾರೆವು.
51 Behold, Rebecca is before thee: take [her], and go away; and let her be wife of thy master's son, as Jehovah has said.ಇಗೋ, ರೆಬೆಕ್ಕಳು ನಿನ್ನ ಮುಂದೆ ಇದ್ದಾಳೆ. ಆಕೆಯನ್ನು ಕರೆದುಕೊಂಡು ಹೋಗು. ಕರ್ತನು ಹೇಳಿದಂತೆ ಆಕೆಯು ನಿನ್ನ ಯಜಮಾನನ ಮಗನಿಗೆ ಹೆಂಡತಿಯಾಗಿರಲಿ ಅಂದರು.
52 And it came to pass, when Abraham's servant heard their words, that he bowed down to the earth before Jehovah.ಅಬ್ರಹಾಮನ ಸೇವಕನು ಅವರ ಮಾತುಗಳನ್ನು ಕೇಳಿದಾಗ ಕರ್ತನ ಮುಂದೆ ಅಡ್ಡಬಿದ್ದು ಆತನನ್ನು ಆರಾಧಿಸಿದನು.
53 And the servant brought forth silver articles, and gold articles, and clothing, and he gave [them] to Rebecca; and he gave to her brother, and to her mother, precious things.ನಂತರ ಆ ಸೇವಕನು ಬೆಳ್ಳಿ ಬಂಗಾರದ ಒಡವೆ ಗಳನ್ನೂ ವಸ್ತ್ರಗಳನ್ನೂ ತಂದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ ತಾಯಿಗೂ ಅಮೂಲ್ಯ ವಾದ ವಸ್ತುಗಳನ್ನು ಕೊಟ್ಟನು.
54 And they ate and drank, he and the men that were with him, and lodged. And they rose up in the morning; and he said, Send me away to my master.ಅವನೂ ಅವನ ಸಂಗಡ ಇದ್ದ ಮನುಷ್ಯರೂ ಊಟ ಮುಗಿಸಿ ರಾತ್ರಿ ಯೆಲ್ಲಾ ಅಲ್ಲಿ ಇದ್ದರು. ಬೆಳಿಗ್ಗೆ ಎದ್ದ ಮೇಲೆ ಅವನು--ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ ಅಂದನು.
55 And her brother and her mother said, Let the maiden abide with us [some] days, or [say] ten; after that she shall go.ಅದಕ್ಕೆ ಆಕೆಯ ಸಹೋ ದರನೂ ತಾಯಿಯೂ--ಹುಡುಗಿಯು ಕೆಲವು ದಿನ, ಅಂದರೆ ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇರಲಿ; ತರುವಾಯ ಹೋಗಲಿ ಅಂದರು.
56 And he said to them, Do not hinder me, seeing Jehovah has prospered my way: send me away, and I will go to my master.ಆಗ ಅವನು ಅವರಿಗೆ--ನನ್ನನ್ನು ತಡೆಯಬೇಡಿರಿ; ಕರ್ತನು ನನ್ನ ಮಾರ್ಗವನ್ನು ಸಫಲಮಾಡಿದ್ದಾನಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವ ಹಾಗೆ ನನ್ನನ್ನು ಕಳುಹಿಸಿರಿ ಅಂದನು.
57 And they said, Let us call the maiden and inquire at her mouth.ಆಗ ಅವರು--ನಾವು ಹುಡುಗಿಯನ್ನು ಕರೆದು ವಿಚಾರಿಸೋಣ ಅಂದರು.
58 And they called Rebecca and said to her, Wilt thou go with this man? And she said, I will go.ಅವರು ರೆಬೆಕ್ಕಳನ್ನು ಕರೆದು ಆಕೆಗೆ--ಈ ಮನುಷ್ಯನ ಸಂಗಡ ಹೋಗುವಿಯೋ ಎಂದು ಕೇಳಿದರು. ಅದಕ್ಕೆ ಆಕೆಯು--ನಾನು ಹೋಗುತ್ತೇನೆ ಅಂದಳು.
59 And they sent away Rebecca their sister, and her nurse, and Abraham's servant, and his men.ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಕಳುಹಿಸಿದರು.
60 And they blessed Rebecca, and said to her, Thou art our sister; mayest thou become thousands of tens of thousands; and may thy seed possess the gate of their enemies!ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.
61 And Rebecca arose, and her maids, and they rode upon the camels, and followed the man. And the servant took Rebecca, and went away.ಆಗ ರೆಬೆಕ್ಕಳು ಎದ್ದು ಆಕೆಯೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು.
62 And Isaac had just returned from Beer-lahai-roi; for he was dwelling in the south country.ಆಗ ಇಸಾಕನು ಲಹೈರೋಯಿ ಎಂಬ ಬಾವಿಯ ಮಾರ್ಗವಾಗಿ ಬಂದನು. ಅವನು ದಕ್ಷಿಣ ದೇಶದಲ್ಲಿ ವಾಸವಾಗಿದ್ದನು.
63 And Isaac had gone out to meditate in the fields toward the beginning of evening. And he lifted up his eyes and saw, and behold, camels were coming.ಇಸಾಕನು ಸಾಯಂಕಾಲ ಹೊಲ ದಲ್ಲಿ ಧ್ಯಾನಮಾಡುವದಕ್ಕೆ ಹೋದಾಗ ತನ್ನ ಕಣ್ಣುಗಳ ನ್ನೆತ್ತಿ ನೋಡಲು ಅಗೋ, ಒಂಟೆಗಳು ಬರುತ್ತಿದ್ದವು.
64 And Rebecca lifted up her eyes and saw Isaac, and she sprang off the camel.ರೆಬೆಕ್ಕಳು ತನ್ನ ಕಣ್ಣುಗಳನ್ನೆತ್ತಿ ಇಸಾಕನನ್ನು ನೋಡಿ ದಾಗ ಒಂಟೆಯಿಂದ ಇಳಿದಳು.
65 And she had said to the servant, Who is the man that is walking in the fields to meet us? And the servant said, That is my master! Then she took the veil, and covered herself.ಆಕೆಯು ಆ ಸೇವಕನಿಗೆ--ಹೊಲದಲ್ಲಿ ನಮಗೆ ಎದುರಾಗಿ ಬರುವ ಆ ಮನುಷ್ಯನು ಯಾರು ಅಂದಳು; ಅದಕ್ಕೆ ಸೇವ ಕನು--ಅವನೇ ನನ್ನ ಯಜಮಾನನು ಅಂದಾಗ ಆಕೆಯು ಮುಸುಕು ಹಾಕಿಕೊಂಡಳು.
66 And the servant told Isaac all things that he had done.ಆಗ ಸೇವಕನು ಇಸಾಕನಿಗೆ ತಾನು ಮಾಡಿದ ಕಾರ್ಯಗಳನ್ನೆಲ್ಲಾ ತಿಳಿಸಿದನು.
67 And Isaac led her into his mother Sarah's tent; and he took Rebecca, and she became his wife, and he loved her. And Isaac was comforted after [the death of] his mother.ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.
Kannada Bible