Genesis 20 - WBT (Kannada)
1 And Abraham journeyed from thence towards the south country, and dwelt between Kadash and Shur, and sojourned in Gerar.ಅಬ್ರಹಾಮನು ಅಲ್ಲಿಂದ ದಕ್ಷಿಣ ದೇಶದ ಕಾದೇಶಿಗೆ ಪ್ರಯಾಣಮಾಡಿ, ಶೂರಿಗೆ ಮಧ್ಯದಲ್ಲಿ ವಾಸಿಸಿ ಗೆರಾರಿನಲ್ಲಿ ಪ್ರವಾಸಿಯಾಗಿದ್ದನು.
2 And Abraham said of Sarah his wife, she is my sister: And Abimelech king of Gerar sent and took Sarah.ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ವಿಷಯವಾಗಿ--ಅವಳು ನನ್ನ ತಂಗಿ ಎಂದು ಹೇಳಿ ದನು. ಆದದರಿಂದ ಗೆರಾರಿನ ಅರಸನಾದ ಅಬೀಮೆಲೆ ಕನು ಸಾರಳನ್ನು ಕರೆಯಿಸಿ ತೆಗೆದುಕೊಂಡನು.
3 But God came to Abimelech in a dream by night, and said to him, Behold, thou art but a dead man, on account of the woman whom thou hast taken: for she is a man's wife.ಆಗ ದೇವರು ರಾತ್ರಿ ಕನಸಿನಲ್ಲಿ ಅಬೀಮೆಲೆಕನ ಬಳಿಗೆ ಬಂದು--ಇಗೋ, ನೀನು ತಕ್ಕೊಂಡ ಆ ಸ್ತ್ರೀಗೋಸ್ಕರ ನೀನು ಸತ್ತವನೇ; ಆಕೆಯು ಒಬ್ಬ ಮನುಷ್ಯನ ಹೆಂಡತಿ ಎಂದು ಅವನಿಗೆ ಹೇಳಿದನು.
4 But Abimelech had not come near her: and he said, Lord, wilt thou also slay a righteous nation?ಆದರೆ ಅಬೀಮೆಲೆಕನು ಆಕೆಯ ಸವಿಾಪಕ್ಕೆ ಬಂದಿರಲಿಲ್ಲ. ಆದದರಿಂದ ಅವನು--ಕರ್ತನೇ, ನೀತಿಯುಳ್ಳ ಜನಾಂಗವನ್ನು ಸಹ ಕೊಲ್ಲುವಿಯೋ?
5 Said he not to me, She is my sister? and she, even she herself said, He is my brother: in the integrity of my heart, and innocence of my hands have I done this.ಅವನು ನನಗೆ--ಅವಳು ನನ್ನ ತಂಗಿ ಎಂದು ಹೇಳಲಿಲ್ಲವೋ? ಈಕೆಯೂ--ಅವನು ನನ್ನ ಅಣ್ಣನು ಎಂದು ಹೇಳಿದ್ದಾಳೆ; ಆದದರಿಂದ ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಕೈಯಿಂದಲೂ ಇದನ್ನು ಮಾಡಿದ್ದೇನೆ ಅಂದನು.
6 And God said to him in a dream, Yea, I know that thou didst this in the integrity of thy heart; for I also withheld thee from sinning against me: therefore I suffered thee not to touch her.ದೇವರು ಕನಸಿನಲ್ಲಿ ಅವನಿಗೆ--ಹೌದು, ನೀನು ಯಥಾರ್ಥವಾದ ಹೃದಯ ದಿಂದ ಇದನ್ನು ಮಾಡಿದ್ದೀ ಎಂದು ನನಗೂ ತಿಳಿದದೆ. ಆದದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದ ಹಾಗೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟುವದಕ್ಕೆ ಬಿಡಲಿಲ್ಲ.
7 Now therefore restore to the man his wife, for he is a prophet, and he shall pray for thee, and thou shalt live: and if thou shalt not restore her, know thou that thou shalt surely die, thou and all that are thine.ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸು; ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವ ಹಾಗೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ ಅಂದನು.
8 Therefore Abimelech rose early in the morning, and called all his servants, and told all these things in their ears: and the men were greatly afraid.ಅಬೀಮೆಲೆಕನು ಬೆಳಿಗ್ಗೆ ಎದ್ದು ತನ್ನ ಸೇವಕರೆಲ್ಲರನ್ನು ಕರೆದು ಇವುಗಳನ್ನೆಲ್ಲ ಅವರಿಗೆ ಹೇಳಿದನು; ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು.
9 Then Abimelech called Abraham, and said to him, What has thou done to us? and in what have I offended thee, that thou hast brought on me and on my kingdom a great sin? thou hast done deeds to me that ought not to be done.ಅಬೀಮೆಲೆಕನು ಅಬ್ರಹಾ ಮನನ್ನು ಕರೆದು ಅವನಿಗೆ--ನೀನು ನಮಗೆ ಮಾಡಿ ದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಾನು ನಿನಗೆ ಏನು ಅಪರಾಧ ಮಾಡಿದ್ದೇನೆ? ನನಗೆ ನೀನು ಮಾಡಬಾರದ ಕಾರ್ಯಗಳನ್ನು ಮಾಡಿದ್ದೀ ಅಂದನು.
10 And Abimelech said to Abraham, What sawest thou, that thou hast done this thing?ಅಬೀಮೆಲೆಕನು ಅಬ್ರಹಾ ಮನಿಗೆ--ನೀನು ಇದನ್ನು ಮಾಡುವದಕ್ಕೆ ಏನು ನೋಡಿದೆ ಅಂದಾಗ
11 And Abraham said, Because I thought, surely the fear of God is not in this place; and they will slay me for my wife's sake.ಅಬ್ರಹಾಮನು--ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ಅಂದುಕೊಂಡೆನು.
12 And yet indeed she is my sister: she is the daughter of my father, but not the daughter of my mother; and she became my wife.ಇದಲ್ಲದೆ ನಿಶ್ಚಯವಾಗಿ ಅವಳು ನನ್ನ ತಂಗಿ; ಆಕೆಯು ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ; ನನಗೆ ಹೆಂಡತಿಯಾದಳು.
13 And it came to pass, when God caused me to wander from my father's house, that I said to her, This is thy kindness which thou shalt show to me; At every place whither we shall come, say of me, He is my brother.ದೇವರು ನನ್ನ ತಂದೆಯ ಮನೆಯಿಂದ ನನ್ನನ್ನು ದೇಶಾಂತರಕ್ಕೆ ಹೋಗಲು ಕರೆದಾಗ ನಾನು ಅವಳಿಗೆ--ನೀನು ನನಗೆ ತೋರಿಸತಕ್ಕ ದಯವು ಯಾವದಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ-- ಇವನು ನನ್ನ ಅಣ್ಣನೆಂಬದಾಗಿ ಹೇಳೆಂದು ಅಂದೆನು.
14 And Abimelech took sheep, and oxen, and men-servants, and women-servants, and gave them to Abraham, and restored to him Sarah his wife.ಆಗ ಅಬೀಮೆಲೆಕನು ಕುರಿಎತ್ತುಗಳನ್ನೂ ದಾಸ ದಾಸಿಯರನ್ನೂ ಅಬ್ರಹಾಮನಿಗೆ ಕೊಟ್ಟು ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿದನು.
15 And Abimelech said, Behold, my land is before thee: dwell where it pleaseth thee.ಅಬೀಮೆಲೆಕನು--ಇಗೋ, ನನ್ನ ದೇಶವು ನಿನ್ನ ಮುಂದೆ ಇದೆ; ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು ಅಂದನು.
16 And to Sarah he said, Behold, I have given thy brother a thousand pieces of silver: behold, he is to thee a covering of the eyes, to all that are with thee, and with all other: thus she was reproved.ಸಾರಳಿಗೆ--ಇಗೋ, ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣ ಕೊಟ್ಟಿದ್ದೇನೆ; ನಿನ್ನ ಸಂಗಡ ಇರುವವರೆಲ್ಲರಿಗಾಗಿಯೂ ಉಳಿದವರೆ ಲ್ಲರಿಗಾಗಿಯೂ ಇವನು ನಿನಗೆ ಕಣ್ಣಿನ ಮುಸುಕಿನಂತೆ ಇರಲಿ ಅಂದನು. ಹೀಗೆ ಆಕೆಯು ಗದರಿಸಲ್ಪಟ್ಟಳು.
17 So Abraham prayed to God: and God healed Abimelech, and his wife, and his maid-servants, and they bore children.ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆ ಮಾಡಿದ್ದರಿಂದ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಅವನ ದಾಸಿಯರನ್ನೂ ವಾಸಿಮಾಡಿ ದನು; ಆದದರಿಂದ ಅವರಿಗೆ ಮಕ್ಕಳಾದರು.
18 For the LORD had made barren all the females of the house of Abimelech, because of Sarah, Abraham's wife.ಕರ್ತನು ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರೂ ಬಂಜೆಯರಾಗುವಂತೆ ಮಾಡಿದ್ದನು.
Kannada Bible